ಇಟಲಿಯಲ್ಲಿ ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ

1 Min Read

ರೋಮ್‌: ಇಟಲಿಯ (Italy) ಬರ್ಗಾಮೊ ಪ್ರಾಂತ್ಯದ ಕೊವೊದಲ್ಲಿ ಇಬ್ಬರು ಭಾರತೀಯರನ್ನು (Indians) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕೊವೊ ನಿವಾಸಿ ರಾಗಿಂದರ್ ಸಿಂಗ್ (48) ಮತ್ತು ಅಗ್ನಾಡೆಲ್ಲೊ ನಿವಾಸಿ ಗುರ್ಮಿತ್ ಸಿಂಗ್ (48) ಗುಂಡೇಟಿಗೆ ಬಲಿಯಾಗಿದ್ದಾರೆ. ವೈಶಾಖಿ ಹಬ್ಬದ ಸಂದರ್ಭದಲ್ಲಿ ಪೂಜಾ ಸ್ಥಳವಾಗಿ ಬಳಸಲಾಗುತ್ತಿದ್ದ ಗೋದಾಮಿನಿಂದ ಹೊರಬರುತ್ತಿದ್ದಾಗ ಇಬ್ಬರಿಗೂ ಗುಂಡು ಹಾರಿಸಲಾಯಿತು. ಇದನ್ನೂ ಓದಿ: ಹಾರ್ಮುಜ್‌ ಜಲಸಂಧಿ ಮತ್ತೆ ಬಂದ್‌ – ಭಾರತಕ್ಕೆ ತೆರಳುತ್ತಿದ್ದ 14 ಹಡಗುಗಳಿಗೆ ಇರಾನ್‌ ತಡೆ

ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ಕೌರ್ ಜಿ ಮುಂಭಾಗದ ಚೌಕದಲ್ಲಿ ಈ ಕೃತ್ಯ ನಡೆದಿದೆ.

ಗುಂಡು ಹಾರಿಸಿ ಪರಾರಿಯಾದ ವ್ಯಕ್ತಿ ಒಬ್ಬ ಭಾರತೀಯ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಆರೋಪಿತ ಕೂಡ ಗುರುದ್ವಾರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಕೀವ್‌ನ ಸೂಪರ್‌ಮಾರ್ಕೆಟ್‌ನಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ – 6 ಮಂದಿ ಸಾವು

Share This Article