ಬೆಂಗಳೂರು: ಎಲ್ಲಾ ಜೈನಮುನಿಗಳಿಗೂ ರಕ್ಷಣೆ ಕೊಡಬೇಕು ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ (MLA Sunil Kumar) ಒತ್ತಾಯ ಮಾಡಿದ್ದಾರೆ.
ವಿಧಾನಸಭೆಯಲ್ಲಿ (Vidhnasabha) ಜೈನಮುನಿಗಳ ಹತ್ಯೆ ವಿಚಾರ ಚರ್ಚೆಯ ವೇಳೆ ಶಾಸಕರು ಮಾತನಾಡಿ ಸರ್ಕಾರಕ್ಕೆ ಒತ್ತಡ ಹಾಕಿದ್ದಾರೆ. ಜೈನ ಮುನಿಗಳನ್ನು (Jain Monk) ನಾನು ಬಹಳ ಹತ್ತಿರದಿಂದ ನೋಡಿದವನು. ನನ್ನ ಕ್ಷೇತ್ರದಲ್ಲಿ ಗುದ್ದಲಿ ಪೂಜೆಗೆ ಒಬ್ಬರು ಮುನಿಗಳು ಬಂದಿದ್ರು. ಆ ಗುಂಡಿಯಲ್ಲಿ ಇರುವೆ ಓಡಾಡ್ತಿವೆ ಅದಕ್ಕೆ ಗುದ್ದಲಿ ಪೂಜೆ ಮಾಡಲ್ಲ ಅಂತಾ ಕೂತಿದ್ರು. ಆ ನಂತರ ಆ ಇರುವೆಗಳನ್ನು ತಾವೇ ಹೊರಗೆ ಹಾಕಿ, ಗುದ್ದಲಿ ಪೂಜೆ ಮಾಡಿದ್ರು ಎಂದು ಹೇಳಿದರು. ಇದನ್ನೂ ಓದಿ: ಜೈನ ಮುನಿ ಹತ್ಯೆ ಹಿಂದೆ ಐಸಿಸ್ ಚಿತಾವಣೆಯಿದೆ – ಶಾಸಕ ಸಿದ್ದು ಸವದಿ
ಯಾವ ಜೀವಕ್ಕೂ ಹಾನಿ ಮಾಡಬಾರದು ಎಂಬ ಜೈನ ಮುನಿಗಳ ಸ್ವಭಾವ. ಇಂತಹ ಜೈನ ಮುನಿಗಳನ್ನು ಇಂದು ಕೊಲೆ ಮಾಡಿದ್ದಾರೆ. ಯಾವುದೋ ಒಂದು ಕೋಮಿಗಾಗಿ ನಿಜವಾದ ತನಿಖೆ ಬಹಿರಂಗ ಮಾಡಿಲ್ಲ ಅಂದರೆ ಹೇಗೆ..?. ತಕ್ಷಣ ಸರ್ಕಾರ ಯಾವುದಕ್ಕೂ ಮಣಿಯದೇ, ಸಂಪೂರ್ಣ ತನಿಖೆ ಮಾಡಲೇಬೇಕು. ಸಿಬಿಐ ತನಿಖೆಗೆ ಮಾಡಿಸಲೇಬೇಕು. ಆರೋಪಿಗಳ ಹೆಸರು ಬಹಿರಂಗ ಪಡಿಸಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]