ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಅನ್ನು ಸ್ವಾಧಿನಪಡಿಸಿಕೊಳ್ಳುತ್ತಿದ್ದಂತೆ ಸಿಇಒ ಪರಾಗ್ ಅಗರ್ವಾಲ್ (Parag Agarwal) ಸೇರಿದಂತೆ ಉನ್ನತ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಈ ಹೊಸ ಬದಲಾವಣೆಯ ನಡುವೆಯೇ ಟ್ವಿಟ್ಟರ್‌ನ ಸಹ ಸಂಸ್ಥಾಪಕ ಜಾಕ್ ಡಾರ್ಸೆ (Jack Dorsey) ಅವರು ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದಾರೆ ಎಂದು ವರದಿಯಾಗಿದೆ.
ಡಾರ್ಸೆ ಈಗಾಗಲೇ ಟ್ವಿಟ್ಟರ್‌ಗೆ ಪರ್ಯಾಯವಾಗಿ ಹೊಸ ಅಪ್ಲಿಕೇಶನ್‌ನ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಅಪ್ಲಿಕೇಶನ್ ಬೀಟಾ ಪರೀಕ್ಷೆಯಲ್ಲಿದೆ ಎಂದು ವರದಿಯಾಗಿದೆ.
- Advertisement 2-
- Advertisement 3-
ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ 1 ವಾರಕ್ಕೂ ಮೊದಲೇ ಡಾರ್ಸೆ ತನ್ನ ಹೊಸ ಅಪ್ಲಿಕೇಶನ್ ‘ಬ್ಲೂಸ್ಕೈ’ (Bluesky) ಗಾಗಿ ಬೀಟಾ ಪರೀಕ್ಷಕರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಮಸ್ಕ್ ತೆಕ್ಕೆಗೆ ಟ್ವಿಟ್ಟರ್ – ಅಗರ್‌ವಾಲ್‌ಗೆ ಸಿಗಲಿದೆ 345 ಕೋಟಿ ರೂ. ಪ್ಯಾಕೇಜ್
- Advertisement 4-
ಬ್ಲೂಸ್ಕೈ ಎಂಬ ಪದ ವಿಶಾಲವಾದ ತೆರದ ಜಾಗವನ್ನು ಸೂಚಿಸುತ್ತದೆ. ಇದು ಈ ಯೋಜನೆಗೆ ಒಂದು ಆಕಾರ ಕೊಡುವುದಕ್ಕೂ ಮೊದಲೇ ಇಡಲಾದ ಹೆಸರಾಗಿದೆ. ಇದು ಮುಂದೆಯೂ ನಮ್ಮ ಕಂಪನಿಯ ಹೆಸರಾಗಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಡಾರ್ಸೆ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಟ್ವಿಟ್ಟರ್‌ನ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದು, ಬಳಿಕ ಈ ವರ್ಷ ಟ್ವಿಟ್ಟರ್‌ನ ಆಡಳಿತ ಮಂಡಳಿಯಿಂದ ಕೆಳಗಿಳಿದಿದ್ದಾರೆ. ಇದನ್ನೂ ಓದಿ: ನಕಲಿ ಪದವಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದ ನಾಲ್ವರು ಅಧಿಕಾರಿಗಳು ವಜಾ