ದಾವಣಗೆರೆ: ಮಹಿಳೆಯರು ಅಂದರೆ ಮಹಿಳೆಯರು, ಮತ್ಯಾಕೆ ಆ ಚೀಟಿ, ಈ ಚೀಟಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಪ್ರಶ್ನಿಸಿದ್ದಾರೆ.
ಶಕ್ತಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬೇರೆ ರಾಜ್ಯದ ಮಹಿಳೆಯರೂ ಬಸ್ಸಿನಲ್ಲಿ ಉಚಿತವಾಗಿ (Free bus travel for women) ಸಂಚರಿಸಲಿ. ಸರ್ಕಾರ ಬಹಳ ಷರತ್ತು (Condition) ಹಾಕಬಾರದು. ಈ ಬಗ್ಗೆ ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: KERC ದರ ಏರಿಸಿದ್ದಕ್ಕೆ ವಿದ್ಯುತ್ ಬಿಲ್ ಹೆಚ್ಚಾಗಿದೆ: ಬೆಸ್ಕಾಂ ಸ್ಪಷ್ಟನೆ
ಯಾವುದೇ ದಾಖಲೆ ಇರಲಿ ಬಿಡಲಿ. ಅವರು ಹೆಣ್ಣುಮಕ್ಕಳಾಗಿದ್ದರೆ ಸಾಕು. ಮಹಿಳೆಯರ ಉಚಿತ ಓಡಾಟಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಷರತ್ತುಗಳಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಮೊದಲ ಗ್ಯಾರಂಟಿಯನ್ನ ರಾಜ್ಯ ಸರ್ಕಾರ ಭಾನುವಾರ ಈಡೇರಿಸಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ನಾರಿ ಶಕ್ತಿ ಯೋಜನೆಯನ್ನ ರಾಜ್ಯ ಸರ್ಕಾರ ಇಂದಿನಿಂದ ಜಾರಿಗೊಳಿಸಿದೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಎಲ್ಲರೂ ಬಸ್ ಹತ್ತಿ ಮೆಜೆಸ್ಟಿಕ್‍ವರೆಗೂ ಸಂಚರಿಸಿದರು. ಮೊದಲ ಪಿಂಕ್ ಟಿಕೆಟ್ ಅನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಸಿಎಂ ಸಿದ್ದರಾಮಯ್ಯ ವಿತರಿಸಿದರು.