LatestLeading NewsMain PostNational

JNUನಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹ ಖಂಡನೀಯ – ಅಖಿಲ ಭಾರತ ಬ್ರಾಹ್ಮಣ ಮಹಾಸಂಘ

ನವದೆಹಲಿ: JNUನಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹವನ್ನು (Anti-Brahmin Slogans) ಅಖಿಲ ಭಾರತ ಬ್ರಾಹ್ಮಣ ಮಹಾಸಂಘ (All India Brahmin Mahasangha) ಖಂಡಿಸಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸದಸ್ಯ ತ್ರಿವಿಕ್ರಮ ಜೋಶಿ ಸಮಾಜದಲ್ಲಿನ ಸಣ್ಣ ಮನಸ್ಥಿತಿಯುಳ್ಳ ವ್ಯಕ್ತಿಗಳು ಈ ಬರಹ ಬರೆದಿದ್ದಾರೆ. ಇದು ಖಂಡನೀಯವಾದದ್ದು ಎಂದರು.

ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಸಹ ನಡೆಯುತ್ತಿದೆ. ನಾವು ಈ ಪ್ರಕರಣವನ್ನು ಸಾರ್ವಜನಿಕಗೊಳಿಸಲು ಇಷ್ಟ ಪಡೋದಿಲ್ಲ. ಅವರು ನಮ್ಮ ಬಗ್ಗೆ ಹಾಗೆಲ್ಲ ಬರೆದಿದ್ದಾರೆ. ಆದರೆ ನಾವು ಅವರಂತೆ ಯೋಚನೆ ಮಾಡೋಕೆ ಆಗೋಲ್ಲ ಎಂದು ತಿಳಿಸಿದರು. ಇದನ್ನೂ ಓದಿ: “ಬ್ರಾಹ್ಮಣ ಭಾರತ್ ಛೋಡೋ” – ಜೆಎನ್‍ಯು ಕ್ಯಾಂಪಸ್ ಗೋಡೆಗಳ ಮೇಲೆ ವಿವಾದಾತ್ಮಕ ಬರಹ

JNUನಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹ ಖಂಡನೀಯ - ಅಖಿಲ ಭಾರತ ಬ್ರಾಹ್ಮಣ ಮಹಾಸಂಘ

ಆ ರೀತಿ ಮಾಡಿದವರು ಯಾರೋ ವಿದ್ಯಾರ್ಥಿಗಳೇ ಇರಬಹುದು. ಹೀಗಾಗಿ ನಾವು ಈ ವಿಚಾರವನ್ನ ಮತ್ತಷ್ಟು ದೊಡ್ಡದು ಮಾಡಿದ್ರೆ ವಿದ್ಯಾರ್ಥಿಯ ಜೀವನ ಹಾಳಾಗಬಹುದು. ಹೀಗಾಗಿ ಈ ವಿಷ್ಯ ದೊಡ್ಡದು ಮಾಡೋಲ್ಲ ಎಂದು ಹೇಳಿದರು.

ಇದೇ ವೇಳೆ ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ವತಿಯಿಂದ ಆಯೋಜಿಸುತ್ತಿರುವ ಬ್ರಹ್ಮೋದ್ಯೋಗ ಮೇಳದ ಬಗ್ಗೆ ಮಾತನಾಡಿ, ಫೆಬ್ರವರಿ 25 ರಿಂದ ಮಾರ್ಚ್ 1 ರ ತನಕ ಉದ್ಯೋಗ ಮೇಳ ನಡೆಯಲಿದೆ. 500 ಬ್ರಾಹ್ಮಣ ಸಮುದಾಯದ ಕೈಗಾರಿಕೋದ್ಯಮಿಗಳು ಹಾಗೂ 500 ವರ್ತಕರು, 500 ವೈದ್ಯರು, 500 ವಕೀಲರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಮುದಾಯವು ಇದರ ಲಾಭ ಪಡೆಯಬೇಕು ಎಂದರು. ಇದನ್ನೂ ಓದಿ: ಭಾರತ ಜಾತ್ಯತೀತ ರಾಷ್ಟ್ರ ಎಂದ ಸುಪ್ರೀಂ – ಠಾಕೂರ್‌ ಚಂದ್ರರನ್ನು ʼಪರಮಾತ್ಮʼ ಎಂದು ಘೋಷಿಸಲು ಕೋರಿದ್ದ PIL ವಜಾ

Live Tv

Leave a Reply

Your email address will not be published. Required fields are marked *

Back to top button