ನವದೆಹಲಿ: ಟೀಂ ಇಂಡಿಯಾ ತಂಡದಲ್ಲಿ ಆಟಗಾರರು ಬದಲಾದರು, ಕ್ರೀಡಾಂಗಣ ಬದಲಾದರೂ ವಿಶ್ವ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮನ್ನು ಸೋಲಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಮ್ಯಾಂಚೆಸ್ಟರ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್ (ಡಕ್ವರ್ಥ್ ಲೂಯಿಸ್ ನಿಯಮ) ಅಂತರದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿರುವುದಕ್ಕೆ ಭಾರತದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊಹ್ಲಿ ಸೇನೆಯ ಈ ಗೆಲುವಿಗೆ ರಾಜಕೀಯ, ಸಿನಿಮಾ, ಕೀಡಾ ರಂಗದ ಹಲವು ದಿಗ್ಗಜರು ಶುಭ ಕೋರಿದ್ದಾರೆ.
Advertisement
Advertisement
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಟೀಂ ಇಂಡಿಯಾಗೆ ಶುಭ ಕೋರಿದ್ದು, ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಮಾಡಿರುವ ಮತ್ತೊಂದು ಸ್ಟ್ರೈಕ್ ಎಂದು ಬಣ್ಣಿಸುವ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೆ ಕೇಂದ್ರ ಸಚಿವರಾದ ರಾಜ್‍ನಾಥ್ ಸಿಂಗ್, ನಿತಿನ್ ಗಡ್ಕರಿ, ಕಿರಣ್ ರಿಜಿಜು, ಮಾಜಿ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ರಾಜವರ್ಧನ್ ಸಿಂಗ್ ರಾಥೋಡ್ ಸೇರಿದಂತೆ ಹಲವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಪಾಕ್ ತತ್ತರ
Advertisement
Another strike on Pakistan by #TeamIndia and the result is same.
Congratulations to the entire team for this superb performance.
Every Indian is feeling proud and celebrating this impressive win. #INDvPAK pic.twitter.com/XDGuG3OiyK
— Amit Shah (@AmitShah) June 16, 2019
Advertisement
ಟ್ವೀಟ್‍ನಲ್ಲೇನಿದೆ?:
‘ಪಾಕಿಸ್ತಾನದ ಮೇಲೆ ಟೀಂ ಇಂಡಿಯಾ ಮಾಡಿದ ಮತ್ತೊಂದು ಸ್ಟ್ರೈಕ್. ಫಲಿತಾಂಶ ಒಂದೇ ಆಗಿದೆ. ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಅಭಿನಂದನೆ. ಈ ಗೆಲುವಿನಿಂದ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುತ್ತಾರೆ. ಗೆಲುವನ್ನು ಸಂಭ್ರಮದೊಂದಿಗೆ ಸ್ವೀಕರಿಸುತ್ತೇವೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
Well played team India. Congratulations for spectacular win. Jai Hind! #teamblue #indvspak #CWC19
— Nitin Gadkari (@nitin_gadkari) June 16, 2019
‘ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಅದ್ಭುತ ವಿಜಯ ಪಡೆದ ಟೀಂ ಇಂಡಿಯಾಗೆ ಅಭಿನಂದನೆ. ಜೈ ಹಿಂದ್’ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
‘ರನ್ ಮಳೆ, ಅಂತಿಮವಾಗಿ ನಮ್ಮದೆ 7-0 ಅಧಿಪತ್ಯ. ಜೈಹಿಂದ್ ಎಂದು ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ಎಂಪಿ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.
Runs, Rain and total domination.. It’s #7-0 ???????? Jai hind.
— Gautam Gambhir (@GautamGambhir) June 16, 2019