ನವದೆಹಲಿ: ಕೆಲವು ದಿನಗಳ ಹಿಂದೆ ರಾಂಚಿ ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಬಾಲಕನನ್ನು ತಡೆದು, ವಿಮಾನದಲ್ಲಿ ಪ್ರಯಾಣಿಸಲು ಬಿಡದೇ ಹೋದಾಗ ದೇಶಾದ್ಯಂತ ಭಾರೀ ವಿವಾದ ಉಂಟಾಗಿತ್ತು. ಈ ಹಿನ್ನೆಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ವಿಕಲಚೇತನರಿಗಾಗಿ ಬೋರ್ಡಿಂಗ್ ಹಾಗೂ ಪ್ರಯಾಣದ ಪ್ರವೇಶವನ್ನು ಸುಧಾರಿಸಲು ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಅಂಗವೈಕಲ್ಯತೆ ಅಥವಾ ಅನಾರೋಗ್ಯದ ಆಧಾರದ ಮೇಲೆ ಜನರ ಪ್ರಯಾಣವನ್ನು ನಿರಾಕರಿಸುವಂತಿಲ್ಲ. ಒಂದು ವೇಳೆ ಅವರ ಆರೋಗ್ಯ ಹದಗೆಡಬಹುದು ಎಂದು ವಿಮಾನಯಾನ ಸಂಸ್ಥೆ ಅಭಿಪ್ರಾಯಪಟ್ಟರೆ, ಅವರನ್ನು ವೈದ್ಯರು ಖುದ್ದಾಗಿ ಪರೀಕ್ಷಿಸಬೇಕಾಗುತ್ತದೆ. ಬಳಿಕ ವೈದ್ಯರು ವ್ಯಕ್ತಿ ಪ್ರಯಾಣಿಸಲು ಯೋಗ್ಯನೇ ಅಥವಾ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿದ ಬಳಿಕ ವಿಮಾನಯಾನ ಸಂಸ್ಥೆ ನಿರ್ಧಾರ ಕೈಗೊಳ್ಳಬೇಕು ಎಂದು ಡಿಜಿಸಿಎ ಹೇಳಿದೆ. ಇದನ್ನೂ ಓದಿ: ಆ.7ರಿಂದ ಹಾರಲಿದೆ ಆಕಾಶ್ ಏರ್ – ಬೆಂಗಳೂರು ಟು ಕೊಚ್ಚಿಗೆ ಹೋಗಬಹುದು
Advertisement
Advertisement
ವಿಮಾನಯಾನ ಸಂಸ್ಥೆ ವೈದ್ಯಕೀಯ ಅಭಿಪ್ರಾಯ ಪಡೆದ ಬಳಿಕ ವ್ಯಕ್ತಿಯ ಪ್ರಯಾಣದ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಆದರೂ ನಿರ್ಧಾರ ಪ್ರಯಾಣದ ನಿರಾಕರಣೆಯಾದಲ್ಲಿ ತಕ್ಷಣವೇ ಪ್ರಯಾಣಿಕರಿಗೆ ಈ ಬಗ್ಗೆ ಲಿಖಿತವಾಗಿ ತಿಳಿಸಬೇಕು ಹಾಗೂ ಪ್ರಯಾಣದ ನಿರಾಕರಣೆಗೆ ಕಾರಣ ಏನೆಂಬುದನ್ನೂ ಉಲ್ಲೇಖಿಸಬೇಕು ಎಂದಿದೆ.
Advertisement
ಈ ವರ್ಷದ ಮೇ ತಿಂಗಳಿನಲ್ಲಿ ರಾಂಚಿ ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಬಾಲಕನನ್ನು ವಿಮಾನ ಹತ್ತದಂತೆ ಇಂಡಿಗೋ ಸಂಸ್ಥೆ ತಡೆದಿತ್ತು. ಈ ವೇಳೆ ಪ್ರತ್ಯಕ್ಷದರ್ಶಿಗಳು ಇದರ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿದ್ದರು. ವೀಡಿಯೋ ವೈರಲ್ ಆಗುತ್ತಿದ್ದಂತೆ ವಿಮಾನಯಾನ ಸಂಸ್ಥೆಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಬ್ಯಾಗ್‍ನಲ್ಲಿ ಬಾಂಬ್ ಇದೆ ವಿಮಾನದಲ್ಲಿ ರಂಪಾಟ – ಬೆಚ್ಚಿಬಿದ್ದ ಸಹಪ್ರಯಾಣಿಕರು
Advertisement
ಕೆಲವೇ ದಿನಗಳಲ್ಲಿ ಘಟನೆ ಬಗ್ಗೆ ತನಿಖೆ ನಡೆಸಿ, ಪ್ರಯಾಣಿಕರನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಡಿಜಿಸಿಎ 5 ಲಕ್ಷ ರೂ. ದಂಡವನ್ನು ವಿಧಿಸಿತ್ತು.