ಡಿಸ್ಪುರ್: ಬಿಜೆಪಿ ಅಧಿಕಾರಕ್ಕೆ ಬಂದರೆ ಮಣಿಪುರವನ್ನು ಡ್ರಗ್ಸ್ ಮುಕ್ತ ಮಾಡುತ್ತೇವೆ. ಇಲ್ಲಿರುವ ಕೆಲವು ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮಣಿಪುರ ಡ್ರಗ್ಸ್ ಮುಕ್ತವಾಗಲಿದೆ. ಬಂಡಾಯದ ಸಮಸ್ಯೆಯನ್ನು ಪರಿಹರಿಸುತ್ತೇವೆ. ನಾವು ಮಣಿಪುರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ನಮಗೆ ಇನ್ನೂ ಐದು ವರ್ಷ ಕೊಡಿ. ಎಲ್ಲಾ ದಂಗೆಕೋರ ಗುಂಪುಗಳೊಂದಿಗೆ ಸಂವಾದ ನಡೆಸುವ ಮೂಲಕ ನಾವು ಮಣಿಪುರದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿ
Advertisement
Advertisement
ಯಾರು, ಯಾರ ಮೇಲೂ ಗುಂಡು ಹಾರಿಸಲ್ಲ. ಯಾರೂ ಜೈಲಿಗೂ ಹೋಗುವುದಿಲ್ಲ. ಮಣಿಪುರವನ್ನು ಅಭಿವೃದ್ಧಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಮಣಿಪುರದಲ್ಲಿ ಡ್ರಗ್ಸ್ ಗಂಭೀರ ಸಮಸ್ಯೆಯಾಗಿದ್ದು, ಅದರಿಂದ ರಾಜ್ಯವನ್ನು ಮುಕ್ತಗೊಳಿಸುತ್ತೇವೆ. ನಾವು ಮುಂದಿನ ಐದು ವರ್ಷಗಳಲ್ಲಿ ಮಣಿಪುರವನ್ನು ಡ್ರಗ್ಸ್ ಮುಕ್ತಗೊಳಿಸಲು ಬೃಹತ್ ಅಭಿಯಾನವನ್ನು ಪ್ರಾರಂಭಿಸುತ್ತೇವೆ ಎನ್ನುವ ಶಾ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್
Advertisement
15 ವರ್ಷಗಳ ಆಡಳಿತದಲ್ಲಿ (2002-2017) 600 ಕ್ಕೂ ಹೆಚ್ಚು ಬಂದ್‍ಗಳು ನಡೆದಿವೆ. ಆದರೆ ಬಿಜೆಪಿ ಆಡಳಿತದಲ್ಲಿ ಯಾರೂ ಇರಲಿಲ್ಲ. ಮೋದಿ ಸರ್ಕಾರ 16,023 ಕೋಟಿ ರೂಪಾಯಿ ಬಂಡವಾಳದಲ್ಲಿ ರಸ್ತೆಗಳನ್ನು ನಿರ್ಮಿಸಿದೆ. ಪ್ರವಾಸಿಗರ ಭೇಟಿಯಲ್ಲಿ 272% ಹೆಚ್ಚಳವಾಗಿದೆ. 2017ರ ಮೊದಲು ರಾಜ್ಯದಲ್ಲಿ ಯಾವುದೇ ಮಹಿಳಾ ಪೊಲೀಸ್ ಠಾಣೆ ಇರಲಿಲ್ಲ ಆದರೆ ಬಿಜೆಪಿ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಒಂದನ್ನು ನಿರ್ಮಿಸಿದೆ ಎಂದು ಹೇಳಿದರು.