-ಪತಿಯಿಂದ ಸಿಕ್ತು ಗಿಫ್ಟ್, ಮನೆಗೆ ಬಂದ ಅಭಿಮಾನಿಗಳಿಗೂ ಉಡುಗೊರೆ ನೀಡಿದ ಗೋಲ್ಡನ್ ಕ್ವೀನ್
ಬೆಂಗಳೂರು: ಸ್ಯಾಂಡಲ್‍ವುಡ್‍ನ ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವುದಕ್ಕಾಗಿ ಹೊಲಿಗೆ ಯಂತ್ರಗಳನ್ನ ವಿತರಣೆ ಮಾಡಿದ್ದಾರೆ.
ಶುಕ್ರವಾರ ಅಮೂಲ್ಯ ಮೊದಲು ತಮ್ಮ ಅಮ್ಮನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಬಳಿಕ ತಮ್ಮ ಪತಿ ಮನೆ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಜೊತೆ ಕೇಕ್ ಮಾಡಿ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದರು. ಅಭಿಮಾನಿಗಳು ಕೂಡ ಅಪಾರವಾಗಿ ಬಂದಿದ್ದು, ಕೇಕ್ ತಂದು ಕಟ್ ಮಾಡಿಸಿದ್ದಾರೆ. ಬರ್ತ್ ಡೇ ಪ್ರಯುಕ್ತ ಮಹಿಳೆಯರಿಗೆ ಸ್ವಾಲಂಬಿ ಬದುಕು ಕಟ್ಟಿಕೊಳ್ಳಲು ಹೊಲಿಗೆ ಯಂತ್ರಗಳನ್ನು ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಅಮೂಲ್ಯ, ಪ್ರತಿದಿನ ಯಾರಿಗಾದರೂ ಒಳ್ಳೆಯದನ್ನು ಮಾಡಬೇಕು ಎಂದು ನಮ್ಮ ಪತಿ ಹೇಳುತ್ತಿರುತ್ತಾರೆ. ನಾವು ಹುಟ್ಟಿದ ದಿನವನ್ನು ಬೇರೆಯವರು ನೆನಪಿಸಕೊಳ್ಳಬೇಕು ಎಂದು ಹೇಳುತ್ತಾರೆ. ನನಗೆ ಒಳ್ಳೆಯ ಕುಟುಂಬ, ಪ್ರೀತಿ ಸಿಕ್ಕಿದೆ. ಅಭಿಮಾನಿಗಳ ಪ್ರೀತಿಗೆ ನಾವು ಚಿರುಋಣಿಯಾಗಿದ್ದೇವೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಮಹಿಳೆಯರಿಗೆ ಉದ್ಯೋಗ ಕೊಡಿಸಬೇಕು ಎಂದು ಯೋಜನೆ ಮಾಡಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವವರಿಗೆ ಹೊಲಿಗೆ ಯಂತ್ರಗಳನ್ನು ಕೊಟ್ಟಿದ್ದೇವೆ. ಇದುವರೆಗೂ ನಮ್ಮ ಪತಿ ಎಲ್ಲೂ ಶಾಪಿಂಗ್ ಕರೆದುಕೊಂಡು ಹೋಗಿಲ್ಲ. ಆದರೆ ನನಗೋಸ್ಕರ ಶಾಪಿಂಗ್ ಬಂದು ನನಗೆ ಉಡುಗೊರೆಯಾಗಿ ಸೀರೆ ಕೊಡಿಸಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ಅಮೂಲ್ಯ, ಸದ್ಯಕ್ಕೆ ಕಥೆ ಕೇಳುತ್ತಿದ್ದೇವೆ. ತುಂಬಾ ಪ್ಲಾನ್ ಗಳಿವೆ ಒಂದೊಂದು ಸಿನಿಮಾ ಮಾಡುತ್ತೇನೆ. ದರ್ಶನ್ ಜೊತೆ ಒಮ್ಮೆ ಮಾತನಾಡಿದ್ದೀವಿ. ಆದರೆ ಖಚಿತವಾದ ಮೇಲೆ ಹೇಳುತ್ತೇವೆ ಎಂದು ತಿಳಿಸಿದ್ದಾರೆ.
ನಾವು ಕೆಲವು ಮಹಿಳೆಯರಿಗೆ ಹೊಲಿಗೆ ತರಬೇತಿ ಕೊಟ್ಟಿದ್ದೇವು. ಅವರಿಗೆ ಈಗ ಹೊಲಿಗೆ ಯಂತ್ರ ಕೊಟ್ಟಿದ್ದೇವೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಉದ್ದೇಶದಿಂದ ಸರ್ಕಾರಿ ಶಾಲಾ ಶಿಕ್ಷಕಿಯರನ್ನು ಕರೆದು ಅಮೂಲ್ಯ ಅವರಿಂದ ಬಾಗಿನ ಕೊಟ್ಟಿದ್ದೇವೆ. ಇನ್ನು ಹುಟ್ಟುಹಬ್ಬದ ಪ್ರಯುಕ್ತ ಬಂದವರಿಗೆ ಗಿಡ ಕೊಟ್ಟಿದ್ದೇವೆ ಎಂದು ಅಮೂಲ್ಯ ಪತಿ ಜಗದೀಶ್ ಅವರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv