– ಶರಣಾಗದಿದ್ರೆ ನಿಮಗೆ ಉಳಿಗಾಲವಿಲ್ಲ; ಟಿಎಂಸಿ ಗೂಂಡಾಗಳಿಗೆ ಕೊನೇ ವಾರ್ನಿಂಗ್
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ (Congress) ಜೊತೆಗೆ ಸೇರಿ ಪಿತೂರಿ ಮಾಡಿದೆ. ಈ ಮೂಲಕ ಬಂಗಾಳದ ಮಹಿಳೆಯರಿಗೆ ದ್ರೋಹ ಬಗೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಂಕುರಾದಲ್ಲಿ ನಡೆದ ಚುನಾವಣಾ (Bengal Polls) ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಸಂಸತ್ತಿನಲ್ಲಿ ನೋಡಿದ್ದೀರಿ, ಟಿಎಂಸಿ ಮತ್ತೊಮ್ಮೆ ಬಂಗಾಳದ ಮಹಿಳೆಯರಿಗೆ ದ್ರೋಹ ಬಗೆದಿದೆ. ನುಸುಳುಕೋರರ ಲಾಭಕ್ಕಾಗಿ ಕಾನೂನು ಮತ್ತು ನಿಯಮಗಳನ್ನ ಪದೇ ಪದೇ ಮುರಿತುವ ಅದೇ ಟಿಎಂಸಿ ಇದು. ಧರ್ಮ ಆಧಾರಿತ ಮೀಸಲಾತಿಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿರುವ ಪಕ್ಷವೂ ಇದೇ ಆಗಿದೆ. ಹಾಗೇ ಮಾಡೋದ್ರಿಂದ, ಸಂವಿಧಾನದ ಚೈತನ್ಯ ದುರ್ಬಲಗೊಳ್ಳುತ್ತದೆ ಎಂದು ಎಚ್ಚರಿಸಿದ್ರು.
ಲೋಕಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನಿರಾಕರಿಸಲು ಟಿಎಂಸಿ ಕಾಂಗ್ರೆಸ್ ಜೊತೆಗೆ ಪಿತೂರಿ ನಡೆಸುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ಈ ಪಕ್ಷವನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಇವರಿಗೆ ಅಧಿಕಾರ ಒಂದೇ ಕುಟುಂಬದ ಕೈಯಲ್ಲಿರಬೇಕು, ಹೆಣ್ಣುಮಕ್ಕಳು ಅಳುತ್ತಿದ್ದರೆ ಕಾಂಗ್ರೆಸ್, ಮಿತ್ರಪಕ್ಷಗಳು ಹಬ್ಬ ಮಾಡುತ್ತಿವೆ: ಮೋದಿ ಆಕ್ರೋಶ
ಟಿಎಂಸಿ ಗೂಂಡಾಗಳಿಗೆ ಕಡೇ ವಾರ್ನಿಂಗ್
ಮುಂಬರುವ ಬಂಗಾಳದ ಚುನಾವಣೆ ಹೊಸ ಇತಿಹಾಸ ಸೃಷ್ಟಿಸಲಿದೆ. ಟಿಎಂಸಿ ನಾಯಕರು ಬಳಸುತ್ತಿರುವ ಭಾಷೆಗಳನ್ನ ನೋಡಿದ್ರೆ ಫಲಿತಾಂಶದ ಬಗ್ಗೆ ಅವರಿಗೆ ಇರುವ ಭಯವನ್ನು ತೋರಿಸುತ್ತದೆ. ನಾನು ಎಲ್ಲಾ ಟಿಎಂಸಿ ಗೂಂಡಾಗಳು, ಸಿಂಡಿಕೇಟ್‌ಗಳು ಮತ್ತು ಭ್ರಷ್ಟರಿಗೆ ಕೊನೇ ಅವಕಾಶ ನೀಡುತ್ತಿದ್ದೇನೆ. ಏಪ್ರಿಲ್ 29 ಕ್ಕೂ ಮೊದಲು ನಿಮ್ಮ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಶರಣಾಗಿ, ಮೇ 4 ರ ನಂತರ ಯಾರಿಗೂ ಉಳಿಗಾಲ ಇರೋದಿಲ್ಲ ಎಂದು ಕಡೆಯ ಎಚ್ಚರಿಕೆ ನೀಡಿದರು.
