ನವದೆಹಲಿ: ಮಾದಕ ವಸ್ತುಗಳ ಪ್ರಕರಣದಲ್ಲಿ ಕಾಂಗ್ರೆಸ್ (Congress) ನಾಯಕರು ಭಾಗಿಯಾಗುತ್ತಿರುವುದು ಅಪಾಯಕಾರಿ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಿಡಿಕಾರಿದ್ದಾರೆ.
ದೆಹಲಿಯಲ್ಲಿ 5,600 ಕೋಟಿ ರೂ. ಮೌಲ್ಯದ ಕೊಕೇನ್ (Cocaine) ಪತ್ತೆಯಾದ ಪ್ರಕರಣದ ಹಿಂದೆ ಕಾಂಗ್ರೆಸ್ ನಾಯಕನ ಕೈವಾಡದ ಆರೋಪದ ವಿಚಾರವಾಗಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾದಕ ವಸ್ತುಗಳ ವಿಷಯದಲ್ಲಿ ಮೋದಿ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ. ಇಂತಹ ಪ್ರಕರಣಗಳಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾವು ದಾಳಿ ಮಾಡುವ ಮೊದಲೇ ಅಪರಾಧ ಕೃತ್ಯಗಳನ್ನ ಬಿಟ್ಟುಬಿಡಿ: ರೌಡಿಗಳಿಗೆ ಎಸ್ಪಿ ಖಡಕ್ ವಾರ್ನಿಂಗ್
Advertisement
Advertisement
ಪಂಜಾಬ್, ಹರ್ಯಾಣ ಮತ್ತು ಇಡೀ ಉತ್ತರ ಭಾರತದಲ್ಲಿ ಮಾದಕ ವಸ್ತುಗಳಿಂದ ಯುವಕರು ಅನುಭವಿಸುತ್ತಿರುವ ದುಸ್ಥಿತಿಯನ್ನು ಎಲ್ಲರೂ ನೋಡುತ್ತಿದ್ದಾರೆ. ನಮ್ಮ ಸರ್ಕಾರವು ಮಾದಕ ವಸ್ತುಗಳ ಡೀಲರ್‌ಗಳ ರಾಜಕೀಯ ಸ್ಥಾನ ಅಥವಾ ಸ್ಥಾನಮಾನವನ್ನು ನೋಡದೆ ಇಡೀ ಮಾದಕ ದ್ರವ್ಯ ಜಾಲವನ್ನು ನಾಶಪಡಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಭಾರತವನ್ನು `ಮಾದಕವಸ್ತು ಮುಕ್ತ ದೇಶ’ ಮಾಡಲು ನಿರ್ಧರಿಸಿದೆ ಎಂದು ಅವರು ಎಚ್ಚರಿಸಿದ್ದಾರೆ.
Advertisement
Advertisement
ಇತ್ತೀಚೆಗೆ ದಕ್ಷಿಣ ದೆಹಲಿಯಲ್ಲಿ ಬುಧವಾರ ನಡೆಸಿದ ದಾಳಿಯಲ್ಲಿ 5,600 ಕೋಟಿ ರೂ. ಮೌಲ್ಯದ 562 ಕೆಜಿ ಕೊಕೇನ್ (Cocaine) ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾದ ಪ್ರಕರಣದ ಹಿಂದೆ ಕಾಂಗ್ರೆಸ್‌ನ (Congress) ಮಾಜಿ ಕಾರ್ಯಕರ್ತ ಇದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.
ಈ ಸಂಬಂಧ ಆರೋಪಿ ತುಷಾರ್ ಗೋಯಲ್ (40) ಎಂಬಾತನನ್ನು ಬಂಧಿಸಲಾಗಿದ್ದು, ಈ ಹಿಂದೆ 2022 ರವರೆಗೆ ದೆಹಲಿ ಪ್ರದೇಶ ಕಾಂಗ್ರೆಸ್‌ನ ಆರ್‌ಟಿಐ ಸೆಲ್‌ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾಗಿ ಆತ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದ. ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ | ಜಂಬೂಸವಾರಿ ವೇಳೆ ಬೆದರಿ ಓಡಿದ ಹಿರಣ್ಯ ಆನೆ – ತಪ್ಪಿದ ಭಾರೀ ಅನಾಹುತ