LatestLeading NewsMain PostNational

ಭಾರತ ಜಾತ್ಯತೀತ ರಾಷ್ಟ್ರ ಎಂದ ಸುಪ್ರೀಂ – ಠಾಕೂರ್‌ ಚಂದ್ರರನ್ನು ʼಪರಮಾತ್ಮʼ ಎಂದು ಘೋಷಿಸಲು ಕೋರಿದ್ದ PIL ವಜಾ

ನವದೆಹಲಿ: ಭಾರತ ಜಾತ್ಯತೀತ ರಾಷ್ಟ್ರ. ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ (Supreme Court), ಶ್ರೀ ಶ್ರೀ ಠಾಕೂರ್‌ ಅನುಕುಲ್‌ ಚಂದ್ರ (Thakur Anukulchandra) ಅವರನ್ನು ದೇವರೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್‌ನ್ನು ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು, ಪಿಐಎಲ್‌ ಸಲ್ಲಿಸಿದ್ದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದೆ. ಇದನ್ನೂ ಓದಿ: ಜರ್ಮನಿ ಸಚಿವರ ಭಾರತ ಪ್ರವಾಸ – ಹಲವು ಒಪ್ಪಂದಗಳಿಗೆ ಇಂದು ಸಹಿ

ಭಾರತ ಜಾತ್ಯತೀತ ರಾಷ್ಟ್ರ ಎಂದ ಸುಪ್ರೀಂ - ಠಾಕೂರ್‌ ಚಂದ್ರರನ್ನು ʼಪರಮಾತ್ಮʼ ಎಂದು ಘೋಷಿಸಲು ಕೋರಿದ್ದ PIL ವಜಾ

ಅರ್ಜಿದಾರ ಉಪೇಂದ್ರ ನಾಥ್‌ ದಾಲೈ ತನ್ನ ಅರ್ಜಿಯನ್ನು ಓದಲು ಮುಂದಾದ. ಈ ವೇಳೆ ನಿಲ್ಲಿಸಿ ಎಂದ ಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೇ? ಇದು ಹೇಗೆ ಸಾಧ್ಯ? ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಪಾಲಿಸುವ ಹಕ್ಕಿದೆ. ಹೀಗಿರುವಾಗ ನಿರ್ಧಿಷ್ಟ ಧರ್ಮವನ್ನು ಪಾಲಿಸಿ ಅಂತಾ ಜನರಿಗೆ ನಾವು ಹೇಗೆ ಹೇಳಲು ಸಾಧ್ಯ? ನೀವು ಬೇಕಾದರೆ ಠಾಕೂರ್‌ ಚಂದ್ರರನ್ನು ಪರಮಾತ್ಮ ಎಂದು ಪರಿಗಣಿಸಿ. ಅದನ್ನು ಬೇರೆಯವರ ಮೇಲೆ ಯಾಕೆ ಹೇರುತ್ತೀರಿ ಎಂದು ಹೇಳಿದೆ.

ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಭಾರತದ ನಾಗರಿಕರು ಠಾಕೂರ್ ಅನುಕೂಲ್ ಚಂದ್ರರನ್ನು ‘ಪರಮಾತ್ಮ’ ಎಂದು ಸ್ವೀಕರಿಸಬೇಕೆಂದು ಹೇಳಲು ಆಗುವುದಿಲ್ಲ. ಅರ್ಜಿದಾರರ ಮನವಿಯು ಪ್ರಚಾರದಂತೆ ತೋರುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕ ಶಾಕ್‌!

ಠಾಕೂರ್‌ ಚಂದ್ರ ಅವರು ಬಾಂಗ್ಲಾದೇಶದ ಪಬ್ನಾದಲ್ಲಿ 1888ರ ಸೆಪ್ಟೆಂಬರ್ 14 ರಂದು ಜನಿಸಿದರು. ಅಧ್ಯಾತ್ಮ ಪ್ರತಿಪಾದಕರು. ಅಲ್ಲದೇ ಸತ್ಸಂಗದ ಸ್ಥಾಪಕರು.

Live Tv

Leave a Reply

Your email address will not be published. Required fields are marked *

Back to top button