ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ- ಮೈತ್ರಿ ನಾಯಕರ ಭೇಟಿ ಇಂದೇ ನಡೆಯುತ್ತಾ?

Public TV
1 Min Read
BJP JDS

ಬೆಂಗಳೂರು: ರಾಜ್ಯಕ್ಕೆ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಟ್ಟಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೆ ಮೈತ್ರಿ ನಾಯಕರ ಭೇಟಿ ಇಂದೆ ನಡೆಯಬಹುದು ಎಂಬ ಚರ್ಚೆಗಳು ನಡೆಯುತ್ತಿದೆ.

ಮೈತ್ರಿ ಪ್ರಾಬಲ್ಯದ ಅಂಗಳದಲ್ಲೆ ಸೀಟ್ ಬೇಡಿಕೆಯ ಒತ್ತಡ ಹೆಚ್ಚಿಸಲು ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗುವ ಸಾಧ್ಯತೆಗಳಿವೆ. ಅಮಿತ್ ಶಾ, ಕುಮಾರಸ್ವಾಮಿ ಭೇಟಿ ಹಾಗೂ ಮಾತುಕತೆಗೆ ಸಾಂಸ್ಕೃತಿಕ ನಗರಿ ವೇದಿಕೆ ಆದರೂ ಅಚ್ಚರಿ ಇಲ್ಲ. ಮೈತ್ರಿ ಪಾಲಿನ ಹಕ್ಕು ಮಂಡಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಮಿತ್ ಶಾ ಮುಂದೆ ರಾಜಕೀಯ ದಾಳ ಉರುಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಟ್ಟಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amitshah) ರಾಜ್ಯಕ್ಕೆ ಬಂದಿರುವುದು ಮೈತ್ರಿ ನಾಯಕರ ಮಾತುಕತೆಯ ಕುತೂಹಲವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮೈಸೂರಿಗೆ ಅಮಿತ್ ಶಾ ಆಗಮನ- ಲೋಕಸಭಾ ಚುನಾವಣೆ ಗೆಲ್ಲಲು ರಣತಂತ್ರ

ಅಮಿತ್ ಶಾ ಮೀಟಿಂಗ್ ಅಜೆಂಡಾ ಏನು?: ರಾಜ್ಯದ 28 ಕ್ಷೇತ್ರಗಳ ಕ್ಷೇತ್ರವಾರು ಸರ್ವೆ ಮಾಡಿಸಿರೋ ಅಮಿತ್ ಶಾ ಅವರು 28 ಕ್ಷೇತ್ರಗಳಲ್ಲಿ ಸೋಲು- ಗೆಲುವಿನ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಯಾವ ಕ್ಷೇತ್ರ ಜೆಡಿಎಸ್‍ಗೆ ಬಿಟ್ಟು ಕೊಡಬೇಕು ಅನ್ನೋ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

AMITH SHA 1

ಈಗಾಗಲೇ ಜೆಡಿಎಸ್ (JDS) 5-6 ಕ್ಷೇತ್ರಗಳ ಪಟ್ಟಿ ಬಿಜೆಪಿ (BJP) ಹೈಕಮಾಂಡ್‍ಗೆ ನೀಡಿದೆ. ಈ ಪಟ್ಟಿಯಲ್ಲಿ ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ತುಮಕೂರು, ಬೆಂಗಳೂರು ಗ್ರಾಂ., ಬೆಂಗಳೂರು ಉತ್ತರ ಕ್ಷೇತ್ರಗಳನ್ನ ಪ್ರಸ್ತಾಪ ಮಾಡಿದೆ. 7 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಪ್ರಾಬಲ್ಯದ ಬಗ್ಗೆ ರಿಪೆÇೀರ್ಟ್ ಪಡೆಯುತ್ತಾರೆ. ಬಳಿಕ ಹೆಚ್‍ಡಿಕೆ ಸ್ಪರ್ಧೆ & ಕ್ಷೇತ್ರ, ಸ್ಪರ್ಧೆಯಿಂದಾಗುವ ಲಾಭಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article