ಶಿಮ್ಲಾ: ಹಿಮಾಚಲ ಪ್ರದೇಶ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಗುರುವಾರ ಸಂಜೆ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಆನಂದ್ ಶರ್ಮಾ ಬಿಜೆಪಿ ಸೇರ್ಪಡೆ ಬಗ್ಗೆ ಊಹಾಪೋಹಗಳಿಗೆ ಎಡೆಮಾಡಿ ಕೊಟ್ಟಿದ್ದಾರೆ.
ಆನಂದ್ ಶರ್ಮಾ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾಗಿದ್ದು, ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆಗೆ ತಿಂಗಳು ಬಾಕಿಯಿರುವ ಮೊದಲೇ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಮೂಲಗಳ ಪ್ರಕಾರ ಆನಂದ್ ಶರ್ಮಾ ಬಿಜೆಪಿ ಸೇರ್ಪಡೆಯಾಗುವ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ವಿವಾದಾತ್ಮಕ ಟ್ವೀಟ್ – ಹರಿಯಾಣ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ವಜಾ
ಈ ಬಗ್ಗೆ ಮಾತನಾಡಿರುವ ಶರ್ಮಾ, ನಾನು ಬಿಜೆಪಿ ನಾಯಕರನ್ನು ಬೇಟಿಯಾಗಬೇಕಿದ್ದರೆ ಬಹಿರಂಗವಾಗಿಯೇ ಹೋಗುತ್ತೇನೆ. ಅದರಲ್ಲಿ ತಪ್ಪೇನಿಲ್ಲ. ಮಾನು ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಇದರರ್ಥ ನಾವು ಕೇವಲ ಸೈದ್ಧಾಂತಿಕ ವಿರೋಧಿಗಳು, ವೈಯಕ್ತಿಕವಾಗಿ ಅಲ್ಲ. ಸೈದ್ಧಾಂತಿಕ ವಿರೋಧಿಗಳು ಸಾಮಾಜಿಕವಾಗಿ ಶತ್ರುಗಳಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು
ಆನಂದ್ ಶರ್ಮಾ ತಮ್ಮ ಪಕ್ಷದ ನಾಯಕತ್ವದ ವಿರುದ್ಧ ಆಗಾಗ ಸಾರ್ವಜನಿಕವಾಗಿಯೂ ಅಸಮಾಧಾನವನ್ನು ಹೊರ ಹಾಕಿದ್ದರು. ಇದೀಗ ಜೆಪಿ ನಡ್ಡಾ ಭೇಟಿಯ ಬಳಿಕ ಕುತೂಹಲ ಹೆಚ್ಚಾಗಿದೆ.
ಕಾಂಗ್ರೆಸ್ ಜಿ-23 ನಾಯಕರ ಪೈಕಿ ಒಬ್ಬರಾಗಿರುವ ಆನಂದ್ ಶರ್ಮಾ ಪಕ್ಷದಲ್ಲಿ ಬದಲಾವಣೆಗೆ ಆಗ್ರಹಿಸಿದ್ದರು.