Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅನಾಮಿಕ ಉಜಿರೆಯ ವ್ಯಕ್ತಿಯ ಮನೆಯಲ್ಲಿ ಉಳಿಯುತ್ತಿದ್ದಾನೆ, ನಿಮ್ಮ ವಶಕ್ಕೆ ಪಡೆಯಿರಿ: SITಗೆ ಮನವಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಅನಾಮಿಕ ಉಜಿರೆಯ ವ್ಯಕ್ತಿಯ ಮನೆಯಲ್ಲಿ ಉಳಿಯುತ್ತಿದ್ದಾನೆ, ನಿಮ್ಮ ವಶಕ್ಕೆ ಪಡೆಯಿರಿ: SITಗೆ ಮನವಿ

Dakshina Kannada

ಅನಾಮಿಕ ಉಜಿರೆಯ ವ್ಯಕ್ತಿಯ ಮನೆಯಲ್ಲಿ ಉಳಿಯುತ್ತಿದ್ದಾನೆ, ನಿಮ್ಮ ವಶಕ್ಕೆ ಪಡೆಯಿರಿ: SITಗೆ ಮನವಿ

Public TV
Last updated: August 7, 2025 12:17 pm
Public TV
Share
3 Min Read
Dharmasthala Mass Burial Case 6 locals likely to come forward on behalf of the witness
SHARE

-ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅವಕಾಶ ಪಡೆದುಕೊಂಡಿರುವ ದೂರುದಾರ

ಮಂಗಳೂರು:
ಧರ್ಮಸ್ಥಳದಲ್ಲಿ (Dharmastala) ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರ ವ್ಯಕ್ತಿಯನ್ನು ಎಸ್‌ಐಟಿ (SIT) ತಮ್ಮ ವಶದಲ್ಲಿಯೇ ಇರಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ನಿವಾಸಿ ಶ್ಯಾಮ ಸುಂದರ ಅವರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಎಸ್‌ಐಟಿಗೆ ಪತ್ರ ಬರೆದಿರುವ ಅವರು, ಅನಾಮಿಕ ವ್ಯಕ್ತಿ 13 ಸ್ಥಳಗಳನ್ನು ಈಗಾಗಲೇ ತೋರಿಸಿದ್ದಾನೆ. ಆತ ಗುರುತಿಸಿದ 12 ಸ್ಥಳಗಳಲ್ಲಿ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ಆರಂಭದಲ್ಲಿ ಅನಾಮಿಕ ವ್ಯಕ್ತಿ ತನ್ನ ವಕೀಲರ ಜೊತೆ ಮಂಗಳೂರಿನ (Mangaluru) ರೂಮ್‌ವೊಂದರಲ್ಲಿ ನೆಲೆಸಿರುವ ಬಗ್ಗೆ ಮಾಹಿತಿಯಿತ್ತು. ಆದರೆ ಕೆಲ ದಿನಗಳಿಂದ ಈ ಅನಾಮಿಕ ವ್ಯಕ್ತಿ ಉಜಿರೆಯ (Ujire) ಖಾಸಗಿ ವ್ಯಕ್ತಿಯೋರ್ವನ ಮನೆಯಲ್ಲಿ ಉಳಿದುಕೊಳ್ಳುವ ಬಗ್ಗೆ ಮಾಹಿತಿಯಿದೆ. ಇಷ್ಟು ಗಂಭೀರ ಪ್ರಕರಣದಲ್ಲಿ ಅನಾಮಿಕನನ್ನು ಎಸ್‌ಐಟಿ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳಬೇಕಿತ್ತು. ಆದರೆ ವಕೀಲರು, ಖಾಸಗಿ ವ್ಯಕ್ತಿಗಳ ಬಳಿ ಬಿಟ್ಟರೆ ನಿಷ್ಪಕ್ಷಪಾತ ತನಿಖೆ ಹೇಗೆ ನಡೆಯಲು ಸಾಧ್ಯ? ಹೀಗಾಗಿ ಅನಾಮಿಕ ವ್ಯಕ್ತಿಯನ್ನು ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳಬೇಕು. ಜೊತೆಗೆ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಕೆ ಸುಧಾಕರ್‌ ಹೆಸರು ಬರೆದು ಕಾರು ಚಾಲಕ ಆತ್ಮಹತ್ಯೆ

