Bengaluru CityDistrictsKarnatakaLatestMain Post

ಪ್ರಚಾರದ ಗೀಳಿಗಾಗಿ ಕೆ.ಆರ್‌ ಮಾರ್ಕೆಟ್‌ನಲ್ಲಿ ಹಣದ ಮಳೆ ಸುರಿಸಿದ್ದ ವ್ಯಕ್ತಿ ವಶಕ್ಕೆ

ಬೆಂಗಳೂರು: ಅವನಿಗೆ ಇದ್ದದ್ದು ಪ್ರಚಾರದ ಗೀಳು, ಅದಕ್ಕಾಗಿ ಇವತ್ತು (ಮಂಗಳವಾರ) ಇದ್ದಕ್ಕಿದ್ದಂತೆ ಕೆ.ಆರ್‌. ಮಾರ್ಕೆಟ್ ಬಳಿ ಬಂದು ಹಣದ (Money) ಮಳೆ ಸುರಿಸಿದ್ದ. ಯಾಕಪ್ಪ ಹೀಗೆ ಮಾಡಿದೆ ಅಂದ್ರೆ ಟೈಂ ಕೊಡಿ ಅಂತ ಹೇಳಿಕೊಂಡು ಸಮಯದೂಡಿದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು (ಮಂಗಳವಾರ) ಬೆಳಗ್ಗೆ ಸರಿ ಸುಮಾರು 11 ಗಂಟೆಯ ಸಮಯ ಇರ್ಬೇಕು. ಅರುಣ್ ಎಂಬಾತ ಕೆ.ಆರ್‌. ಮಾರ್ಕೆಟ್ ಫ್ಲೈಓವರ್ ಮೇಲೆ ನಿಂತು ಹಣ ಬಿಸಾಡ್ತಾ ಇದ್ದ. ಅದಕ್ಕಾಗಿ ಕೆ.ಆರ್‌.ಮಾರ್ಕೆಟ್ (KR Market Flyover) ಅಲ್ಲಿದ್ದ ಜನರಿಗೆ ಅದೆಂತಹದ್ದೋ ಕುತೂಹಲ, ಆಶ್ಚರ್ಯ. ಅಷ್ಟೇ ಅಲ್ಲದೇ ಜನ ಎಲ್ಲ ಸಿಕ್ಕಿದ್ದೇ ಸೀರುಂಡೆ ಅಂತ ಫ್ಲೈಓವರ್ ಕೆಳಗೆ ಹಣವನ್ನು ಆಯ್ದುಕೊಳ್ತಾ ಇದ್ದರು. 10 ರೂಪಾಯಿಯ ಸುಮಾರು 3 ಕಂತೆ ಹಣ ಬಿಸಾಡಿದ ವ್ಯಕ್ತಿ ಟಿಪ್ ಟಾಪ್ ಆಗಿ ಸೂಟ್ ಬೂಟ್ ಹಾಕ್ಕೊಂಡು ಬಂದಿದ್ದ. ಮೂಲತಃ ಬ್ಯುಸಿನೆಸ್ ಮಾರ್ಕೆಟಿಂಗ್ ಮಾಡುವ ಅರುಣ್‌ ಯಾಕಾಗಿ ಹಣ ಬಿಸಾಡಿದ? ಹಣ ಬಿಸಾಡಿದಕ್ಕೆ ನಿಖರ ಕಾರಣ ಏನು ಎಂದು ಹೇಳದೆ ಗಾಡಿ ಹತ್ತಿ ತನ್ನ ನಾಗರಬಾವಿ ಆಫೀಸ್ ಸೇರಿಕೊಂಡಿದ್ದ.

