ನಾನು ಸಹ ಕೆಟ್ಟ ಸಂಬಂಧ ಹೊಂದಿದ್ದೆ ಎಂದ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ

Advertisements

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮಗಳು ಆಲಿಯಾ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗಲೇ ಇರುತ್ತಾರೆ. ತಮ್ಮ ಬೋಲ್ಡ್ ಮಾತುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಆಲಿಯಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಾನು ಸಹ ಕೆಟ್ಟ ಸಂಬಂಧ ಹೊಂದಿದ್ದೆ ಎಂದು ಶಾಕಿಂಗ್ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ.

Advertisements

ಬಿಟೌನ್ ನಟ ಕಮ್ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಶ್ಯಪ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಯೂಟ್ಯೂಬರ್ ಆಗಿ ಕೂಡ ಗುರುತಿಸಿಕೊಂಡಿದ್ದಾರೆ. ಇತ್ತಿಚೆಗಷ್ಟೇ `ಗರ್ಲ್ ಟಾಕ್ ಎಪಿಸೋಡ್ 5′ ಕುರಿತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದೀಗ ಈ ಕುರಿತು ಬಳಕೆದಾರರು ಹಲವಾರು ಪ್ರಶ್ನೆ ಕೇಳಿದ್ದಾರೆ. ನೀವು ಯಾವಾಗಲಾದರೂ ಕೆಟ್ಟ ಸಂಬಂಧ ಹೊಂದಿದ್ದೀರಾ ಎಂದು ನಟಿಗೆ ಕೇಳಿದ್ದಾರೆ.

Advertisements

ನಾನು ಸಹ ಕೆಟ್ಟ ಸಂಬಂಧವನ್ನು ಹೊಂದಿದ್ದೇನೆ ಮತ್ತು ನಾನು ಅದರ ಬಗ್ಗೆ ಸುಳ್ಳು ಹೇಳಲು ಹೋಗುವುದಿಲ್ಲ. ಆದರಿಂದ ಹೊರಬರುವುದು ಸುಲಭ ವಿಷಯವಲ್ಲ, ವಿಶೇಷವಾಗಿ ನೀವು ಸ್ವಲ್ಪ ಸಮಯದವರೆಗೆ ಒಟ್ಟಿಗೆ ಇದ್ದರೆ ಬೇರೆಯಾಗುವುದು ತುಂಬಾ ಕಷ್ಟಕರವಾಗುತ್ತದೆ ಎಂದಿದ್ದಾರೆ. ನೀವು ಏನು ಮಾಡಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ನೀವು ಯಾವಾಗಲೂ ನಿಮ್ಮನ್ನು ಮೊದಲ ಸ್ಥಾನದಲ್ಲಿರಿಸಬೇಕು. ಸಂಬಂಧಗಳಿಂದ ನಿಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತಿದೆ, ಅದು ನಿಮ್ಮ ಮೇಲೆ ಬಲವಾಗಿ ಪರಿಣಾಮ ಬೀರುತ್ತಿದೆ ಎಂದು ತಿಳಿದೊಡನೆ ಅದರಿಂದ ಹೊರಬರುವುದು ಮುಖ್ಯವಾಗಿದೆ ಎಂದು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:8 ಎಕರೆ ಜಮೀನಿನಲ್ಲಿ ಅನುಷ್ಕಾ-ವಿರಾಟ್ ಫಾರ್ಮ್ ಹೌಸ್: ದುಡ್ಡಿದ್ದೋರ ದುನಿಯಾ ಎಂದ ಫ್ಯಾನ್ಸ್

Advertisements

ಆಲಿಯಾ. ಆಲಿಯಾ ಮತ್ತು ಶೇನ್ ಗ್ರೆಗೊಯಿರ್ ಪ್ರಸ್ತುತ ಡೇಟಿಂಗ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಸ್ಟಾರ್ ಯಂಗ್ ಸ್ಟಾರ್ ಆಗಾಗ ತನ್ನ ಬಾಯ್‌ಫ್ರೆಂಡ್ ಜತೆಗಿರುವ ಫೋಟೋ ಶೇರ್ ಮಾಡುತ್ತಾರೆ.

Live Tv

Advertisements
Exit mobile version