ಮನವಿ ಪತ್ರಕ್ಕೆ ಎಸ್‌ಐಟಿ ಪತ್ರಿಕ್ರಿಯಿಸಿದ್ದು, ನಿಮ್ಮ ಅರ್ಜಿಯನ್ನು ಸ್ವೀಕರಿಸಿ ಪರಿಶೀಲಿಸುತ್ತೇವೆ. ಯಾವುದೇ ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಅಥವಾ ದೂರನ್ನು ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು ಎಂದು ಉಲ್ಲೇಖಿಸಿದೆ

ದೂರಿನಲ್ಲಿ ಏನಿದೆ?
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಬಹಳಷ್ಟು ಕೊಲೆಗಳು ನಡೆದಿದ್ದು, ಸದರಿ ಪ್ರಕರಣಗಳಲ್ಲಿ ತಾನು ಕಳೇಬರೆಗಳನ್ನು ಹೂತಿರುತ್ತೇನೆ ಎಂದು ಅನಾಮಿಕ ವ್ಯಕ್ತಿಯೋರ್ವನು ಅಪಾದಿಸಿದಂತೆ ಮಾನ್ಯ ಸರ್ಕಾರದ ನಿರ್ದೇಶನದಲ್ಲಿ ರಚಿಸಲ್ಪಟ್ಟಿರುವ ವಿಶೇಷ ತನಿಖಾ ದಳವು ಅತ್ಯಂತ ಉತ್ತಮ ರೀತಿಯಲ್ಲಿ ಪಾರದರ್ಶಕವಾಗಿ ತನಿಖೆಯನ್ನು ಮಾಡುತ್ತಿದೆ. ಈ ಬಗ್ಗೆ ನಮ್ಮ ಅಭಿಮಾನಗಳನ್ನು ಸಲ್ಲಿಸುತ್ತಿದ್ದೇವೆ.

ಮೃತ ವ್ಯಕ್ತಿಗಳ ಕಳೇಬರಗಳನ್ನು ತಾನು ತೋರಿಸುವುದಾಗಿ ಹೇಳಿ ಅನಾಮಿಕ ವ್ಯಕ್ತಿಯು 13 ಸ್ಥಳಗಳನ್ನು ತೋರಿಸಿದ್ದು, ಮಾನ್ಯರಾದ ತಾವು ಈಗಾಗಲೇ 12 ಸ್ಥಳಗಳನ್ನು ತನಿಖೆಗೆ ಒಳಪಡಿಸಿರುತ್ತೀರಿ. ಹೀಗಿರುವಲ್ಲಿ ತಮಗೆ ಸ್ಥಳವನ್ನು ತೋರಿಸುತ್ತಿರುವ ಅನಾಮಿಕ ವ್ಯಕ್ತಿಯು ಪ್ರತಿನಿತ್ಯ ವಕೀಲರುಗಳು ಎಂದು ಕರೆಯಲ್ಪಡುವ ವ್ಯಕ್ತಿಗಳ ಜೊತೆ ಬರುತ್ತಿದ್ದು, ಅವರ ಜೊತೆ ಮಂಗಳೂರಿನಲ್ಲಿ ಹೋಗಿ ರೂಮ್‌ನಲ್ಲಿ ನೆಲೆಸುತ್ತಿದ್ದಾರೆ ಎಂದು ಮಾಧ್ಯಮಗಳಿಂದ ನಮಗೆ ತಿಳಿದುಬಂದಿರುತ್ತದೆ. ಅದಲ್ಲದೇ ಇತ್ತೀಚಿನ ಕೆಲವು ದಿನಗಳ ಹಿಂದೆ ಈ ಅನಾಮಿಕ ವ್ಯಕ್ತಿಯು ಉಜಿರೆಯಲ್ಲಿ ಖಾಸಗಿ ವ್ಯಕ್ತಿಯ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ನಮಗೆ ಮಾಧ್ಯಮಗಳಿಂದ ತಿಳಿದುಬಂದಿರುತ್ತದೆ.

