ಆ್ಯಂಕರ್ ರಶ್ಮಿ ಗೌತಮ್ (Rashmi Gautham) ತೆಲುಗಿನ ಜನಪ್ರಿಯ ಜಬರ್‌ದಸ್ತ್ ಕಾಮಿಡಿ ಶೋ ಮೂಲಕ ಗಮನ ಸೆಳೆದವರು. ಸಿನಿಮಾಗಳಲ್ಲಿ ನಾಯಕಿಯಾಗಿ ಮೋಡಿ ಮಾಡಿದವರು. ಇದೀಗ ಮದುವೆಯ ವಿಚಾರವಾಗಿ ನಟಿ ರಶ್ಮಿ ಸುದ್ದಿಯಲ್ಲಿದ್ದಾರೆ. ಸದ್ಯದಲ್ಲೇ ಹಸೆಮಣೆ (Wedding) ಏರೋದಕ್ಕೆ ನಟಿ ರೆಡಿಯಾಗಿದ್ದಾರೆ.
ಶೀಘ್ರದಲ್ಲಿ ರಶ್ಮಿ ಗೌತಮ್ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಮೆರಿಕದ ಹುಡುಗನ ಜೊತೆ ಮದುವೆ ಆಗುವುದಕ್ಕೆ ಮಾತುಕತೆ ಕೂಡ ನಡೆದಿದೆಯಂತೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸದ್ಯದಲ್ಲೇ ಮದುವೆ ಕುರಿತು ನಟಿ ಅಧಿಕೃತವಾಗಿ ಅನೌನ್ಸ್ ಮಾಡುತ್ತಾರಾ? ಎಂದು ಕಾದುನೋಡಬೇಕಿದೆ. ಇದನ್ನೂ ಓದಿ:ಹೊಸ ಹುಡುಗಿ ಜೊತೆ ವರ್ಮಾ ನೈಟ್ ಪಾರ್ಟಿ
ಇನ್ನೂ ನಟಿ ರಶ್ಮಿ ಗೌತಮ್ ಅವರ ಹೆಸರು ಆಗಾಗ ಹಾಸ್ಯನಟ ಸುಡಿಗಾಲಿ ಸುಧೀರ್ ಜೊತೆ ಕೇಳಿ ಬಂದಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ನಾವಿಬ್ಬರೂ ಉತ್ತಮ ಸ್ನೇಹಿತರು. ಡೇಟಿಂಗ್ ಸುದ್ದಿ ಎಲ್ಲಾ ಸುಳ್ಳು ಎಂದು ರಶ್ಮಿ ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ನಟಿಯ ಮದುವೆ ಸುದ್ದಿ ಸಖತ್ ಚರ್ಚೆ ಆಗುತ್ತಿದೆ.
ಕೆಲವು ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಶ್ಮಿ, ಕಳೆದ ವರ್ಷ ‘ಹಾಸ್ಟೆಲ್ ಹುಡುಗರು’ ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಕನ್ನಡದ ‘ಹಾಸ್ಟೆಲ್ ಹುಡುಗರು’ ಚಿತ್ರದಲ್ಲಿ ರಮ್ಯಾ (Ramya) ನಟಿಸಿದ ಅತಿಥಿ ಪಾತ್ರವನ್ನು ತೆಲುಗಿನಲ್ಲಿ ರಶ್ಮಿ ಗೌತಮ್ ನಟಿಸಿ ಸೈ ಎನಿಸಿಕೊಂಡಿದ್ದರು.