– ಕರ್ನಾಟಕದಲ್ಲಿ ಕೆಲಸ ಮಾಡಿರುವುದಕ್ಕೆ ಹೆಮ್ಮೆ ಇದೆ
– ಉಡುಪಿ, ಚಿಕ್ಕಮಗಳೂರು, ಕಾರ್ಕಳ ಮಂದಿಯನ್ನು ಹೆಚ್ಚು ಮಿಸ್ ಮಾಡ್ತೀನಿ
ಬೆಂಗಳೂರು: ಪೊಲೀಸ್ ಇಲಾಖೆಯವರದ್ದು ಹೆಚ್ಚು ಓತ್ತಡದ ಕೆಲಸ. ಹೀಗಾಗಿ ವೈಯಕ್ತಿಕ ವಿಚಾರಗಳಿಗೆ ಅಗತ್ಯ ಸಮಯ ಇರುವುದಿಲ್ಲ. ಒತ್ತಡದ ಕೆಲಸದಲ್ಲಿ ಬ್ರೇಕ್ ತೆಗೆದುಕೊಳ್ಳುವುದು ಅಗತ್ಯ. ಆದರೆ ಇಲ್ಲಿ ಬ್ರೇಕ್ ಸಿಗುವುದಿಲ್ಲ. ಹೀಗಾಗಿ ನಾನು ಕಳೆದ ಐದು ವರ್ಷದಲ್ಲಿ ಇಲ್ಲಿಯವರೆಗೂ ಕೇವಲ 21 ದಿನ ರಜೆ ತೆಗೆದುಕೊಂಡಿದ್ದೇನೆ ಅಷ್ಟೇ. ಎಲ್ಲರಿಗೆ ರಾಜಿನಾಮೆ ನೀಡುವಾಗ ಬೇಸರವಾಗಿರುತ್ತಾರೆ. ಆದರೆ ನಾನು ಸಂತೋಷವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.
Advertisement
ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂಬತ್ತು ವರ್ಷಗಳ ಕಾಲ ಹೆಮ್ಮೆಯಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಕರ್ನಾಟಕದಲ್ಲಿ ಕೆಲಸ ಮಾಡಿರುವುದಕ್ಕೆ ಹೆಮ್ಮೆ ಇದೆ. ಪೊಲೀಸ್ ಇಲಾಖೆಯಲ್ಲಿದ್ದ ಕಾರಣಕ್ಕೆ ವೈಯಕ್ತಿಕ ವಿಚಾರಗಳಿಗೆ ಅಗತ್ಯ ಸಮಯ ಇರಲಿಲ್ಲ. ಒತ್ತಡದ ಕೆಲಸದಲ್ಲಿ ಬ್ರೇಕ್ ತೆಗೆದುಕೊಳ್ಳುವುದು ಅಗತ್ಯ. ಆದರೆ ಇಲ್ಲಿ ಬ್ರೇಕ್ ಸಿಗುವುದಿಲ್ಲ. ಹೀಗಾಗಿ ನಾನು ಐದು ವರ್ಷದಲ್ಲಿ ಇಲ್ಲಿಯವರೆಗೂ ಕೇವಲ 21 ದಿನ ರಜೆ ತಗೊಂಡಿದ್ದೇನೆ ಅಷ್ಟೇ. ಹಾಗೆಯೇ ಸದ್ಯಕ್ಕೆ ರಾಜಕೀಯಕ್ಕೆ ಬರುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ:ರಾಜಕೀಯಕ್ಕೆ ಧುಮುಕಲು ಅಣ್ಣಾಮಲೈ ನಿವೃತ್ತಿ – ಐಪಿಎಸ್ ರೂಪಾ ಶುಭಾಶಯ
Advertisement
Advertisement
ಇಷ್ಟು ವರ್ಷಗಳ ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದರ ಬಗ್ಗೆ ನನಗೆ ಹೆಮ್ಮೆ ಇದೆ. ಕರ್ನಾಟಕದ ಜನತೆ ನನ್ನನ್ನು ಸ್ವೀಕರಿಸಿದ್ದಾರೆ. ಜನರಿಂದ ನಾನು ಹಲವು ವಿಚಾರಗಳನ್ನು ಕಲಿತಿದ್ದೇನೆ. ಜನರೇ ಕೆಲವೊಮ್ಮೆ ಸಲಹೆ ನೀಡಿ ನನ್ನನ್ನು ತಿದ್ದಿದ್ದಾರೆ. ನಮ್ಮ ರಾಜ್ಯದಲ್ಲಿ ಉತ್ತಮ ರಾಜಕೀಯ ವ್ಯಕ್ತಿಗಳಿದ್ದಾರೆ. ಅದರಲ್ಲೂ ರಾಜಕೀಯ ಜೀವನ ಅನ್ನೋದು ಕಷ್ಟ. ಅನೇಕ ರಾಜಕೀಯ ವ್ಯಕ್ತಿಗಳು ಪೊಲೀಸ್ ಇಲಾಖೆಗೆ ಹೆಚ್ಚು ಸಹಾಯ ಮಾಡಿದ್ದಾರೆ. ಅವರಿಂದ ನನಗೆ ಸಾಕಷ್ಟು ಒಳ್ಳೆ ಕೆಲಸ ಮಾಡಲು ಸಹಾಯವಾಗಿದೆ. ನನಗೆ ಯಾವ ರಾಜಕೀಯ ವ್ಯಕ್ತಿಯೂ ತೊಂದರೆ ನೀಡಿಲ್ಲ ಎಂದು ತಿಳಿಸಿದರು.
Advertisement
ಈ ವೇಳೆ ಆರಂಭದ ದಿನ ನೆನೆದ ಅಣ್ಣಾಮಲೈ ಅವರು, ನಾನು ಉಡುಪಿ, ಚಿಕ್ಕಮಗಳೂರು, ಕಾರ್ಕಳ ಮಂದಿಯನ್ನು ನಾನು ಹೆಚ್ಚು ಮಿಸ್ ಮಾಡುತ್ತೇನೆ. ಹತ್ತು ವರ್ಷಗಳ ಹಿಂದೆ ಉಡುಪಿ ಬಸ್ ನಿಲ್ದಾಣಕ್ಕೆ ಎರಡು ಬ್ಯಾಗ್ ಹಿಡಿದು ಬಂದವನು ನಾನು ಇಲ್ಲಿಯವರೆಗೂ ಬೆಳೆದೆ. ಜನ ನನಗೆ ಒಳ್ಳೆಯ ಗೌರವ ನೀಡಿ ಇಲ್ಲಿಯವರೆಗೂ ತಂದಿದ್ದಾರೆ ಇದಕ್ಕೆ ಹೆಮ್ಮೆ ಆಗುತ್ತಿದೆ. ಸದ್ಯ ನಾನು ಯಾವ ರಾಜಕೀಯ ವ್ಯಕ್ತಿ ಅಥವಾ ಪಕ್ಷದ ಜೊತೆ ಚರ್ಚಿಸಿಲ್ಲ. ಚಿಕ್ಕಮಗಳೂರಿನಲ್ಲಿದ್ದಾಗಲೇ ರಾಜೀನಾಮೆ ಬಗ್ಗೆ ಯೋಚಿಸಿದ್ದೆ. ಆದರೆ ಚುನಾವಣೆ ಹಿನ್ನಲೆ ಸರ್ಕಾರಕ್ಕೆ ತೊಂದರೆಯಾಗುತ್ತೆ ಅಂತ ಮೇ 27ರವರೆಗೂ ಕಾದು ಈಗ ರಾಜೀನಾಮೆ ನೀಡಿದ್ದೇನೆ. ನನಗೆ ಸ್ವಾತಂತ್ರ್ಯ ಬೇಕು ಹೀಗಾಗಿ ಈ ನಿರ್ಧಾರ ಮಾಡಿದ್ದೇನೆ. ಹೃದಯ ಏನು ಹೇಳುತ್ತೋ ಆ ಕೆಲಸ ಮಾಡಬೇಕು ಎಂದು ತಮ್ಮ ವೃತ್ತಿಯ ಪಯಣವನ್ನು ಹಂಚಿಕೊಂಡರು. ಇದನ್ನೂ ಓದಿ:ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ
ಮೊದಲು ನಾಲ್ಕು ತಿಂಗಳು ಬ್ರೇಕ್ ಪಡೆಯಲಿದ್ದೇನೆ. ಈಗಾಗಲೇ ನನ್ನಲ್ಲಿ ಸಾಕಷ್ಟು ಯೊಜನೆ ಇದೆ. ಸಾಮಾಜಿಕ ವಿಚಾರವಾಗಿ ಕೆಲಸ ಮಾಡಲಿದ್ದೇನೆ. ದೇಶದಲ್ಲಿ ಸಾಕಷ್ಟು ನಿರುದ್ಯೋಗ ಇದೆ. ಅದರ ಬಗ್ಗೆ ಗಮನ ಹರಿಸಬೇಕು ಎಂದರು. ಈ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ದಿವಂಗತ ಮಧುಕರ್ ಶೆಟ್ಟಿಯವರನ್ನು ಅಣ್ಣಮಲೈ ಅವರು ನೆನೆದರು. ನಿಮಗೇನು ಅನಿಸುತ್ತದೋ ಅದನ್ನು ಮಾಡಿ ಎಂದು ಮಧುಕರ್ ಅವರು ಹೇಳಿದ್ದರು. ಅದೇ ದಾರಿಯಲ್ಲಿ ಚಿಂತಿಸಿದ್ದೇನೆ ಎಂದರು.
