ತುಮಕೂರು: ಕಾರ್ಯಕ್ರಮವೊಂದರಲ್ಲಿ ಎಣ್ಣೆ ಏಟಿನಲ್ಲಿದ್ದ ಅಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆ ಎಸ್‌ಪಿಗೆ ದೂರು ನೀಡಿದ್ದಾರೆ.
ಹೌದು, ತುಮಕೂರಿನ(Tumakuru) ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ಆರ್.ರಾಜೇಂದ್ರನ್ ಮೇಲೆ ಅಸಭ್ಯ ವರ್ತನೆ, ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿಬಂದಿದೆ. ಡೆಪ್ಯೂಟಿ ಕಮಾಂಡೆಂಟ್ ರಾಜೇಂದ್ರನ್ ಗೃಹರಕ್ಷಕಿಯರ(Home Guards) ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನ ಬೇಕಾ, ನರಕ ಬೇಕಾ ಅಂತ ಕೇಳಿದ್ರೆ ನಾನು ನರಕವನ್ನೇ ಆಯ್ಕೆ ಮಾಡ್ತೀನಿ: ಜಾವೇದ್ ಅಖ್ತರ್
ಪೊಲೀಸರು ಹೇಗೆ ನಮ್ಮ ರಕ್ಷಣೆ ಮಾಡ್ತಾರೋ ಅದೇ ರೀತಿ ಗೃಹರಕ್ಷಕ ಇಲಾಖೆ ಕೂಡ ಸಾರ್ವಜನಿಕರ ರಕ್ಷಣೆಯ ಕೆಲಸ ಮಾಡುತ್ತದೆ. ಹೀಗಾಗಿ ಗೃಹರಕ್ಷಕ ದಳದ ಸಿಬ್ಬಂದಿಯ ಮೇಲೂ ಸಾರ್ವಜನಿಕರಿಗೆ ಅಷ್ಟೇ ಗೌರವ ಇದೆ. ಆದ್ರೆ ಈ ಇಲಾಖೆಯ ಪ್ರಮುಖ ಹುದ್ದೆಯಲ್ಲಿರೋ ಅಧಿಕಾರಿಯ ವಿರುದ್ಧವೇ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಇದನ್ನೂ ಓದಿ: Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 8 ಮಂದಿ ಸಜೀವ ದಹನ
ಟ್ರೈನಿಂಗ್ ಕ್ಯಾಂಪ್ ವೇಳೆ ಎಣ್ಣೆ ಏಟಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನೊಂದ ಗೃಹರಕ್ಷಕಿಯರು ಈಗಾಗಲೇ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಮಹಿಳಾ ಆಯೋಗ, ತುಮಕೂರು ಜಿಲ್ಲಾಧಿಕಾರಿ, ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ದೂರು ನೀಡಿದ್ದಾರೆ.
ಅಷ್ಟೇ ಅಲ್ಲದೆ, ಈ ಡೆಪ್ಯೂಟಿ ಕಮಾಂಡೆಂಟ್(Deputy Commandant) ತಮ್ಮ ಜೊತೆ ತೋರಿಸಿದ ಅನುಚಿತ ವರ್ತನೆ ಹಾಗೂ ತನಗಾದ ಕಸಿವಿಸಿ ಅನುಭವವನ್ನ ಗೃಹರಕ್ಷಕಿಯೊಬ್ಬರು ತನ್ನ ಮೇಲಧಿಕಾರಿಗಳಿಗೆ ತಿಳಿಸಿರುವ ಆಡಿಯೋ ಕೂಡ ಲಭ್ಯವಾಗಿದೆ. ಇದನ್ನೂ ಓದಿ: ಟಿಬಿ ಡ್ಯಾಂನಲ್ಲಿ ಅಧಿಕಾರಿಯ ಪುತ್ರನ ನಿಶ್ಚಿತಾರ್ಥ – ನಿಷೇಧವಿದ್ದರೂ ಖಾಸಗಿ ಕಾರ್ಯಕ್ಕೆ ಬಳಸಿಕೊಂಡು ನಿಯಮ ಉಲ್ಲಂಘನೆ
ಏನಿದು ಪ್ರಕರಣ?
