ಇಸ್ಲಾಮಾಬಾದ್: ಪಾಕಿಸ್ತಾನವು ಇಸ್ಲಾಂ (Islam Nation Pakistan) ಧರ್ಮದ ಹೆಸರಿನಲ್ಲಿ ಸ್ಥಾಪನೆಯಾದ ಏಕೈಕ ರಾಷ್ಟ್ರವಾಗಿದೆ. ಆದ್ದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಈ ದೇಶವನ್ನು ಅಲ್ಲಾಹನು (Allah )ರಕ್ಷಿಸಿ ಅಭಿವೃದ್ಧಿಪಡಿಸುತ್ತಾನೆ. ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಅಲ್ಲಾಹನೇ ಜವಾಬ್ದಾರನಾಗಿರುತ್ತಾನೆ ಎಂದು ಪಾಕ್ ಹಣಕಾಸು ಸಚಿವ ಇಶಾಕ್ ದಾರ್ (Ishaq Dar) ಹೇಳಿದ್ದಾರೆ.
Advertisement
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ಇಸ್ಲಾಂ ಹೆಸರಿನಲ್ಲಿ ರಚಿಸಲ್ಪಟ್ಟಿರುವುದರಿಂದ ಅದು ಪ್ರಗತಿಯಾಗುತ್ತದೆ ಎಂಬ ಸಂಪೂರ್ಣ ನಂಬಿಕೆ ಇದೆ. ಅಲ್ಲಾಹನು ಪಾಕಿಸ್ತಾನ ಸೃಷ್ಟಿಲು ಸಾಧ್ಯವಾದ ಮೇಲೆ ದೇಶವನ್ನೂ ರಕ್ಷಿಸಿ, ಅಭಿವೃದ್ಧಿಪಡಿಸುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!
Advertisement
Advertisement
ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಸೇರಿದಂತೆ ಈ ಹಿಂದಿನ ಸರ್ಕಾರಗಳೆಲ್ಲಾ ಆನುವಂಶಿಕವಾಗಿ ಹಲವಾರು ಸಮಸ್ಯೆಗಳನ್ನು ತಂದೊಡ್ಡಿವೆ. ಆದರೀಗ ನಮ್ಮ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಪಾಕಿಸ್ತಾನದ ಸ್ಥಿತಿಯನ್ನ ಸುಧಾರಿಸಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರದ ಜೊತೆಗೆ ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರ ಆಗಬೇಕು: ಯೋಗಿ ಕರೆ
Advertisement
2013-17ರ ಅವಧಿಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅವಧಿಯಲ್ಲಿ ಪಾಕ್ ಆರ್ಥಿಕತೆ ಬಲಿಷ್ಠವಾಗಿತ್ತು. ಸ್ಟಾಕ್ ಎಕ್ಸ್‌ಚೇಂಜ್ ಮಾರುಕಟ್ಟೆಯಲ್ಲಿ ದಕ್ಷಿಣ ಏಷ್ಯಾದಲ್ಲೇ ಉನ್ನತ ಸ್ಥಾನ ಪಡೆದುಕೊಂಡು, ಬೆಳವಣಿಗೆಯ ಹಾದಿಯಲ್ಲಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಎದುರಾದ ಹಲವಾರು ಸಮಸ್ಯೆಗಳು ದೇಶದ ದುಸ್ಥಿತಿಗೆ (Pakistan Economic Crisis) ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್ ಹಿಂದೆ ಓಟ – ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದ ರೂಪಾಯಿ (Pakistani Rupee) ಮೌಲ್ಯ ಪಾತಾಳಕ್ಕೆ ಕುಸಿದಿದೆ. ಮೂರು ವಾರಗಳಿಗೆ ಆಗುವಷ್ಟು ಮಾತ್ರ ಸೌಲಭ್ಯಗಳನ್ನು ಹೊಂದಿದ್ದು, ಬಾಹ್ಯ ಮೂಲಗಳಿಂದ ಹಣಕಾಸು ನೆರವು ಪಡೆಯುವಲ್ಲಿಯೂ ವಿಫಲವಾಗಿದೆ. ಸದ್ಯ ಷರತ್ತುಗಳ ಮೇಲೆ ಐಎಂಎಫ್ ನಿಂದ 6 ಶತಕೋಟಿ ಹಣಕಾಸು ನೆರವು ಪಡೆಯಲು ಪ್ರಯತ್ನಿಸುತ್ತಿದೆ.
ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಒಂದೇ ದಿನ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ 24 ರೂ. ಕುಸಿತ ಕಂಡಿದ್ದು 255 ರೂ.ಗೆ ತಲುಪಿದೆ. ಕಳೆದ ಜನವರಿಯಲ್ಲಿ ಡಾಲರ್ ಎದುರು 175 ರೂ.ನಷ್ಟಿತ್ತು. ಇದೀಗ 255 ರೂ.ಗೆ ತಲುಪಿದೆ. ಈ ನಡುವೆ ಮಾರುಕಟ್ಟೆ ಶಕ್ತಿಗಳಿಗೆ ತಮ್ಮ ಕರೆನ್ಸಿ ದರವನ್ನು ನಿರ್ಧರಿಸಲು ಅವಕಾಶ ನೀಡುವಂತೆ ಪಾಕ್ ಸರ್ಕಾರಕ್ಕೆ ಷರತ್ತು ವಿಧಿಸಿದೆ. ಈ ಷರತ್ತನ್ನು ಪಾಕ್ ಸರ್ಕಾರ ಸಹ ಒಪ್ಪಿಕೊಂಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k