ಅಪ್ಪು ಸರ್ ಎಂದರೆ ನನಗೆ ಹುಚ್ಚು ಅಭಿಮಾನ: ಅನುಶ್ರೀ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿರುವುದುನ್ನು ನೆನಪಿಸಿಕೊಂಡು ನಿರೂಪಕಿ ಅನುಶ್ರೀ ಕಣ್ಣೀರು ಹಾಕಿದ್ದಾರೆ.
ಖಾಸಗಿವಾಹಿಯ ಕಾರ್ಯಕ್ರಮದಲ್ಲಿ ಅನುಶ್ರೀ ಅಪ್ಪು ಜೊತೆಗೆ ಕಳೆದ ಸುಂದರ ಕ್ಷಣ, ಅವರ ವ್ಯಕ್ತಿತ್ವದ ಕುರಿತಾಗಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅಪ್ಪು ಸರ್ ನನಗೆ ತುಂಬಾ ಹತ್ತಿರ. ಸಿನಿಮಾ ಇಷ್ಟ ಪಡಲು ಶುರುವಾಗಿದ್ದ ದಿನದಿಂದ ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ. ನಾನು ಇಷ್ಟ ಪಡುವ ಏಕೈಕ ನಟ ಅಂದ್ರೆ ಅಪ್ಪು ಸರ್ ಆಗಿದ್ದರು. ಅವರನ್ನು ಭೇಟಿಯಾದ ಮೇಲೆ ಅವರ ಗುಣ, ವ್ಯಕ್ತಿತ್ವಕ್ಕೆ ನಾನು ಅಭಿಮಾನಿಯಾದೆ ಎಂದು ಹೇಳುತ್ತಾ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ.
ಕಳೆದ ವರ್ಷ ಹುಟ್ಟುಹಬ್ಬದ ದಿನ ಅವರ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದೇನು. ಆಗ ಅನುಶ್ರೀ ಬಂದಿದ್ದಾರೆ ಎಂದು ಅವರು ಕೊಡುವ ಅಪ್ಪುಗೆ ಇದ್ಯಲ್ಲ ಮರೆಯಲು ಸಾಧ್ಯವಾಗಲ್ಲ. ಮನೆಗೆ ಎಲ್ಲರು ಸ್ವಾಗತ ಮಾಡುತ್ತಾರೆ. ಆದರೆ ಮನೆಯಿಂದ ಹೊರಡುವಾಗ ಬೀಳ್ಕೊಡುವವರು ಕೆಲರು ಮಾತ್ರ ಆಗಿದ್ದಾರೆ. ಆ ಕೆಲವರಲ್ಲಿ ಅಪ್ಪು ಪ್ರಮುಖರಾಗಿದ್ದಾರೆ. ಅವರ ಮನೆಗೆ ಹೇಗೆ ಸ್ವಾಗತ ಇರುತ್ತೋ ಹಾಗೆ ಕಳುಹಿಸಿಕೊಡುತ್ತಾರೆ. ಆದರೆ ನಾನು ಅವರ ಮನೆಗೆ ಹೋದ್ರೆ ಸ್ವಾಗತವೂ ಇಲ್ಲ, ಅಪ್ಪು ಸರ್ ಮಲಗಿದ್ದರು ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದನ್ನೂ ಓದಿ: ಹೆಚ್.ಆರ್ ರಂಗನಾಥ್ ಅವರಿಗೆ ನಾನು ಆಭಾರಿಯಾಗಿದ್ದೇನೆ: ಹರೇಕಳ ಹಾಜಬ್ಬ
ನನಗೆ ಅವರು ಎಂದರೆ ಹುಚ್ಚು ಅಭಿಮಾನ ಇದೆ. ಅವರು ಎಂದರೆ ಪ್ರಾಣವಾಗಿದೆ. ಯಾವುದೇ ಕಾರ್ಯಕ್ರಮ ಇದ್ದರು ಸಿನಿಮಾ ಟೀಮ್ ಕಾಲ್ ಮಾಡುವುದು ನನಗೆ ಆಗಿತ್ತು. ಎಲ್ಲರೂ ಹೇಳುತ್ತಾರೆ ಅನುಶ್ರೀ ಅವರು ಅಪ್ಪು ಅವರನ್ನು ವೆಲ್ ಕಮ್ ಮಾಡುವಂತೆ ಯಾರು ಮಾಡುವುದಿಲ್ಲ ಎಂದು. 15 ವರ್ಷದ ನನ್ನ ನಿರೂಪಣಾ ದಿನದಲ್ಲಿ ನನ್ನ ಅತ್ಯಂತ ಕೆಟ್ಟ ದಿನ ಇವತ್ತೆ ಆಗಿದೆ. ಈ ರೀತಿ ಅವರನ್ನು ನೆನಪು ಮಾಡಿಕೊಳ್ಳವ ನತದೃಷ್ಟ ಅಭಿಮಾನಿ ನಾನೆ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ
ನಾನು ಊರಲ್ಲಿ ಇರಲಿಲ್ಲ. ಮೊಬೈಲ್ ಆಫ್ ಮಡಿಕೊಂಡು ಬಿಟ್ಟೆ. ನನಗೆ ಆ ವಾಸ್ತವವನ್ನು ಎದುರಿಸಲು ಶಕ್ತಿ ನನಗೆ ಇರಲಿಲ್ಲ. ಅವರಿಗೋಸ್ಕರ ಪ್ರಾರ್ಥನೆ ಮಾಡುವ ಕೋಟ್ಯಂತರ ಹೃದಯಗಳಿವೆ. ಅವರಿಗೆ ಒಂದು ಅವಕಾಶ ಕೊಡಬೇಕಿತ್ತು ಎಂದು ಹೇಳುತ್ತಾ ಅನುಶ್ರೀ ಭಾವುಕರಾದರು.