ನಂದಮೂರಿ ಬಾಲಕೃಷ್ಣ (Nandamuri Balakrishna) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೊಮ್ಮೆ ಡೈರೆಕ್ಟರ್ ಬೋಯಪತಿ ಶ್ರೀನು ಜೊತೆ ನಟ ಕೈಜೋಡಿಸಿದ್ದಾರೆ. ಇಂದು (ಅ.16) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ‘ಅಖಂಡ 2’ (Akanda 2) ಮುಹೂರ್ತ ಕಾರ್ಯಕ್ರಮ ಜರುಗಿದೆ. ಇದನ್ನೂ ಓದಿ:ಮಹಾಕಾಳಿ ಕಥೆ ಹೇಳಲು ಸಜ್ಜಾದ ‘ಹನುಮಾನ್’ ಡೈರೆಕ್ಟರ್- ಚಿತ್ರದ ಪೋಸ್ಟರ್ ರಿಲೀಸ್
ಬಾಲಯ್ಯ, ಪ್ರಾಗ್ಯಾ ನಟನೆಯ ‘ಅಖಂಡ 2’ ಚಿತ್ರದ ಮುಹೂರ್ತ ಕಾರ್ಯಕ್ರಮ ಜರುಗಿತ್ತು. ಮತ್ತೊಮ್ಮೆ ವಿಭಿನ್ನ ಕಥೆಯ ಮೂಲಕ ಬೋಯಪತಿ ಶ್ರೀನು, ಬಾಲಯ್ಯ ರೆಡಿಯಾಗಿದ್ದಾರೆ. ಸದ್ಯ ‘ಅಖಂಡ 2’ ಚಿತ್ರದ ಕುರಿತು ಅನೌನ್ಸ್‌ಮೆಂಟ್ ವಿಡಿಯೋದಲ್ಲಿ ಅದಕ್ಕೆ ತಾಂಡವ ಎಂದು ಅಡಿಬರಹ ನೀಡಲಾಗಿದೆ.
ಅಂದಹಾಗೆ, 2021ರಲ್ಲಿ ಅಖಂಡ ಸಿನಿಮಾದಲ್ಲಿ ಬಾಲಯ್ಯ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಬಾಲಯ್ಯಗೆ ಪ್ರಾಗ್ಯಾ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ ಬ್ಲ್ಯಾಕ್ ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಇದರ ಸೀಕ್ವೆಲ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.