`ಬಿಗ್ ಬಾಸ್’ (Bigg Boss) ಖ್ಯಾತಿಯ ಸಾನ್ಯ ಅಯ್ಯರ್, (Sanya Iyer) ತಮ್ಮ ಸಿನಿಮಾಗಳ ವಿಚಾರಕ್ಕಿಂತ ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹದ ವಿಚಾರವಾಗಿ ಬಾರಿ ಸದ್ದು ಮಾಡ್ತಿದ್ದಾರೆ. ಸಾನ್ಯ ಮತ್ತು ರೂಪೇಶ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಹೈಲೈಟ್ ಆಗಿದ್ದರು. ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಕೂಡ ಹೊರಹೊಮ್ಮಿದ್ದರು. ಈ ಶೋ ಬಳಿಕವೂ ಸಾನ್ಯ ಮತ್ತು ರೂಪೇಶ್ ಸ್ನೇಹ ಮುಂದುವರೆದಿದೆ. ಹೀಗಿರುವಾಗ ಸಾನ್ಯ, ರೂಪೇಶ್ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದನ್ನೂ ಓದಿ: ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ಕಾಕರ್- ಶೋಯೆಬ್ ಇಬ್ರಾಹಿಂ
ಕರ್ನಾಟಕ ಕರಾವಳಿ ಭಾಗದ ವಿಶೇಷವಾಗಿ ಮಂಗಳೂರು, ದಕ್ಷಿಣ ಕನ್ನಡ ಭಾಗದಲ್ಲಿ ಶೆಟ್ಟಿ ಸಂಪ್ರದಾಯದಲ್ಲಿ (Shetty Ritual) ವಿವಾಹಿತ ಮಹಿಳೆಯರು ಈ ಉಂಗುರ ಧರಿಸುತ್ತಾರೆ. ಕರಿಮಣಿ ಸರದಂತೆಯೇ ವಿವಾಹವಾಗಿರೋ ಸೂಚನೆ ಕೊಡುವ ಆಭರಣ ಇದೀಗ ಸಾನ್ಯ ಅಯ್ಯರ್ ಬೆರಳಿನಲ್ಲಿದೆ.
View this post on Instagram
ಈಗ ಸಾನ್ಯಾ ಅವರ ಬೆರಳಲ್ಲಿ ಈ ಉಂಗುರ ಕಾಣಿಸಿಕೊಂಡಿದ್ದು, ನಟಿ ಕದ್ದುಮುಚ್ಚಿ ಮದುವೆಯಾಗಿದ್ದಾರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ ಜೊತೆಗಿನ ಸಾನ್ಯ ಸ್ನೇಹವೇ ಈ ಎಲ್ಲಾ ಸಂಶಯಗಳಿಗೆ ಕಾರಣವಾಗಿದೆ. ಸಾನ್ಯ, ರೂಪೇಶ್ ಇಬ್ಬರು ಒಬ್ಬರನೊಬ್ಬರು ಇಷ್ಟಪಡುತ್ತಿರುವ ವಿಚಾರ ನೇರವಾಗಿ ಅಲ್ಲದೇ ಇದ್ದರು. ಪರೋಕ್ಷವಾಗಿ ಬಿಗ್ ಬಾಸ್ ಮನೆಯಲ್ಲಿ (Bigg Boss House) ತಿಳಿಸಿದ್ದರು.
ಫೋಟೋಶೂಟ್‌ನಲ್ಲಿ ಸಾನ್ಯ, ಶೆಟ್ಟಿ ಸಂಪ್ರದಾಯದ ಉಂಗುರ ಧರಿಸಿರುವುದು ಹಲವು ವದಂತಿಗೆ ದಾರಿ ಮಾಡಿಕೊಟ್ಟಿದೆ. ಇನ್ನೂ ಈ ಉಂಗುರವನ್ನ ಫ್ಯಾಷನ್‌ಗಾಗಿಯೂ ಬಳಸುತ್ತಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಈ ಜೋಡಿ, ತಿಳಿಸುವವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k