ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಸದ್ಯ ‘ರಾಮಾಯಣ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಭರಣ ಮಳಿಗೆಯೊಂದಕ್ಕೆ ನಟ ಚಾಲನೆ ನೀಡಿದ್ದಾರೆ. ಈ ವೇಳೆ, ರಣ್‌ಬೀರ್ ವೇದಿಕೆ ಮೇಲಿದ್ದಾಗ ಫೋಟೋಗ್ರಾಫರ್ ಅಶ್ಲೀಲ ಪದ ಬಳಸಿ ಮಾತನಾಡಿದ್ದು, ಕೇಳಿ ಶಾಕ್ ಆಗಿದ್ದಾರೆ.
ರಣ್‌ಬೀರ್ ವೇದಿಕೆಗೆ ಎಂಟ್ರಿ ಕೊಟ್ಟಾಗ ಬೇಗನೆ ಫೋಟೋ ಕ್ಲಿಕ್ಕಿಸಬೇಕೆಂಬ ತವಕ. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದ ನಿಮಿತ್ತ ಫೋಟೋಗ್ರಾಫರ್‌ಗೆ ಸರಿಯಾದ ಫೋಟೋ ಸಿಗದ ಕಾರಣ ಸಿಟ್ಟಾಗಿದ್ದಾರೆ. ಈ ವೇಳೆ, ಕೆಟ್ಟ ಪದ ಬಳಸಿ ಮಾತನಾಡಿದ್ದಾರೆ. ಆ ಪದ ಬಳಕೆ ಮಾಡಿದ್ದು, ರಣ್‌ಬೀರ್ ಅವರಿಗೇನಾ ಅಥವಾ ಸೇರಿದ್ದ ಜನರಿಗೇನಾ? ಎಂದು ಸ್ಪಷ್ಟನೆ ಸಿಕ್ಕಿಲ್ಲ. ಒಟ್ನಲ್ಲಿ ಫೋಟೋಗ್ರಾಫರ್ ವರ್ತನೆ ರಣ್‌ಬೀರ್‌ಗೆ ಕೋಪ ತರಿಸಿದೆ.

ರಾಮಾಯಣ, ಅನಿಮಲ್ ಪಾರ್ಕ್, ಬ್ರಹ್ಮಾಸ್ತ್ರ 2, ಲವ್ & ವಾರ್ ಸೇರಿದಂತೆ ಹಲವು ಸಿನಿಮಾಗಳು ರಣ್‌ಬೀರ್ ಕೈಯಲ್ಲಿವೆ.


