ಅಮರಾವತಿ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (YSRCP) ಕಚೇರಿಯನ್ನು ಮುನ್ಸಿಪಲ್ ಕಾರ್ಪೊರೇಷನ್ (MTMC) ಶನಿವಾರ ಮುಂಜಾನೆ ನೆಲಸಮಗೊಳಿಸಿದೆ.
ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಧಿಕಾರ ಹಾಗೂ ಮಂಗಲಗಿರಿ ತಡೆಪಲ್ಲಿ ನಗರ ಪಾಲಿಕೆ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಕಟ್ಟವನ್ನು ಧ್ವಂಸಗೊಳಿಸುವ ಕೆಲಸ ಮಾಡಿದ್ದಾರೆ. ನೆಲಸಮವಾದ ವೈಎಸ್‌ಆರ್‌ಸಿಪಿ ಕಟ್ಟಡವು ಸೀತಾನಗರಂನ ಬೋಟ್ ಯಾರ್ಡ್ ಆರ್‌ಎಸ್ ನಂ.202-ಎ-1 ನಲ್ಲಿ ಸುಮಾರು 870.40 ಚದರ ಅಡಿಯಷ್ಟು ಸುತ್ತಳತೆ ಹೊಂದಿತ್ತು. ಇದನ್ನೂ ಓದಿ: ಪರೀಕ್ಷಾ ಅಕ್ರಮ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಹೊಸ ಕಾನೂನು; 5-10 ವರ್ಷ ಜೈಲು, ಒಂದು ಕೋಟಿ ಕನಿಷ್ಠ ದಂಡ
ಕಟ್ಟಡ ಧ್ವಂಸಗೊಳಿಸಿದ ಬೆನ್ನಲ್ಲೇ ವೈಎಸ್‌ಆರ್‌ಸಿಪಿ, ಟಿಡಿಪಿ ವಿರುದ್ಧ ಹರಿಹಾಯ್ದಿದೆ. ತನಿಖೆ ಕೋರ್ಟ್‌ನಲ್ಲಿದ್ದರೂ ಧ್ವಂಸಗೊಳಿಸುವ ಕ್ರಮ ಮುಂದುವರಿದಿದೆ. ಇದು ಸೇಡಿನ ರಾಜಕಾರಣ. ಸರ್ವಾಧಿಕಾರಿಗಳಂತೆ ಬುಲ್ಡೋಜರ್ ಬಳಿಸಿ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ ಎಂದು ಕಿಡಿ ಕಾರಿದೆ. ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ – ದೂರು ಬಂದ ಮೇಲೆ ಕ್ರಮ: ಜಿ. ಪರಮೇಶ್ವರ್
ವೈಎಸ್‌ಆರ್‌ಸಿಪಿ ಗುಂಟೂರು ಜಿಲ್ಲಾಧ್ಯಕ್ಷ ಎಂ.ಶೇಷಗಿರಿ ರಾವ್ ಅವರು ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಜೂನ್ 10 ರಂದು ರಿಟ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಕಟ್ಟಡದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರ, ಸಿಆರ್‌ಡಿಎ ಮತ್ತು ಎಂಟಿಎಂಸಿಗೆ ನ್ಯಾಯಾಲಯಕ್ಕೆ ಆದೇಶಿಸಬೇಕು ಎಂದು ಕೋರಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ರೀಲ್ಸ್ ಕ್ರೇಜ್ – ಬಾಜಿ ಕಟ್ಟಿ, ಹಠಾತ್ತನೆ ಚಲಿಸುತ್ತಿದ್ದ ಬಸ್ ಕೆಳಗೆ ಮಲಗಿದ ಯುವಕ!