ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ವೀಡನ್ ನಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ.
ಅಂಬರೀಶ್ ಮೃತಪಟ್ಟ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡೆಯನಿಗೆ ಸಾಥ್ ನೀಡಿದ್ರು ರೆಬಲ್ ಅಂಬಿ
Advertisement
ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.
— Darshan Thoogudeepa (@dasadarshan) November 24, 2018
Advertisement
ದರ್ಶನ್ ಮಂಡ್ಯದ ಬಸ್ ದುರಂತಕ್ಕೂ ಕಂಬನಿ ಮಿಡಿದಿದ್ದಾರೆ. ಪಾಂಡವಪುರದಿಂದ ಶಾಲಾ ಮಕ್ಕಳು ಹಾಗೂ ಪ್ರಯಾಣಿಕರನ್ನು ಕರೆದುಕೊಂಡು ಮಂಡ್ಯಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಕನಗನಮರಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿ 30ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಮನಕಲಕುವ ವಿಷಯ ತಿಳಿದು ತುಂಬಾ ಬೇಸರವಾಗಿದೆ ಎಂದು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
Advertisement
ಮೈಸೂರಿನಲ್ಲಿ ಕಾರು ಅಪಘಾತಗೊಂಡ ಹಿನ್ನೆಲೆಯಲ್ಲಿ ಯಜಮಾನ ಶೂಟಿಂಗ್ ಒಂದು ತಿಂಗಳು ಮುಂದಕ್ಕೆ ಹೋಗಿತ್ತು. ರಶ್ಮಿಕಾ ಮಂದಣ್ಣ ಮತ್ತು ದರ್ಶನ್ ಅವರ ಹಾಡಿನ ಭಾಗದ ಶೂಟಿಂಗ್ ನಡೆಸಲು ಚಿತ್ರ ತಂಡ ಸ್ವಿಡನ್‍ಗೆ ಹಾರಿತ್ತು. ಶೈಲಜಾನಾಗ್, ಬಿ ಸುರೇಶ್ ನಿರ್ಮಾಣದ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಹಾಡಿನ ಭಾಗದ ಚಿತ್ರೀಕರಣ ಮುಗಿದರೆ ಬಹುತೇಕ ‘ಯಜಮಾನ’ ಚಿತ್ರದ ಕೆಲಸ ಮುಗಿದಂತೆ. ಇದನ್ನೂ ಓದಿ: ಸಿಗರೇಟ್ ಬಿಟ್ರೆ ಎರಡು ದಿನ ಹೆಚ್ಚು ಬದುಕ್ತೀನಿ ಅಷ್ಟೇ: ಅಂಬರೀಶ್
Advertisement
Uffff Sweden is freezing ???? #Yajamana #songshooting @dasadarshan @iamRashmika pic.twitter.com/JCQWpUWjsn
— Shylaja Nag (@shylajanag) November 23, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv