ಬಾಲಿವುಡ್ನ (Bollywood) ಚೆಂದದ ಜೋಡಿ ರಣ್ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಮತ್ತೆ ಸಿಹಿ ಸುದ್ದಿ ಕೊಡಲು ರೆಡಿಯಾಗಿದ್ದಾರೆ. ಮುದ್ದು ಮಗಳು ರಾಹಾ ಮನೆಗೆ ಕಾಲಿಟ್ಟ ಬೆನ್ನಲ್ಲೇ ಆಲಿಯಾ ಮತ್ತು ರಣ್ಬೀರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
`ಬ್ರಹ್ಮಾಸ್ತ್ರ’ ಸಿನಿಮಾ ಸೆಟ್ನಲ್ಲಿ ಆಲಿಯಾ ಮತ್ತು ರಣ್ಬೀರ್ಗೆ ಪ್ರೇಮಾಂಕುರವಾಗಿತ್ತು. ಸಾಕಷ್ಟು ವರ್ಷಗಳ ಡೇಟಿಂಗ್ ಏ.14, 2022ರಲ್ಲಿ ಈ ಜೋಡಿ ಹಸೆಮಣೆ ಏರಿದ್ದರು. ಮದುವೆಯಾದ 2 ತಿಂಗಳ ಅಂತರದಲ್ಲಿ ಪ್ರೆಗ್ನೆಂಟ್ ಸುದ್ದಿಯನ್ನ ಆಲಿಯಾ ಸ್ಪೆಷಲ್ ಪೋಸ್ಟ್ ಮೂಲಕ ತಿಳಿಸಿದ್ದರು. ಈಗ ಅವರಿಗೆ ಮುದ್ದಾದ ಮಗಳಿದ್ದಾಳೆ.
ಈಗ ಆಲಿಯಾ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಮತ್ತೆ 2ನೇ ಬಾರಿ ಆಲಿಯಾ ಪ್ರೆಗ್ನೆಂಟ್ (Pregnant) ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಣ್ಬೀರ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಯ ಬಗ್ಗೆ ರಣ್ಬೀರ್, ಆಲಿಯಾ ಇಬ್ಬರು ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ: ಸಾನ್ಯ ಅಯ್ಯರ್ ಬೆರಳಲ್ಲಿ ಶೆಟ್ಟಿ ವಧು ಧರಿಸುವ ರಿಂಗ್ ನೋಡಿ ಶಾಕ್ ಆದ ನೆಟ್ಟಿಗರು
View this post on Instagram
ಇನ್ನೂ ಆಲಿಯಾ ಭಟ್ ತನ್ನ ಬಟ್ಟೆ ಬ್ರ್ಯಾಂಡ್ಗಾಗಿ ಹೊಸ ಮ್ಯಾಟರ್ನಿಟಿ (Maternity) ಕಲೆಕ್ಷನ್ ಪ್ರಾರಂಭಿಸಿದ್ದಾರೆ. ಹಾಗಾಗಿ ನಟಿಯ ಪ್ರೆಗ್ನೆಂಟ್ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಈ ಜೋಡಿ ಹೇಳುವವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k