ನನಗೆ ಇನ್ನು ಬೇರೆ ರಂಗದಲ್ಲಿ ಕೆಲಸ ಮಾಡುವ ಆಸಕ್ತಿ ಇದೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ಪೇದೆ ರೀತಿ ಕೆಲಸ ಮಾಡುವುದು ಕಷ್ಟ. ಅವರ ಕೆಲಸ ಮಾಡುವ ಶೈಲಿ ಹಾಗೂ ಅವರ ವೇತನದಲ್ಲಿ ಸಾಕಷ್ಟು ಬದಲಾವಣೆ ತರಬೇಕಿದೆ. ಅವರ ಶ್ರಮ ಇಲಾಖೆಯಲ್ಲಿ ಹೆಚ್ಚಿದೆ. ಅಷ್ಟೇ ಅಲ್ಲದೆ ಇಲಾಖೆಯಲ್ಲಿನ ದೊಡ್ಡ ಹುದ್ದೆಯಲ್ಲಿ ಅನೇಕ ಒಳ್ಳೆಯ ಅಧಿಕಾರಿಗಳಿದ್ದಾರೆ. ಆದರೆ ಇಲ್ಲಿ ಸರಿಯಾದ ಸಮಯಾವಕಾಶದ ಕೊರತೆ ಇದೆ. ಒಬ್ಬೊಬ್ಬ ಅಧಿಕಾರಿ ದಿನಕ್ಕೆ 15 ರಿಂದ 16 ಘಂಟೆ ಕೆಲಸ ಮಾಡಬೇಕು. ಅವರಿಗೆ ಶಿಫ್ಟ್ ರೀತಿಯ ಯೋಜನೆ ಅಗತ್ಯ ಇದೆ. ಸಂಬಳದ ಸಮಸ್ಯೆ ಇದೆ. ಇಲಾಖೆಯಲ್ಲಿ ಒಳ್ಳೆಯ ಸ್ಯಾಲರಿ ನೀಡಬೇಕು. ವೃತ್ತಿಯಲ್ಲಿ ಕೆಲಸ ಮಾಡುವವರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಾನು ರಾಜೀನಾಮೆ ನೀಡಿದಂತೆ ಎಲ್ಲರಿಗೂ ಈ ರೀತಿಯ ಆಯ್ಕೆ ಇರುವುದಿಲ್ಲ. ಕೆಲವರಿಗೆ ರಜೆ ಪಡೆಯಲೂ ಕಷ್ಟ ಆಗತ್ತದೆ. ಪ್ರಜಾಪ್ರಭುತ್ವ ಇನ್ನು ಚೆನ್ನಾಗಿರಬೇಕು. ಇದು 19ರ ಶತಮಾನವಲ್ಲ ನಾವು 2019ನೇ ವರ್ಷದಲ್ಲಿದ್ದೇವೆ. ಮನುಷ್ಯ ಮಲ್ಟಿ ಟಾಸ್ಕಿಂಗ್ ಮಾಡಬಹುದು. ಅದೇ ರೀತಿ ಒಂದು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಬೇರೆ ರಂಗದಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತೇನೆ ಎಂದು ಹೇಳಿದರು.