ಕಲಾವಿದರಿಗೆ ಭಾಷೆಯ ಬೇಲಿಯಿಲ್ಲ ಎಂಬ ಮಾತು ಸತ್ಯ ಎಂಬುದನ್ನು ಈ ಸ್ಟಾರ್ಸ್ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಸದ್ಯ ತಾವು ಇರುವ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡಿರುವ ಕಲಾವಿದರಿಗೆ ಸಖತ್ ಡಿಮ್ಯಾಂಡ್ ಇರಬೇಕಾದರೆ ಪಕ್ಕದ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ದಕ್ಷಿಣದ ಸ್ಟಾರ್ಸ್ ಈಗ ಹಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬಾಲಿವುಡ್ ರಾಧೆ ಆಲಿಯಾ ಭಟ್ ಇತ್ತೀಚೆಗಷ್ಟೇ ಹಾಲಿವುಡ್‌ನ `ಹಾರ್ಟ್ ಆಫ್ ಸ್ಟೋನ್’ ಸಿನಿಮಾದ ಚಿತ್ರೀಕರಣ ಮುಗಿಸಿ, ಮನೆಗೆ ಮರಳಿದ್ದರು. ಬೇಬಿ ಬಂಪ್ ಲುಕ್ ಮೂಲಕ ಸಖತ್ ವೈರಲ್ ಆಗಿದ್ದರು. ಸದ್ಯ ಹಾಲಿವುಡ್‌ನಲ್ಲಿ ತಮ್ಮ ಚೊಚ್ಚಲ ಚಿತ್ರ ಮುಗಿಸಿರುವ ಆಲಿಯಾಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಅವಕಾಶಗಳಿವೆ. ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ‘ಲಡಕಿ’ ನೋಡಿ ಬೆಚ್ಚಿ ಬಿದ್ದರಂತೆ ಸೆನ್ಸಾರ್ ಟೀಮ್
ಕಾಲಿವುಡ್ ರಂಗದಲ್ಲಿ ಹೆಸರುವಾಸಿಯಾಗಿರುವ ಧನುಷ್ `ದಿ ಗ್ರೇ ಮ್ಯಾನ್’ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಧನುಷ್ ನಟನೆಯ ಚೊಚ್ಚಲ ಚಿತ್ರ ಇದೇ ಜುಲೈ 22ಕ್ಕೆ ತೆರೆಗೆ ಅಪ್ಪಳಿಸಲಿದೆ.
`ವಿಕ್ರಾಂತ್ ರೋಣ’ ಬೆಡಗಿ ರಾ ರಾ ರಕ್ಕಮ್ಮ ಕೂಡ `ಟೆಲ್ ಇಟ್ ಲೈಕ್ ಎ ವುಮೆನ್’ ಎಂಬ ಹಾಲಿವುಡ್ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ಈ ಚಿತ್ರವನ್ನು 8 ಮಹಿಳಾ ನಿರ್ದೇಶಕರು ನಿರ್ದೇಶನ ಮಾಡಿರೋದು ವಿಶೇಷ.
`ದಿ ಫ್ಯಾಮಿಲಿ ಮೆನ್ 2′ ಮತ್ತು `ಪುಷ್ಪ’ ಸಕ್ಸಸ್ ನಂತರ `ಅರೆಂಜ್‌ಮೆಂಟ್ ಆಫ್ ಲವ್’ ಚಿತ್ರದ ಮೂಲಕ ಹಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]