ಪ್ರಚಾರದ ಗೀಳಿಗಾಗಿ ಕೆ.ಆರ್‌ ಮಾರ್ಕೆಟ್‌ನಲ್ಲಿ ಹಣದ ಮಳೆ ಸುರಿಸಿದ್ದ ವ್ಯಕ್ತಿ ವಶಕ್ಕೆ

ಇನ್ನು ಹಣ ಬಿಸಾಡಿ ತನ್ನ ಆಫೀಸಿಗೆ ಸೇರಿಕೊಂಡಿದ್ದ ಅರುಣ್ ಅನ್ನು ಮಾತನಾಡಿಸುವ ಪ್ರಯತ್ನ ಮಾಡಲಾಯಿತು. ಮೊದಮೊದಲು ಹಣ ಎರಚೋದಕ್ಕೆ ಕಾರಣ ಏನು ಎನ್ನುವುದನ್ನು ಆತ ಹೇಳಿಕೊಳ್ಳಲಿಲ್ಲ. ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅರುಣ್, ಸದುದ್ದೇಶ ಇಟ್ಕೊಂಡು ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದ.

ಯಾವಾಗ ಅರುಣ್ ಈ ರೀತಿಯಲ್ಲಿ ಆಟ ಆಡೋಕೆ ಶುರು ಮಾಡಿದ್ನೊ ಪೊಲೀಸರಿಗೂ ಪಿತ್ತ ನೆತ್ತಿಗೇರಿತ್ತು. ಫೋನ್ ಮಾಡಿ ವಿಚಾರಣೆಗೆ ಬಾರಪ್ಪ ಎಂದರು. ಈ ವೇಳೆ ಅರುಣ್‌, ಟೈಂ ಕೊಡಿ ಅಂದುಕೊಡೆ, ನಾಗರಭಾವಿಯ ಕಚೇರಿಯಲ್ಲಿ ಕುಳಿತು ನಾಟಕ ಮಾಡುತ್ತಿದ್ದ. ಕೋಪಗೊಂಡ ಪೊಲೀಸರು, ಜನರಿಗೆ ಉಪದ್ರ ಮಾಡಿದ ಎಂದು ಎಫ್‌ಐಆರ್ ದಾಖಲು ಮಾಡಿ, ಆತನ ಕಚೇರಿಗೆ ನುಗ್ಗಿ ಅರುಣ್ ಅನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲಿಂದ ಹಣದ ಮಳೆ ಸುರಿಸಿದ ಯುವಕ!

ಪ್ರಚಾರದ ಗೀಳಿಗಾಗಿ ಕೆ.ಆರ್‌ ಮಾರ್ಕೆಟ್‌ನಲ್ಲಿ ಹಣದ ಮಳೆ ಸುರಿಸಿದ್ದ ವ್ಯಕ್ತಿ ವಶಕ್ಕೆ

ಇನ್ನು ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಲೈಕ್ಸ್ ಹಾಗೂ ಪ್ರಚಾರ ಆಗ್ಲಿ ಎಂದು ಈ ರೀತಿ ಮಾಡಿರುವುದಾಗಿ ತಿಳಿಸಿದ್ದು, ಅದಕ್ಕಾಗಿ ಹತ್ತು ಸಾವಿರದವರೆಗೆ ಹಣ ತಂದಿದ್ದಾಗಿ ಹೇಳಿಕೆ ನೀಡಿದ್ದಾನೆ. ಅಲ್ಲದೆ ಹಲವಾರು ಜನರು ಬೇರೆ ಬೇರೆ ರೀತಿ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾರೆ. ನಾನು ಈ ರೀತಿ ಮಾರ್ಕೆಟಿಂಗ್ ಮಾಡಿಕೊಂಡೇ ಅಷ್ಟೆ. ಬೇರೆ ಏನು ಉದ್ದೇಶ ಇಲ್ಲ ಎಂದು ಮಹಾಶಯ ಅರುಣ್ ಹೇಳಿದ್ದಾನೆ. ಇದನ್ನೂ ಓದಿ: ಸರ್ಕಾರಿ ಉಚಿತ ನಿವೇಶನ ಪಡೆಯಲು ಲಂಚ ನೀಡಿದರೆ ಮಂಜೂರಾತಿ ರದ್ದು: ಸುಧಾಕರ್

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button