ಚಂದವನದ ಯುವನಟಿ ಅಮೃತಾ ಅಯ್ಯಂಗಾರ್ ಸಿನಿಲೋಕಕ್ಕೆ ಬಂದು ಸೂಪರ್ ಹಿಟ್ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಚಂದನವನದ ನವತಾರೆಯಾಗಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಈ ನಟಿ ತಮ್ಮ ಅಪ್ಡೇಟ್ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಪೋಸ್ಟ್‌ಗೆ ಮೋಹಕ ತಾರೆ ರಮ್ಯಾ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದರು. ಆ ಕಾಮೆಂಟ್‌ಗಳನ್ನು ನೋಡಿ ಅಮೃತಾ ಫುಲ್ ಉತ್ಸುಕರಾಗಿ ರಮ್ಯಾ ಅವರಿಗೆ ಧನ್ಯವಾದ ಹೇಳುತ್ತಿದ್ದರು. ಆದರೆ ಈಗ ರಮ್ಯಾ ಅವರು ಅಮೃತ ಅಯ್ಯಂಗಾರ್ ಕುಟುಂಬವನ್ನು ಭೇಟಿ ಮಾಡಿದ್ದು, ಅದ್ಭುತ ಸಮಯ ಕಳೆದಿದ್ದಾರೆ. ಈ ಕುರಿತು ಅಮೃತ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ರಮ್ಯಾ ಮತ್ತು ಅವರ ತಾಯಿಯ ಜೊತೆಗಿನ ಫೋಟೋವನ್ನು ಶೇರ್ ಮಾಡಿರುವ ಅಮೃತಾ, ‘ಆಹಾ, ಇದು ಸಂಭವಿಸಿತು. ಒಂದೇ ಫ್ರೇಮ್ನಲ್ಲಿ ನನಗೆ ಸ್ಫೂರ್ತಿ ತುಂಬಿದ ಇಬ್ಬರು ಇದ್ದಾರೆ. divyaspandana ಲವ್ ಯು ದಿ ಮೋಸ್ಟ್. ಈ ಅದ್ಭುತ ಸಂಜೆಗೆ ಧನ್ಯವಾದಗಳು’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅಮೃತಾ ಅವರ ತಾಯಿ ತನ್ನ ಒಂದು ಭುಜದಲ್ಲಿ ರಮ್ಯಾ ಅವರನ್ನು, ಇನ್ನೊಂದು ಭುಜದಲ್ಲಿ ಮಗಳು ಅಮೃತಾಳನ್ನು ಮಲಗಿಸಿಕೊಂಡಿದ್ದು, ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ವೈರಲ್ ಆಯ್ತು ಹರ್ಷಿಕಾ ನಟನೆಯ `ತಾಯ್ತ’ ಚಿತ್ರದ ಲುಕ್
View this post on Instagram
ಈ ಫೋಟೋಗೆ ಕಾಮೆಂಟ್ ಮಾಡಿದ ಮೋಹಕ ತಾರೆ, ಆಮಿ ನಿಮ್ಮೊಂದಿಗೆ ಮತ್ತು ಕುಟುಂಬದೊಂದಿಗೆ ಕಳೆದ ಸಮಯ ನಿಮ್ಮಷ್ಟೆ ನನಗೂ ಖುಷಿ ತಂದಿದೆ. ನಿಮ್ಮ ಉಳಿದ ರಜೆಯನ್ನು ಆನಂದಿಸಿ. ನಿಮ್ಮ ಸ್ವೀಟ್ ಅಮ್ಮ, ಪ್ರಿಯಾಂಕಾ, ನಿಶಾಂತ್ ಮತ್ತು ಚಿಕ್ಕಮ್ಮನಿಗೆ ನನ್ನ ತುಂಬು ಪ್ರೀತಿಯಿದೆ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.
ಈ ಫೋಟೋ ನೋಡಿದ ಸೆಲೆಬ್ರಿಟಿಗಳು ಸಖತ್ ಖುಷ್ ಆಗಿದ್ದಾರೆ. ಅದರಲ್ಲಿಯೂ ನಟಿ ನಿಶ್ವಿಕಾ, ನನಗೆ ಈ ಫೋಟೋ ನೋಡಿ ಅಸೂಯೆಯಾಗುತ್ತಿದೆ. ಆದರೂ ಈ ಫೋಟೋ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಗಾಯಕ ವಾಸುಕಿ ವೈಭವ್, ಓ ಮೈ ಗಾಡ್, ನಾನು ದುಬೈಗೆ ಬರುತ್ತಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಈ ಫೋಟೋ ನೋಡಿ ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2
ಪ್ರಸ್ತುತ ಅಮೃತ ಅಯ್ಯಂಗಾರ್ ತಮ್ಮ ಕುಟುಂಬದ ಜೊತೆ ಹಾಲಿಡೇ ಎಂಜಯ್ ಮಾಡಲು ದುಬೈಗೆ ಹಾರಿದ್ದಾರೆ. ಈ ವೇಳೆ ರಮ್ಯಾ ಅವರು ಸಿಕ್ಕಿದ್ದು, ಅದ್ಭುತ ಸಮಯ ಕಳೆದಿರುವುದಾಗಿ ಪೋಸ್ಟ್ ಬರೆದುಕೊಂಡಿದ್ದಾರೆ