
ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ ಭರ್ತಿ ಒಂದು ತಿಂಗಳಾಗಿದೆ. ತನ್ನ ನೆಚ್ಚಿನ ನಟನ ನಿಧನದ ದುಃಖದಲ್ಲಿದ್ದ ಅನುಶ್ರೀ ಕೆಲಕಾಲ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರು. ಇಂದು ಮತ್ತೆ ಪೋಸ್ಟ್ ಹಾಕಿಕೊಳ್ಳುವ ಮೂಲಕ ಮರಳಿದ್ದಾರೆ.
ಹೌದು. ಭಾವುಕರಾಗಿಯೇ ಪೋಸ್ಟ್ ಹಾಕಿರುವ ಅನುಶ್ರೀ ನೋವು …ದುಃಖ …ಈಗ ಜೀವನದ ಬಲವಾಗಿ ಬದುಕಬೇಕು ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನನ್ನು ಇಂದು ನೆನಪಿಸಿಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ..?
ಕಾಲ ನೀನು ಮಾಯ.. ಇಲ್ಲ ನಿನಗೆ ನ್ಯಾಯ.. ತಿಂಗಳು ಕಳೆದರು.. ವರ್ಷಗಳು ಉರುಳಿದರೂ.. ಮಾಸುವುದಿಲ್ಲ.. ಮರೆಯುವುದಿಲ್ಲ.. ಅಳಿಯುವುದಿಲ್ಲ.. ಒಳ್ಳೆಯತನದಲ್ಲಿ ಎಂದಿಗೂ ಜೀವಂತ ಎಂದು ಅಪ್ಪು ಹೆಸರು ಹಾಕದೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ಎಂದರೆ ನನಗೆ ಹುಚ್ಚು ಅಭಿಮಾನ: ಅನುಶ್ರೀ
ಅನುಶ್ರೀ ಈ ರೀತಿ ಪೋಸ್ಟ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಕೂಡ ಕಾಮೆಂಟ್ ಗಳನ್ನು ಮಾಡಿದ್ದಾರೆ. ಹಲವು ಮಂದಿ ಮಿಸ್ ಯೂ ಅಪ್ಪು ಸರ್ ಎಂದು ಹೇಳಿದ್ದಾರೆ. ಅನುಶ್ರೀಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ತುಂಬಾ ಅಭಿಮಾನ, ಗೌರವ. ಅಪ್ಪು ನಮ್ಮನೆಲ್ಲ ಅಗಲಿ ಇಂದಿಗೆ ಒಂದು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಂತೆಯೇ ಅನುಶ್ರೀ ಕೂಡ ಅಪ್ಪು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಅಕ್ಟೋಬರ್ 29ರಂದು ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಸ್ತಂಭನದಿಂದಾಗಿ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಅವರ ಕುಟುಂಬ, ಅಭಿಮಾನಿ ವರ್ಗ ಹಾಗೂ ಇಡೀ ಚಿತ್ರರಂಗಕ್ಕೆ ಬರಸಿಡಿಲು ಬಡಿಂತಾಗಿದ್ದು, ಇಂದಿಗೂ ಜನ ಅಪ್ಪು ಸಮಾಧಿಗೆ ಭೇಟಿ ನೀಡುತ್ತಲೇ ಇದ್ದಾರೆ. ಅಪ್ಪು ನಿಧನದ ಬಳಿಕ ಸನುಶ್ರೀ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಸೋಶಿಯಲ್ ಮೀಡಿಯಾದಿಂದಲೂ ಕೊಂಚ ದೂರ ಉಳಿದಿದ್ದು, ಇಂದು ಮತ್ತೆ ಮರಳಿದ್ದಾರೆ.