ಮುಂದುವರಿದು.. ಬಿಷ್ಣುಪುರದ ಮಾಫಿಯಾ ಮತ್ತು ಟಿಎಂಸಿ ಗೂಂಡಾಗಳೇ ಎಚ್ಚರಿಕೆಯಿಂದ ಆಲಿಸಿ, ನೀವು ಶರಣಾಗದಿದ್ದರೆ, ಮುಂದೆ ಉಳಿಗಾಲವಿಲ್ಲ. ಏಕೆಂದ್ರೆ ನಿಮ್ಮ ಯಾವುದೇ ಆಟಗಳನ್ನು ನಮ್ಮ ಸರ್ಕಾರ ಸಹಿಸಲ್ಲ ಎಂದು ಮೋದಿ ವಾರ್ನಿಂಗ್ ಕೊಟ್ಟರು. ಇದನ್ನೂ ಓದಿ: ಕಾಂಗ್ರೆಸ್ ಮಿತ್ರ ಪಕ್ಷಗಳಿಂದ ಭ್ರೂಣ ಹತ್ಯೆ – ದೇಶದ ಮಹಿಳೆಯರಲ್ಲಿ ಕ್ಷಮೆ ಕೇಳಿದ ಮೋದಿ
ಟಿಎಂಸಿ ಬುಡಕಟ್ಟು ಸಮುದಾಯವನ್ನ ದ್ವೇಷಿಸುತ್ತೆ, ಅವಮಾನಿಸುತ್ತೆ
ಮುಂದುವರಿದು ವಾಗ್ದಾಳಿ ನಡೆಸಿದ ಮೋದಿ, ಟಿಎಂಸಿ ಬುಡಕಟ್ಟು ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನ ದ್ವೇಷಿಸುತ್ತದೆ. ನಾವು ಬುಡಕಟ್ಟು ಸಮುದಾಯವನ್ನ ಸಬಲೀಕರಣಗೊಳಿಸಲು ಬಯಸುತ್ತೇವೆ. ಅದಕ್ಕಾಗಿಯೇ ಬಿಜೆಪಿ ದೇಶಕ್ಕೆ ತನ್ನ ಮೊದಲ ಬುಡಕಟ್ಟು ಮಹಿಳಾ ಅಧ್ಯಕ್ಷೆಯನ್ನ ನೀಡಿತು. ಆದರೆ ಟಿಎಂಸಿ ಬುಡಕಟ್ಟು ಸಮುದಾಯವನ್ನು ಅವಮಾನಿಸುತ್ತದೆ. ಭಾರತದ ರಾಷ್ಟ್ರಪತಿ ಬುಡಕಟ್ಟು ಸಮುದಾಯದವರಾಗಬೇಕೆಂದು ಎಂದಿಗೂ ಬಯಸಲಿಲ್ಲ. ಇಂದು, ಇಡೀ ಜಗತ್ತು ರಾಷ್ಟ್ರಪತಿ ಮುರ್ಮು ಅವರನ್ನ ಗೌರವಿಸುತ್ತದೆ, ಆದರೆ ಬುಡಕಟ್ಟು ವಿರೋಧಿ ಟಿಎಂಸಿ ಅವರನ್ನ ಅವಮಾನಿಸುತ್ತದೆ ಎಂದು ತಿವಿದರು. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮತ್ತೆ ಬಂದ್ – ಭಾರತಕ್ಕೆ ತೆರಳುತ್ತಿದ್ದ 14 ಹಡಗುಗಳಿಗೆ ಇರಾನ್ ತಡೆ



