ಬಾಲಿವುಡ್ (Bollywood) ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಇದೀಗ ತಮ್ಮ ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮುದ್ದು ನಾಯಿ ಜೊತೆಗಿನ ಫೋಟೋ ಹಂಚಿಕೊಂಡು ಬಿಗ್ ಬಿ ಭಾವುಕರಾಗಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಬಿಟೌನ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಲಿಸ್ಟ್ನಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದಾ ಶೂಟಿಂಗ್‌ನಲ್ಲಿ ಬ್ಯುಸಿಯಿರುವ ನಟ ಈಗ ಸೋಷಿಯಲ್ ಮೀಡಿಯಾದಲ್ಲಿ ಎಮೋಷನಲ್ ಆಗಿ ಪೋಸ್ಟ್ ಮಾಡಿದ್ದಾರೆ. ಸಾಕು ನಾಯಿ ನಿಧನಕ್ಕೆ ಬಿಗ್ ಬಿ(Big B) ಭಾವುಕರಾಗಿದ್ದಾರೆ.
T 4469 – हमारे एक छोटे से दोस्त, काम के क्षण !
फिर ये बड़े होते हैं ; और फिर एक दिन छोड़ के चले जाते हैं ???? pic.twitter.com/IK3YJtrzEv
— Amitabh Bachchan (@SrBachchan) November 15, 2022
ನನಗೆ ಒಬ್ಬರು ಚಿಕ್ಕ ಸ್ನೇಹಿತರು ಇದ್ದರು. ಕೆಲಸ ಸಮಯದಲ್ಲಿ ಜೊತೆಯಲ್ಲಿದ್ದರು. ಹಾಗೆಯೇ ಬೆಳೆಯುತ್ತಿದ್ದರು. ಒಂದು ದಿನ ಹೇಳದೇ ಹೊರಟು ಬಿಡುತ್ತಾರೆ ಎಂದು ಮುದ್ದಿನ ನಾಯಿ ಬಗ್ಗೆ ಅಮಿತಾಭ್ ಕಣ್ಣೀರಿಟ್ಟಿದ್ದಾರೆ. ಬಿಗ್ ಬಿ ಭಾವುಕರಾಗಿರೋದನ್ನ ನೋಡಿ, ಫ್ಯಾನ್ಸ್ ಕೂಡ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸುದೀಪ್ ದಂಪತಿ ಭೇಟಿ
ಇತ್ತೀಚೆಗೆ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ `ಗುಡ್ ಬೈ’ ಕಾಂತಾರ ಮುಂದೆ ನೆಲಕಚ್ಚಿತ್ತು. ರಶ್ಮಿಕಾ ಮಂದಣ್ಣ ಮತ್ತು ಬಿಗ್ ಬಿ ಜೋಡಿ ಕಮಾಲ್ ಮಾಡುವಲ್ಲಿ ಫ್ಲಾಪ್ ಆಗಿತ್ತು. ಸದ್ಯ ಅಮಿತಾಭ್ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಗೆ ಅಪ್ಪಳಿಸಲಿದೆ.