ಇಷ್ಟು ಗಂಭೀರ ಪ್ರಕರಣದಲ್ಲಿ ಮಾಹಿತಿದಾರನಾದ ಅನಾಮಿಕನನ್ನು ತಮ್ಮ ಸುಪರ್ದಿಗೆಯಲ್ಲಿ ಇಡದೆ, ವಕೀಲರುಗಳ ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಬಿಟ್ಟರೆ ನಿಷ್ಪಕ್ಷಪಾತವಾದ ತನಿಖೆಯು ಹೀಗೆ ನಡೆಯಲು ಸಾಧ್ಯ? ಆದುದರಿಂದ ದೂರುದಾರ ಅನಾಮಿಕ ವ್ಯಕ್ತಿಯನ್ನು ತಮ್ಮ ಸುಪರ್ದಿಯಲ್ಲಿಯೇ ಇರಿಸಿಕೊಂಡು ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆಯನ್ನು ತಾವು ಮಾಡಬೇಕೆಂದು ಈ ಮೂಲಕ ನಾವು ಪ್ರಾರ್ಥಿಸುತ್ತಿದ್ದೇವೆ.ಇದನ್ನೂ ಓದಿ: ‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ

– ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅವಕಾಶದಡಿಯಲ್ಲಿರುವ ದೂರುದಾರ 
ಅನಾಮಿಕ ದೂರುದಾರ ವ್ಯಕ್ತಿ ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಜಿಲ್ಲಾ ನ್ಯಾಯಾಧೀಶರ ಕಮಿಟಿಯೂ ಕೂಡ ಈ ಅವಕಾಶವನ್ನು ಅಪ್ರೂವ್ ಮಾಡಿದೆ. ಈ ಅವಕಾಶದಡಿ ದೂರುದಾರ ಎಲ್ಲಿ ಬೇಕಾದರೂ ಉಳಿದುಕೊಳ್ಳಬಹುದು. ಫೋನ್ ಬಳಕೆ ಮಾಡಬಹುದು, ಯಾರನ್ನು ಬೇಕಾದರೂ ಭೇಟಿಯಾಗಬಹುದು. ದೂರುದಾರನಿಗೆ ನಾಲ್ಕು ಮಂದಿ ಪೊಲೀಸರ ಭದ್ರತೆ ನೀಡಲಾಗಿದ್ದು, ಫೋನ್ ಡಿಟೇಲ್ಸ್‌ ಮತ್ತು ಭೇಟಿಯಾದವರ ಎಲ್ಲಾ ದಾಖಲೆಯನ್ನು ಪೊಲೀಸರು ಮಾನಿಟರಿಂಗ್ ಮಾಡುತ್ತಿರುತ್ತಾರೆ

TAGGED:Anonymous Complainantdakshina kannadadharmasthalaDharmasthala Mass Burial Casesitಧರ್ಮಸ್ಥಳಶವಗಳ ಹೂತಿಟ್ಟ ಪ್ರಕರಣ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

BJP MLA Suresh Gowda
Districts

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತೆ: ಸುರೇಶ್‌ ಗೌಡ ಭವಿಷ್ಯ

Public TV
By Public TV
42 minutes ago
CET Exam Janiwara
Bengaluru City

CET Exam | ಜನಿವಾರ ತೆಗೆಸಿದ ಬೆಂಗಳೂರು ಕಾಲೇಜ್‌ – ಪೋಷಕರಿಂದ ದೂರು ದಾಖಲು

Public TV
By Public TV
2 hours ago
Amit Shah 3
Latest

West Bengal Election| 152ರ ಪೈಕಿ 110ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು -ಬಿಜೆಪಿಗೆ ಅಧಿಕಾರ: ಅಮಿತ್‌ ಶಾ ವಿಶ್ವಾಸ

Public TV
By Public TV
2 hours ago
Amit Shah 2
Latest

ಕ್ಷಮಿಸಿ, ಇನ್ನು 10 ನಿಮಿಷಗಳಲ್ಲಿ ತಲುಪುತ್ತೇನೆ: ಅಭಿಮಾನಿಯ ಮನವಿಗೆ ಅಮಿತ್‌ ಶಾ ಪ್ರತಿಕ್ರಿಯೆ

Public TV
By Public TV
3 hours ago
Mojtaba Khamenei
Latest

ಸುಟ್ಟು ಹೋಗಿದೆ ತುಟಿ, ಮುಖಕ್ಕೆ ಗಾಯ – ಶೀಘ್ರವೇ ಮೊಜ್ತಾಬಾ ಖಮೇನಿಗೆ ಪ್ಲಾಸ್ಟಿಕ್‌ ಸರ್ಜರಿ

Public TV
By Public TV
3 hours ago
PM Modi At Hooghly River 1
Latest

ಚುನಾವಣಾ ಭರಾಟೆಯ ಮಧ್ಯೆ ಹೂಗ್ಲಿ ನದಿಯಲ್ಲಿ ಪ್ರಧಾನಿ ಮೋದಿ ದೋಣಿ ವಿಹಾರ

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?