2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ

1 Min Read

– ಧುರಂಧರ್‌ 2 ಸಕ್ಸಸ್‌ ಸಂಭ್ರಮದಲ್ಲಿರೋ ರಣವೀರ್‌ಗೆ ಮತ್ತೊಂದು ಗುಡ್‌ ನ್ಯೂಸ್‌

ಬಾಲಿವುಡ್‌ ಸ್ಟಾರ್‌ ಜೋಡಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್‌ ಸಿಂಗ್‌ (Ranveer Singh) ತಮ್ಮ ಫ್ಯಾನ್ಸ್‌ ಜೊತೆ ಮತ್ತೊಂದು ಗುಡ್‌ ನ್ಯೂಸ್‌ ಹಂಚಿಕೊಂಡಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆಂದು ದಂಪತಿ ಘೋಷಿಸಿಕೊಂಡಿದ್ದಾರೆ.

ದೀಪಿಕಾ-ರಣವೀರ್‌ ದಂಪತಿ ತಮ್ಮ ಮಗಳು ದುವಾ (Dua), ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್‌ ಹಿಡಿದಿರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆಂದು ಹೇಳಿಕೊಂಡಿದ್ದಾರೆ. ಸ್ಟಾರ್‌ ಜೋಡಿಗೆ ಅಭಿಮಾನಿಗಳು ಮತ್ತು ಹಿತೈಷಿಗಳು ವಿಶ್‌ ಮಾಡಿ ಕಾಮೆಂಟ್‌ ಹಾಕುತ್ತಿದ್ದಾರೆ. ಇದನ್ನೂ ಓದಿ: ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?

ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದ ದೀಪಿಕಾ ಮತ್ತು ರಣವೀರ್ 2018 ರಲ್ಲಿ ಇಟಲಿಯಲ್ಲಿ ವಿವಾಹವಾದರು. 2024ರ ಸೆಪ್ಟೆಂಬರ್ 8 ರಂದು ದೀಪಿಕಾ ಮತ್ತು ರಣವೀರ್ ತಮ್ಮ ಮೊದಲ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಬಾಲಿವುಡ್ ದಂಪತಿ ತಮ್ಮ ಮಗಳಿಗೆ ದುವಾ ಎಂದು ಮುದ್ದಾದ ಹೆಸರಿಟ್ಟರು.

ರಣವೀರ್ ಸಿಂಗ್ ಪ್ರಸ್ತುತ ಧುರಂಧರ್ 2 ರ ಯಶಸ್ಸನ್ನು ಆನಂದಿಸುತ್ತಿದ್ದಾರೆ.‌ ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಗಲ್ಲಾಪೆಟ್ಟಿಗೆಯಲ್ಲೂ ದಾಖಲೆಯನ್ನು ಬರೆದಿದೆ. ಈ ಸಂತೋಷದ ನಡುವೆ ದಂಪತಿ ಮತ್ತೊಂದು ಸಿಹಿ ಸುದ್ದಿಯನ್ನು ಫ್ಯಾನ್ಸ್‌ ಜೊತೆ ಶೇರ್‌ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ

ದೀಪಿಕಾ ಕೈಯಲ್ಲೂ ಸಾಕಷ್ಟು ಸಿನಿಮಾಗಳಿವೆ. ಮುಂದೆ ಸಿದ್ಧಾರ್ಥ್ ಆನಂದ್ ಅವರ ಕಿಂಗ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸಲಿದ್ದಾರೆ. ಅಟ್ಲೀ ಅವರ AA22xA6 ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಲು ದೀಪಿಕಾ ಸಜ್ಜಾಗಿದ್ದಾರೆ.

Share This Article