CinemaDistrictsKarnatakaLatestMain PostSandalwood

ಬೆಂಗಳೂರು ರಸ್ತೆಯ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಖ್ಯಾತ ಗಾಯಕ ಅಜಯ್ ವಾರಿಯರ್

ಬೆಂಗಳೂರು ರಸ್ತೆಗಳು ಗುಂಡಿಗಳಿಂದಲೇ ತುಂಬಿ ಹೋಗಿವೆ. ಹೀಗಾಗಿ ನಿತ್ಯವೂ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇವೆ. ಎರಡು ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿ ಸುನೇತ್ರ ಪಂಡಿತ್, ಅವೈಜ್ಞಾನಿಕ ಹಂಪಿನಿಂದಾಗಿ ಬಿದ್ದು ಆಸ್ಪತ್ರೆ ಸೇರಿಕೊಂಡಿದ್ದರು. ಇದೀಗ ಗುಂಡಿಗೆ ಬಿದ್ದು ಕನ್ನಡದ ಖ್ಯಾತ ಗಾಯಕ ಅಜಯ್ ವಾರಿಯರ್ ಕಾಲು ಮುರಿದುಕೊಂಡಿದ್ದಾರೆ. ಸರಿಯಾಗಿ ರಸ್ತೆ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

ಕಳೆದ ಎರಡ್ಮೂರು ವಾರದಿಂದ ಬೆಂಗಳೂರಿನಲ್ಲಿ ವಿಪರೀತ ಮಳೆ ಆಗುತ್ತಿದೆ. ಹೀಗಾಗಿ ರಸ್ತೆ ತುಂಬಾ ಗುಂಡಿಗಳೇ ತುಂಬಿಕೊಂಡಿವೆ. ಅದರ ಜತೆ ಫುಟ್ ಪಾತ್ ನಲ್ಲಿರುವ ಡ್ರೈನ್ ಹೋಲ್ ಗಳನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದರಿಂದ ಅಲ್ಲಿಯೂ ಅಪಘಾತ ಸಂಭವಿಸುತ್ತಿವೆ. ಒಟ್ಟಿನಲ್ಲಿ ಬೆಂಗಳೂರು ರಸ್ತೆಗಳು ಎಂದರೆ, ಅವುಗಳು ಅಪಘಾತಕ್ಕೆ ಆಹ್ವಾನ ನೀಡುವ ಅತಿಥಿಗಳಂತಾಗಿವೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ಅಜಯ್ ವಾರಿಯರ್ ಕೇರಳಕ್ಕೆ ಹೋಗಲು ರೈಲು ನಿಲ್ದಾಣಕ್ಕೆ ಹೊರಟಿದ್ದರು. ವಿಪರೀತ ಮಳೆ ಬಂದಿತ್ತು. ಹೀಗಾಗಿ ಓಲಾ ಹಿಡಿಯಲು ಮುಖ್ಯರಸ್ತೆ ಕಡೆಗೆ ನಡೆಯ ತೊಡಗಿದರು. ಮೆಟ್ರೊ ನಿಲ್ದಾಣದ ಮುಖ್ಯರಸ್ತೆಯಲ್ಲಿ ವಿಪರೀತ ಮಳೆ ನೀರು ತುಂಬಿಕೊಂಡಿದ್ದರಿಂದ ಫುಟ್ ಪಾತ್ ಏರಿದರು. ಒಂದೆರಡು ಹೆಜ್ಜೆ ಮುಂದಿಡುತ್ತಿದ್ದಂತೆಯೇ ಅವರು ಗುಂಡಿಗೆ ಬಿದ್ದು, ಆಯಾತಪ್ಪಿ ಕೆಳಗೂ ಬಿದ್ದಿದ್ದಾರೆ. ಆಗ ಕಾಲು ಮುರಿದಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

ಗುಂಡಿಗೆ ಅಜಯ್ ಬಿದ್ದಾಗ ಎದೆಯೊರೆಗೂ ನೀರು ಬಂತಂತೆ. ಕೈಯಲ್ಲಿ ಸೂಟ್ ಕೇಸ್ ಇದ್ದ ಕಾರಣ, ಅವರು ಭಾರೀ ಅಪಘಾತದಿಂದ ತಪ್ಪಿಸಿಕೊಂಡಿದ್ದಾರಂತೆ. ಸೂಟ್ ಕೇಸ್ ಇಲ್ಲದೇ ಹೋದರೆ, ಗುಂಡಿಯಲ್ಲಿ ಮುಳುಗುವ ಅಪಾಯವಿತ್ತು ಎಂದು ಅವರು ಬರೆದುಕೊಂಡಿದ್ದಾರೆ. ಅಪಘಾತವಾದ ತಕ್ಷಣವೇ ಅವರು ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿಗೆ ಹಲವಾರು ಹೊಲಿಗೆಗಳನ್ನು ಹಾಕಲಾಗಿದೆಯಂತೆ.

Leave a Reply

Your email address will not be published.

Back to top button