ಬೆಂಗಳೂರು: ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಜಾತಿ ನಿಂದನೆ ಆರೋಪದಡಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್ (D Sudhakar) ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಸುಧಾಕರ್ ಅವರು ಮಹಿಳೆಯೊಬ್ಬರಿಗೆ ಆವಾಜ್ ಹಾಕಿರುವ ವೀಡಿಯೋ (Video) ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವೀಡಿಯೋ ಫೇಕ್ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಡಿ ಸುಧಾಕರ್, ನಾನು ಯಾರಿಗೂ ಧಮ್ಕಿ ಹಾಕಿಲ್ಲ, ಯಾವುದೇ ಕಾನೂನು ಹೊರತುಪಡಿಸಿ ವ್ಯವಹಾರ ನಡೆದಿಲ್ಲ. ಇದು ಕಂಪನಿಗೆ ಸಂಬಂಧಿಸಿದ ವ್ಯವಹಾರ. ಕಂಪನಿಯಲ್ಲಿ ನಾನು ನಿರ್ದೇಶಕ ಮಾತ್ರ. ವೈಯಕ್ತಿಕವಾಗಿ ಇದಕ್ಕೂ ನನಗೂ ಸಂಬಂಧವಿಲ್ಲ. ಮಂತ್ರಿ ಎಂಬ ಕಾರಣಕ್ಕಾಗಿ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವೀಡಿಯೋ ವಿಚಾರವಾಗಿ ಮಾತನಾಡಿದ ಅವರು, ದೂರು ನೀಡಿರುವ ಸುಬ್ಬಮ್ಮ ಅವರನ್ನು ನಾನು ಭೇಟಿ ಮಾಡಿಯೇ ಸುಮಾರು ವರ್ಷಗಳು ಆಗಿವೆ. ನಾನು ಅವರಿರೋ ಜಾಗಕ್ಕೂ ಹೋಗಿಲ್ಲ. ವೈರಲ್ ಆಗಿರೋ ವೀಡಿಯೋವನ್ನು ಈಗಿನ ಟೆಕ್ನಾಲಜಿ ಬಳಸಿ ತಿರುಚಲಾಗಿದೆ. ಇದೆಲ್ಲಾ ಶುದ್ಧ ಸುಳ್ಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ: ಸಚಿವ ಸುಧಾಕರ್ ಧಮ್ಕಿ
ಈಗ ಯಾರನ್ನು ಹೇಗೆ ಬೇಕೋ ಹಾಗೆ ವೀಡಿಯೋಗಳನ್ನು ಎಡಿಟ್ ಮಾಡಿಕೊಳ್ಳುತ್ತಾರೆ. ನಾನು ಅವರನ್ನು 7-8 ವರ್ಷಗಳ ಹಿಂದೆ ಭೇಟಿ ಮಾಡಿದ್ದೆ. ಅಷ್ಟು ವರ್ಷಗಳ ಹಿಂದೆ ಏನಾಗಿತ್ತೋ ನನಗೂ ನೆನಪಿಲ್ಲ. ಇದು ಸುಮಾರು 20 ವರ್ಷಗಳ ಹಿಂದೆ ನಡೆದ ವ್ಯಾಪಾರ. ಕಾನೂನು ಬದ್ಧವಾಗಿ ನನ್ನ ಕಂಪನಿ ಅದನ್ನು ಖರೀದಿ ಮಾಡಿತ್ತು. ಕಾನೂನು ಬಿಟ್ಟು ಯಾವುದೇ ವ್ಯವಹಾರ ನಡೆಯಲ್ಲ, ನಾನು ಆ ರೀತಿ ಮಾಡಿಲ್ಲ. ಅವರು ಹಲವು ವರ್ಷಗಳ ಹಿಂದೆ ಕಚೇರಿಗೆ ಯಾವಾಗಲೂ ಬರುತ್ತಿದ್ದರು. ಯಾವಾಗ ಹೇಗೆ ವೀಡಿಯೋ ಮಾಡಿದ್ದಾರೋ ಗೊತ್ತಿಲ್ಲ. ನಾನು ಆ ರೀತಿ ಮಾತಾಡೋ ವ್ಯಕ್ತಿಯೂ ಅಲ್ಲ ಎಂದಿದ್ದಾರೆ.
ನನ್ನ 60 ವರ್ಷದ ಇತಿಹಾಸದಲ್ಲಿ ಎಲ್ಲಿಯೂ ಅಂತಹ ಕಳಂಕ ಇಲ್ಲ. ಈಗ ಸಚಿವನಾಗಿದ್ದೇನೆ ಎಂಬ ಕಾರಣಕ್ಕೆ ಈ ರೀತಿ ತೇಜೋವಧೆ ಮಾಡಲಾಗುತ್ತಿದೆ. ಆ ರೀತಿ ಮಾತನಾಡೋ ಸಂಸ್ಕೃತಿಯಿಂದ ನಾನು ಬಂದಿಲ್ಲ. ನಾವು ಧರ್ಮವನ್ನು ಎತ್ತಿಹಿಡಿಯೋ ಜೈನ ಧರ್ಮದಲ್ಲಿ ಹುಟ್ಟಿದ್ದೇನೆ. ಅಹಿಂಸಾ ಮಾರ್ಗದಲ್ಲಿ ಹೋಗಿದ್ದೇನೆ. ಹಿಂಸೆಯಲ್ಲಿ ನನಗೆ ನಂಬಿಕೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ. ಸತ್ಯಾಂಶ ಹೊರ ಬರಲಿ, ನನಗೆ ನ್ಯಾಯ ದೊರೆಯಲಿ. ನಾನು ತಪ್ಪು ಮಾಡಿದ್ದು ನಿಜವೇ ಆಗಿದ್ರೆ ಶಿಕ್ಷೆ ಆಗಲಿ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಅನಿಷ್ಟ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ: ಬೊಮ್ಮಾಯಿ
Web Stories