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ಕಳೆದ ಏ. 24ರಿಂದ ಮೇ 3ರವರೆಗೆ ಗೃಹರಕ್ಷಕ ದಳದ ಸಿಬ್ಬಂದಿಗೆ ತರಬೇತಿ ಶಿಬಿರವನ್ನ ಹಮ್ಮಿಕೊಳ್ಳಲಾಗಿತ್ತು. ಈ ಕ್ಯಾಂಪ್ ವೇಳೆ ಏ. 26ರಂದು ರಾತ್ರಿ 9.50ರಿಂದ 10 ಗಂಟೆಯ ಸುಮಾರಿಗೆ ತರಬೇತಿಗೆ ಬಂದಿದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನ ಅಲ್ಲಿದ್ದವರು ಮೇಲಧಿಕಾರಿಗಳಿಗೆ ತಿಳಿಸಿದ್ದರು.
ಈ ವೇಳೆ ಅಲ್ಲೇ ಇದ್ದ ಡೆಪ್ಯೂಟಿ ಕಮಾಂಡೆಂಟ್ ಆರ್.ರಾಜೇಂದ್ರನ್, ಸಾಕಷ್ಟು ಮಹಿಳಾ ಸಿಬ್ಬಂದಿ ಇದ್ದರೂ ಕೂಡ ಅವರಿಗೆ ಪ್ರಥಮ ಚಿಕಿತ್ಸೆ ಮಾಡಲು ಬಿಡದೇ, ಕುಡಿದ ಮತ್ತಿನಲ್ಲಿ ತಾನೇ ಪ್ರಥಮ ಚಿಕಿತ್ಸೆ ಮಾಡುವ ನೆಪದಲ್ಲಿ ಮಹಿಳೆಯ ಅಂಗಾಂಗಗಳನ್ನು ಮುಟ್ಟಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾರನೇ ದಿನ ತರಬೇತಿ ವೇಳೆ ಕಾಲ್ನಡಿಗೆಯಲ್ಲಿ ಸಿದ್ದರಬೆಟ್ಟ ಹತ್ತುವಾಗ ಮತ್ತೋರ್ವ ಗೃಹರಕ್ಷಕಿಯೊಂದಿಗೂ ಇದೇ ರೀತಿಯಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: Cannes Film Festival 2025: ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್
ಇನ್ನು ಡೆಪ್ಯೂಟಿ ಕಮಾಂಡೆಂಟ್ ಅವರಿಗೆ ಟ್ರೈನಿಂಗ್ ಕ್ಯಾಂಪ್ ವೇಳೆ ಉಳಿದುಕೊಳ್ಳಲು ಅತಿಥಿ ಗೃಹದ ವ್ಯವಸ್ಥೆ ಮಾಡಿದ್ದರೂ ಸಹ ಮಹಿಳಾ ಗೃಹರಕ್ಷಕಿಯರ ವಾಸ್ತವ್ಯಕ್ಕೆ ನೀಡಿದ್ದ ಕೊಠಡಿಗಳ ಬಳಿ ಇದ್ದ ಒಂದು ಕೊಠಡಿಯಲ್ಲಿ ಒಬ್ಬರೇ ಉಳಿದುಕೊಂಡಿದ್ದರು. ದಿನ ರಾತ್ರಿ ಅವರ ಕೊಠಡಿಯಲ್ಲಿ ಕೆಲವು ಅಧಿಕಾರಿಗಳು ಸೇರಿಕೊಂಡು ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಪಂಜಾಬ್‌ನಲ್ಲಿ ನಿಗೂಢ ಸಾವು
ಆರ್.ರಾಜೇಂದ್ರನ್ ತುಮಕೂರಿಗೆ ಬರುವ ಮುಂಚೆ ಕೋಲಾರದಲ್ಲಿ ಕಾರ್ಯನಿರ್ವಹಿಸುವಾಗ ಗೃಹರಕ್ಷಕ ದಳದ ಸಿಬ್ಬಂದಿಗೆ ಬೆಂಗಳೂರಿನ ಹಲಸೂರು ಮೆಟ್ರೋ ಸ್ಟೇಷನ್‌ನಲ್ಲಿ ಡ್ಯೂಟಿ ಹಾಕಿಸಿಕೊಡುತ್ತೇನೆ ಎಂದು ಹೇಳಿ 6000 ರೂ. ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಅಲ್ಲದೇ ಕರ್ತವ್ಯ ಲೋಪದ ಮೇಲೆ ಹಲವಾರು ಬಾರಿ ವರ್ಗಾವಣೆ, ಅಮಾನತುಗೊಂಡಿದ್ದರು ಎನ್ನಲಾಗಿದೆ. ಇದೀಗ ಈ ಡೆಪ್ಯುಟಿ ಕಮಾಂಡೆಂಟ್ ವರ್ತನೆಯಿಂದ ಇಡೀ ಗೃಹರಕ್ಷಕ ದಳ ತಲೆತಗ್ಗಿಸುವಂತಾಗಿದೆ.