ಟಾಲಿವುಡ್ ಚಿತ್ರರಂಗದ ಭರವಸೆ ನಾಯಕ ನಟ ಅಖಿಲ್ ಅಕ್ಕಿನೇನಿ ನಟನೆಯ ಮೋಸ್ಟ್ ಅವೇಟೇಡ್ ಏಜೆಂಟ್ ಸಿನಿಮಾದ ಟೀಸರ್ ರಿವೀಲ್ ಆಗಿದ್ದು, ಯೂಟ್ಯೂಬ್ ನಲ್ಲಿ ಸೆನ್ಸೇಷನಲ್ ಸೃಷ್ಟಿಸ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಶಿವ ಕಾರ್ತಿಕೇಯನ್ ಟೀಸರ್ ಝಲಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಸಿಕ್ಸ್ ಪ್ಯಾಕ್ ಅವತಾರದಲ್ಲಿ ಸಖತ್ ಸ್ಟೈಲೀಶ್ ಲುಕ್ ನಲ್ಲಿ ಅಖಿಲ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಭರ್ಜರಿ ಆಕ್ಷನ್ ಧಮಾಕಾ ಟೀಸರ್ ನಲ್ಲಿದೆ. ಮಮ್ಮುಟ್ಟಿ ಅಮೋಘ ಅಭಿನಯ ನೋಡುಗರಿಗೆ ಥ್ರಿಲ್ ಕೊಡುತ್ತದೆ.
Advertisement
ಹೈ ಬಜೆಟ್‌ನಲ್ಲಿ ಮೂಡಿಬಂದಿರುವ ಏಜೆಂಟ್ ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಸಾಕ್ಷಿ ವೈದ್ಯ ಅಖಿಲ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸೈರಾ ನರಸಿಂಹ ರೆಡ್ಡಿ ಸಿನಿಮಾ ಖ್ಯಾತಿಯ ಸುರೇಂದ್ರ ರೆಡ್ಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್ ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್
Advertisement
Advertisement
ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಹಿಪ್ ಹಾಪ್ ತಮಿಝಾ ಸಂಗೀತ, ರಸೂಲ್ ಎಲ್ಲೂರು ಕ್ಯಾಮೆರಾ, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲಾ ಕಲಾ ನಿರ್ದೇಶನ ಚಿತ್ರಕ್ಕಿದ್ದು, ಅಜಯ್ ಸುಂಕರ, ಪತಿ ದೀಪಾ ರೆಡ್ಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈಗಾಗ್ಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಟೀಸರ್ ರಿಲೀಸ್ ಮಾಡಿ ಪ್ರಚಾರ ಕಹಳೆ ಮೊಳಗಿಸಿದೆ.