ಸರ್ಕಾರಿ ಉಚಿತ ನಿವೇಶನ ಪಡೆಯಲು ಲಂಚ ನೀಡಿದರೆ ಮಂಜೂರಾತಿ ರದ್ದು: ಸುಧಾಕರ್

ಚಿಕ್ಕಬಳ್ಳಾಪುರ: ನಿವೇಶನ ರಹಿತರು ಸರ್ಕಾರದ ಉಚಿತ ನಿವೇಶನ ಅಥವಾ ವಸತಿ ವ್ಯವಸ್ಥೆಯ ಸೌಲಭ್ಯ ಪಡೆಯಲು ಯಾವುದೇ ವ್ಯಕ್ತಿಗೆ ಒಂದು ನಯಾಪೈಸೆ ಲಂಚ ನೀಡಬಾರದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (K Sudhakar) ತಿಳಿಸಿದರು.
ಚಿಕ್ಕಬಳ್ಳಾಪುರದ (Chikkaballapur) ಹೊಸಹುಡ್ಯದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ನಿವೇಶನ ರಹಿತರಿಗೆ ನೀಡುವ ಉಚಿತ ನಿವೇಶನ ಹಾಗೂ ವಸತಿ ಸೌಕರ್ಯಗಳನ್ನು ಪಡೆಯಲು ಯಾವುದೇ ಫಲಾನುಭವಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ, ಅಧಿಕಾರಿ ಮತ್ತು ಸಿಬ್ಬಂದಿಗೆ ಲಂಚ ಕೊಟ್ಟರೆ ತಮ್ಮ ನಿವೇಶನಗಳ ಮಂಜೂರಾತಿಯನ್ನು ರದ್ದುಪಡಿಸಲಾಗುತ್ತದೆ ಎಂದು ಹೇಳಿದರು.
ಜಾತಿ, ಗ್ರಾಮ, ಮತ ಯಾವುದನ್ನೂ ಮಾನದಂಡವಾಗಿ ಇಟ್ಟುಕೊಳ್ಳದೆ ಕೇವಲ ನಿವೇಶನ ಮತ್ತು ವಸತಿ ರಹಿತ ಕಡು ಬಡ ಕುಟುಂಬಗಳಿಗೆ ಮಾತ್ರ ಪಾರದರ್ಶಕವಾಗಿ ಎಲ್ಲರ ಸಮ್ಮುಖದಲ್ಲಿಯೇ ಆಯ್ಕೆ ಗ್ರಾಮ ಸಭೆಯಲ್ಲಿ ಮಾಡಲಾಗುತ್ತಿದೆ. ಯಾರೊಬ್ಬರೂ ನಯಾ ಪೈಸೆ ಯಾರಿಗೂ ಕೊಡುವಂತಿಲ್ಲ ಎಂದು ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.
ಆಯ್ಕೆಯಾದ ಎಲ್ಲ ಫಲಾನುಭವಿಗಳಿಗೆ ಫೆ.15ರೊಳಗೆ ಹಕ್ಕು ಪತ್ರ ವಿತರಿಸಲಾಗುತ್ತದೆ. ಅಲ್ಲದೆ ಇನ್ನೂ 170 ನಿವೇಶನ ಈ ಗ್ರಾಪಂನಲ್ಲಿ ಲಭ್ಯವಿದ್ದು, ನಿರ್ಗತಿಕರನ್ನು ಗುರುತಿಸಿ, ಪಟ್ಟಿ ಸಿದ್ಧಪಡಿಸಿ ಪಿಡಿಒ ಅವರಿಗೆ ನೀಡುವಂತೆ ಸಚಿವರು ಸೂಚಿಸಿದರು. ಇದನ್ನೂ ಓದಿ: ಯಾವ ಮುಖ ಇಟ್ಕೊಂಡು ಮೋದಿ ರಾಜ್ಯದಲ್ಲಿ ವೋಟು ಕೇಳ್ತಾರೆ – ಹೆಚ್‌ಡಿಕೆ ಪ್ರಶ್ನೆ
ರೈತರ ಆದಾಯ ದ್ವಿಗುಣಕ್ಕೆ ಕ್ರಮ: ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶ್ರಮಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ರೈತರ ಆದಾಯ ದ್ವಿಗುಣ ಮಾಡಲು ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ರೈತರಿಗೆ ಕೃಷಿ ಚಟುವಟಿಕೆಗಳ ಮಾರ್ಗದರ್ಶನ ನೀಡಲು ವಿಶೇಷ ಆಸಕ್ತಿ ಹೊಂದಲಾಗಿದೆ. ದೊಡ್ಡ ಕೈಗಾರಿಕಾ ವಲಯ ಇಲ್ಲಿ ಸ್ಥಾಪನೆಯಾಗಲಿದ್ದು, ನಿರುದ್ಯೋಗ ಸಮಸ್ಯೆಯೂ ನಿವಾರಣೆ ಮಾಡಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ಕೆಂಗೇರಿ To ಮೈಸೂರು ರಸ್ತೆ ಮೆಟ್ರೋ ಸಂಚಾರ ಜ.27 ರಿಂದ 30ರವರೆಗೆ ಸ್ಥಗಿತ
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k