– ಮಂಗಳವಾರ ಮುಖ್ಯಮಂತ್ರಿಗಳಿಂದ ನೇಮಕಾತಿ ಪತ್ರ ವಿತರಣೆ
ಚಾಮರಾಜನಗರ: ಕೊರೊನಾ ವೇಳೆ ಆಕ್ಸಿಜನ್ ದುರಂತದಲ್ಲಿ (Chamarajanagar Oxygen Disaster) ಮೃತಪಟ್ಟ ಸಂತ್ರಸ್ತರ ಕುಟುಂಬಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. 21 ಮಂದಿಗೆ ಸರ್ಕಾರಿ ಕೆಲಸ ಘೋಷಣೆ ಮಾಡಿದ್ದು, ಮಂಗಳವಾರ (ಏ.21) ಸಿಎಂ ಸಿದ್ದರಾಮಯ್ಯ (Siddaramaiah) ಅವರು ನೇಮಕಾತಿ ಆದೇಶ ಪತ್ರ ವಿತರಿಸಲಿದ್ದಾರೆ.
ಹೌದು. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ಅವಧಿಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ವೇಳೆ 36 ಜನರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು. ಇದನ್ನೂ ಓದಿ: ಕಲಬುರಗಿ| ವಾಹನ ಡಿಕ್ಕಿ ಹೊಡೆದು ಪೊಲೀಸ್ ಕಾನ್‌ಸ್ಟೆಬಲ್ ಸಾವು
ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ (Government Job) ಕೊಡುವಂತೆ ಅಂದಿನಿಂದಲೂ ಹೋರಾಟ ಮಾಡಲಾಗುತ್ತಿತ್ತು. ಇದೀಗ ಸಂತ್ರಸ್ತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಏ.21 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ 21 ಕ್ಕೂ ಹೆಚ್ಚು ಮಂದಿಗೆ ಸರ್ಕಾರಿ ಕೆಲಸದ ಆದೇಶ ಪತ್ರ ವಿತರಿಸಲಿದ್ದಾರೆ.
ಸರ್ಕಾರಿ ಕೆಲಸ ಸಿಗುವ ಸಂತಸದಲ್ಲಿರುವ ದೊಡ್ಡಯ್ಯ ಕುಟುಂಬ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಸಂತಸ ಹಂಚಿಕೊಂಡಿದೆ. ಅಲ್ಲದೇ ಗಂಡನನ್ನು ಕಳೆದುಕೊಂಡು ಜೀವನ ನಡೆಸಲು ಪರದಾಡಿದ್ದು ಮಗನನ್ನು ಓದಿಸಲು ಕಷ್ಟಪಟ್ಟ ಬಗ್ಗೆ ನೆನೆದು ಕಣ್ಣೀರು ಸುರಿಸಿದ್ದಾರೆ. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ – ನಾಲ್ವರು ದುರ್ಮರಣ


