ಹಾವೇರಿ: ಮಸೀದಿ ಮುಂಭಾಗದಲ್ಲಿರುವ ಭಗವಾಧ್ವಜ (Bhagwadhwaja) ತೆರವುಗೊಳಿಸಲು ಪ್ಲ್ಯಾನ್ ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮತ್ತು ರಬ್ಬಾನಿ ಸವಣೂರ ವಿರುದ್ಧ ಪ್ರಕರಣ ದಾಖಲಾದ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಏನಿದು ಧ್ವಜ ವಿವಾದ?
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಮಸೀದಿ (Mosque) ಬಳಿ ಇರುವ ಭಗವಾಧ್ವಜವನ್ನು ತೆರವುಗೊಳಿಸುವ ವಿಚಾರವಾಗಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಶಿಗ್ಗಾಂವಿಯ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ರಬ್ಬಾನಿ ಸವಣೂರ ಅವರ ಸಂಭಾಷಣೆ ನಡೆದಿದೆ ಎಂಬ ಆರೋಪಗಳೂ ಕೇಳಿಬಂದಿತ್ತು. ಇದನ್ನೂ ಓದಿ: ರಾತ್ರೋರಾತ್ರಿ ಇತಿಹಾಸ ಪ್ರಸಿದ್ಧ ಪಿಲಿಚಾಮುಂಡಿ ದೈವಸ್ಥಾನದ ನಿರ್ಮಾಣ ಹಂತದ ಭಂಡಾರಮನೆ ಧ್ವಂಸ
Advertisement
Advertisement
ಈ ಕುರಿತ ದೂರವಾಣಿ ಸಂಭಾಷಣೆ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಹಾವೇರಿ ಪೊಲೀಸರು ಮಾಜಿ ಶಾಸಕ ಖಾದ್ರಿ ಹಾಗೂ ರಬ್ಬಾನಿ ಸವಣೂರ ವಿರುದ್ಧ ಹುಲಗೂರು ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಧ್ವನಿಮುದ್ರಣ ಮಾಡಿಕೊಂಡು ಆಡಿಯೋ ಎಫ್‌ಎಸ್‌ಎಲ್ ವರದಿಗೆ ಕಳಿಸಲು ನಿರ್ಧಾರ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಾರಡಗಿ ಗ್ರಾಮದಲ್ಲಿ ಮಸೀದಿ ಬಳಿಯ ಭಗವಾ ಧ್ವಜ ಇರುವ ಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬೇರೆ ರಾಜ್ಯಗಳಲ್ಲಿ ಬಿಜೆಪಿ ಎಷ್ಟೆಷ್ಟು ಇನ್ವೆಸ್ಟ್‌ಮೆಂಟ್ ಮಾಡಿದೆ ಎಂಬುದನ್ನು ಬಹಿರಂಗ ಪಡಿಸಲಿ – ಸ್ವಪಕ್ಷಕ್ಕೆ ಹೆಬ್ಬಾರ್ ಸವಾಲು
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ಎರಡು ಕೋಮುಗಳ ಮಧ್ಯೆ ದ್ವೇಷ ವೈಮನಸ್ಸಿನ ಭಾವನೆ ಹೆಚ್ಚಿಸುವ ಪ್ರಯತ್ನ ನಡೆದಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ಒಳಸಂಚು ರೂಪಿಸಿರುವ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ರಬ್ಬಾನಿ ಸವಣೂರು ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ವಿಶೇಷ ಟೀಂನಿಂದ 1,000 ಕ್ಕೂ ಅಧಿಕ ಸಿಸಿಟಿವಿ ಪರಿಶೀಲನೆ