ಮುಂಬೈ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಬಿಹಾರ ನೆರೆ ಸಂತ್ರಸ್ತರಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಅಕ್ಷಯ್ ಕುಮಾರ್ ಬಿಹಾರ ನೆರೆ ಸಂತ್ರಸ್ತರಿಗೆ 1 ಕೋಟಿ ರೂ. ದೇಣಿಗೆ ನೀಡಿದಲ್ಲದೇ 25 ಕುಟುಂಬಗಳಿಗೆ 4 ಲಕ್ಷ ರೂ. ಚೆಕ್ ನೀಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಕ್ಷಯ್, ಪ್ರಕೃತಿ ವಿಕೋಪ ನಾವು ಅದರ ಮುಂದೆ ಏನೂ ಅಲ್ಲ ಎಂಬುದನ್ನು ಅರಿವು ಮೂಡಿಸುತ್ತದೆ. ಯಾರಿಂದ ಏನು ಸಹಾಯ ಮಾಡಲು ಆಗುತ್ತೋ ಅವರು ಅದನ್ನು ಮಾಡಬೇಕು. ಎಲ್ಲವನ್ನು ಕಳೆದುಕೊಂಡವರಿಗೆ ಸಹಾಯ ಮಾಡುವುದಕ್ಕಿಂತ ದೊಡ್ಡದೇನು ಇಲ್ಲ. ನಮ್ಮ ಸಹಾಯದಿಂದ ಅವರು ಮತ್ತೆ ತಮ್ಮ ಜೀವನವನ್ನು ಶುರು ಮಾಡಬಹುದು ಎಂದರು. ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ- 2 ಕೋಟಿ ನೆರವು ನೀಡಲು ಮುಂದಾದ ಅಕ್ಷಯ್ ಕುಮಾರ್
ಈ ಹಿಂದೆ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಅಸ್ಸಾಂಗೆ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂ. ಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಅಕ್ಷಯ್ ಅವರನ್ನು ಪ್ರಶ್ನಿಸಿದಾಗ, “ದೇವರು ನನಗೆ ಸಾಕಷ್ಟು ಹಣವನ್ನು ನೀಡಿದ್ದಾನೆ. ನಾನು ಆ ಹಣವನ್ನು ಎಲ್ಲಿ ತೆಗೆದುಕೊಂಡು ಹೋಗಲಿ” ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇವ್ರು ನಂಗೆ ಸಾಕಷ್ಟು ಹಣ ನೀಡಿದ್ದಾನೆ, ಅದನ್ನ ಎಲ್ಲಿ ತಗೊಂಡು ಹೋಗ್ಲಿ: ಅಕ್ಷಯ್
ಇತ್ತೀಚೆಗೆ ಅಕ್ಷಯ್ ಕುಮಾರ್ ಅವರು ನಟಿಸಿದ ‘ಹೌಸ್‍ಫುಲ್ -4’ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾದ ಮೂರೇ ದಿನದಲ್ಲಿ ಬಾಕ್ಸ್ ಆಫೀಸ್‍ನಲ್ಲಿ 53.22 ಕೋಟಿ ರೂ. ಕಲೆಕ್ಷನ್ ಆಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹೊರತಾಗಿ ಕೃತಿ ಸನೋನ್, ರಿತೇಶ್ ದೇಶ್‍ಮುಖ್, ಬಾಬಿ ಡಿಯೋಲ್, ಕೃತಿ ಕರಬಂದ, ಪೂಜಾ ಹೆಗ್ಡೆ, ಬೋಮ್ಮನ್ ಇರಾನಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.