ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Government) ಕಂದಾಯ ಇಲಾಖೆ ಜಮೀನುಗಳ ಮಂಜೂರಾತಿ ನಿಯಮ, ನಿಬಂಧನೆಗಳ ಅಧ್ಯಯನಕ್ಕೆ ಆಂಧ್ರ ಸರ್ಕಾರದ ಕಂದಾಯ ಸಚಿವರ ನೇತೃತ್ವದ ನಿಯೋಗ ರಾಜ್ಯಕ್ಕೆ ಆಗಮಿಸಿದೆ.
ಇಂದು ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಆಂಧ್ರಪ್ರದೇಶದ (AndraPradesh) ಕಂದಾಯ ಸಚಿವರ ನೇತೃತ್ವದ ಸಚಿವರು ಹಾಗೂ ಉನ್ನತ ಅಧಿಕಾರಿಗಳ ನಿಯೋಗವು ವಿಧಾನಸೌಧದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು. ಈ ಸಂದರ್ಭದಲ್ಲಿ ಸಚಿವ ಆರ್. ಅಶೋಕ್ (R Ashok) ಅವರು ರಾಜ್ಯ ಕಂದಾಯ ಇಲಾಖೆ ತೆಗೆದುಕೊಂಡ ಮಹತ್ವದ ತೀರ್ಮಾನಗಳು, ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟರು.
Advertisement
Advertisement
ಕಂದಾಯ ಇಲಾಖೆಯ ಪಿಂಚಣಿ ವ್ಯವಸ್ಥೆ, ಭೂ ಪರಿವರ್ತನೆ ಸಮಯಾವಧಿ ಇಳಿಕೆ, ಕಾಫಿ ಶುಂಠಿ ಬೆಳೆಗಾರರಿಗೆ ಜಮೀನನ್ನು 30 ವರ್ಷದ ಅವಧಿಗೆ ಲೀಸ್ ನೀಡುವುದು, ಕಂದಾಯ ದಾಖಲೆಗಳನ್ನು ಉಚಿತವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವುದು ಮುಂತಾದವುಗಳ ಕುರಿತು ಸಚಿವ ಅಶೋಕ್ ಆಂಧ್ರದ ನಿಯೋಗಕ್ಕೆ ಮಾಹಿತಿ ನೀಡಿದರು. ಇದನ್ನೂ ಓದಿ: ಸರ್ಕಾರಿ ಉಚಿತ ನಿವೇಶನ ಪಡೆಯಲು ಲಂಚ ನೀಡಿದರೆ ಮಂಜೂರಾತಿ ರದ್ದು: ಸುಧಾಕರ್
Advertisement
Advertisement
ಆಂಧ್ರಪ್ರದೇಶ ಸರ್ಕಾರದ ಕಂದಾಯ ಸಚಿವ ಧರ್ಮನಾ ಪ್ರಸಾದ್ ರಾವ್, ನಗರಾಭಿವೃದ್ಧಿ ಮತ್ತು ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸಚಿವ ಡಾ. ಆದಿಮುಲುಪು ಸುರೇಶ್, ಸೋಶಿಯಲ್ ವೆಲ್ ಫೇರ್ ಖಾತೆ ಸಚಿವ ಮುರುಗ ನಾಗಾರ್ಜುನ, ಶಾಸಕಿ ಎಲ್. ಪದ್ಮಾವತಿ ಹಾಗೂ ಉನ್ನತ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯರಾಂ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರಚಾರದ ಗೀಳಿಗಾಗಿ ಕೆ.ಆರ್ ಮಾರ್ಕೆಟ್‌ನಲ್ಲಿ ಹಣದ ಮಳೆ ಸುರಿಸಿದ್ದ ವ್ಯಕ್ತಿ ವಶಕ್ಕೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k