ಬೆಂಗಳೂರು: ದಿವಂಗತ ನಟ ಅಂಬರೀಶ್ ಅವರ ಕನಸಿನ ಮನೆಯ ಗೃಹ ಪ್ರವೇಶವನ್ನು ಪತ್ನಿ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಅವರು ಸರಳವಾಗಿ ಶುಕ್ರವಾರ ನೆರವೇರಿಸಿದ್ದಾರೆ.
ಬೆಂಗಳೂರಿನ ಜೆಪಿ ನಗರದ ರೆಬೆಲ್ ಸ್ಟಾರ್ ಅಂಬರೀಶ್ ನಿವಾಸಕ್ಕೆ ಗೃಹ ಪ್ರವೇಶ ಮಾಡಿ ಸುಮಲತಾ ಮತ್ತು ಅಭಿಷೇಕ್ ಹೋಗಿದ್ದಾರೆ. ಅಂಬರೀಶ್ ಅವರು ಬದುಕಿದ್ದಾಗ ಈ ಮನೆಯನ್ನ ಕೆಡವಿ ನವೀಕರಣ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಸುಮಾರು ಮೂರ್ನಾಲ್ಕು ವರ್ಷದಿಂದ ಇಲ್ಲಿ ನವೀಕರಣ ಕೆಲಸ ನಡೆಯುತ್ತಿತ್ತು.
Advertisement
ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿದೆ. ಹೀಗಿರುವಾಗಲೇ ಶುಕ್ರವಾರ ಒಳ್ಳೆಯ ದಿನ ಅನ್ನೋ ಕಾರಣಕ್ಕೆ ಪೂಜೆ ಸಲ್ಲಿಸಿ ಹೊಸ ಮನೆಗೆ ಹೋಗಿದ್ದಾರೆ. ಗೃಹ ಪ್ರವೇಶವನ್ನು ಸರಳವಾಗಿ ಮಾಡಿದ್ದು, ಆಪ್ತರು, ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.