ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾರುಖ್ ಖಾನ್ (Shah Rukh Khan) ನಟನೆಯ ‘ದಿಲ್ ಸೇ’ ಸಿನಿಮಾದ ಚಯ್ಯಾ.. ಚಯ್ಯಾ.. (Chaiya Chaiya Song) ಹಾಡಿನ ಮೂಲಕ ಸ್ವಾಗತಿಸಿದ್ದು ಭಾರೀ ಪ್ರಶಂಸೆಗೆ ಕಾರಣವಾಗುತ್ತಿದೆ. ಬಾಲಿವುಡ್ ನ ಸೂಪರ್ ಹಿಟ್ ಹಾಡಿನ ಮೂಲಕ ಮೋದಿಯನ್ನು ಅಮೆರಿಕಾ ಸ್ವಾಗತಿಸಿದ್ದು ಸ್ವತಃ ಶಾರುಖ್ ಖಾನ್ ಗೂ ಹೆಮ್ಮೆ ತಂದಿದೆ.
ಈ ಕುರಿತು ಅಭಿಮಾನಿಯೊಬ್ಬರು ಶಾರುಖ್ ಖಾನ್ ಗೆ ಸೋಷಿಯಲ್ ಮೀಡಿಯಾದ ಮೂಲಕ ಪ್ರಶ್ನೆ ಮಾಡಿದ್ದಾರೆ. ‘ಮೋದಿ (Narendra Modi) ಅವರನ್ನು ಅಮೆರಿಕಾದಲ್ಲಿ ಚಯ್ಯಾ ಚಯ್ಯಾ ಹಾಡಿನ ಮೂಲಕ ಸ್ವಾಗತಿಸಿದ್ದು ವೈಯಕ್ತಿಕವಾಗಿ ನಿಮಗೆ ಏನು ಅನಿಸುತ್ತದೆ’ ಎಂದು ಕೇಳಿದ್ದಾರೆ. ಶಾರುಕ್ ಅಷ್ಟೇ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್
‘ಚಯ್ಯಾ ಚಯ್ಯಾ ಹಾಡು ರೈಲಿನಲ್ಲಿ ಚಿತ್ರೀಕರಣವಾಗಿದೆ. ಅಮೆರಿಕಾದಲ್ಲಿ (America) ಈ ಹಾಡಿನ ಮೂಲಕ ಮೋದಿ ಅವರನ್ನು ಸ್ವಾಗತಿಸುವಾಗ ನಾನು ಇರಬೇಕು. ನಾನೂ ಆ ಹಾಡಿಗೆ ಡಾನ್ಸ್ ಮಾಡಬೇಕಿತ್ತು ಅನಿಸುತ್ತಿದೆ. ಆದರೆ, ರೈಲು ತಗೆದುಕೊಂಡು ಹೋಗಲು ಅಲ್ಲಿಗೆ ಅನುಮತಿ ಕೊಡುತ್ತಿರಲಿಲ್ಲ’ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
ದಿಲ್ ಸೇ (Dil Se) ಸಿನಿಮಾದ ಚಯ್ಯಾ ಚಯ್ಯಾ ಹಾಡು ಶಾರುಖ್ ಖಾನ್ ನಟನೆಯ ಸಿನಿಮಾಗಳಲ್ಲಿನ ಸೂಪರ್ ಹಿಟ್ ಹಾಡುಗಳಲ್ಲಿ ಒಂದು. ರೈಲಿನ ಮೇಲೆ ಇಡೀ ಹಾಡನ್ನು ಕಂಪೋಸ್ ಮಾಡಲಾಗಿದೆ. ಬೆಟ್ಟ ಗುಡ್ಡಗಳ ನಡುವೆ ಹಾದು ಹೋಗುವ ರೈಲು. ಆ ರೈಲಿನ ಮೇಲೆ ಶಾರುಖ್ ಖಾನ್ ಜೊತೆ ಮಲೈಕಾ ಆರೋರ ಡಾನ್ಸ್ ಮಾಡಿದ್ದಾರೆ.