LatestLeading NewsMain PostNational

ಆ.7ರಿಂದ ಹಾರಲಿದೆ ಆಕಾಶ್‌ ಏರ್‌ – ಬೆಂಗಳೂರು ಟು ಕೊಚ್ಚಿಗೆ ಹೋಗಬಹುದು

Advertisements

ನವದೆಹಲಿ: ಬಿಗ್‌ ಬುಲ್‌ ಎಂದೇ ಪ್ರಸಿದ್ದಿ ಪಡೆದಿರುವ ಷೇರು ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲ ಬೆಂಬಲಿತ ‘ಆಕಾಶ ಏರ್‌ʼ ವಿಮಾನ ಸೇವೆ ಆಗಸ್ಟ್‌ 7 ರಿಂದ ಆರಂಭವಾಗಲಿದೆ.

ಪ್ರಯಾಣಿಕರು ಆಕಾಶ ಏರ್‌ ವೆಬ್‌ಸೈಟ್‌ www.akasaair.com ಅಥವಾ ಆಕಾಶ ಏರ್‌ ಆಪ್‌ ಡೌನ್‌ಲೋಡ್‌ ಮಾಡಿ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು.

ಆಗಸ್ಟ್‌ 7 ರಿಂದ ಮುಂಬೈ ಮತ್ತು ಅಹಮದಾಬಾದ್‌ ಮಧ್ಯೆ ವಾರಕ್ಕೆ 28 ಸೇವೆ ನೀಡಲಿದೆ. ಆಗಸ್ಟ್‌ 13 ರಿಂದ ಬೆಂಗಳೂರು – ಕೊಚ್ಚಿ ಮಧ್ಯೆ ವಾರಕ್ಕೆ 28 ವಿಮಾನ ಸೇವೆ ನೀಡಲಿದೆ.

ಆರಂಭದಲ್ಲಿ ಮಹಾನಗರಗಳಿಗೆ ಸೇವೆ ನೀಡಿದ ಬಳಿಕ ದೇಶದ ಟಯರ್‌ 2, ಟಯರ್‌ 3 ನಗರಗಳಿಗೂ ಸಂಪರ್ಕ ಒದಗಿಸಲಾಗುತ್ತದೆ ಎಂದು ಆಕಾಶ ಏರ್‌ ತಿಳಿಸಿದೆ.

ಪ್ರತಿ ತಿಂಗಳು 2 ಹೊಸ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನಗಳು ಕಂಪನಿಯನ್ನು ಸೇರಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಗರಗಳಿಗೆ ಸೇವೆ ನೀಡಲಾಗುವುದು ಎಂದು ಕಂಪನಿಯ ಸಿಇಒ ವಿನಯ್‌ ದುಬೆ ತಿಳಿಸಿದ್ದಾರೆ.

ಕಡಿಮೆ ಟಿಕೆಟ್‌ ದರವನ್ನು ನಿಗದಿ ಪಡಿಸುವುದಾಗಿ ಈಗಾಗಲೇ ಹೇಳಿರುವುದರಿಂದ ಆಕಾಶ ಏರ್‌ ಕಂಪನಿಯ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಆಕಾಶ ಕಂಪನಿ 72 ಬೋಯಿಂಗ್‌ 737 ಮ್ಯಾಕ್ಸ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಮಾರ್ಚ್‌ ಒಳಗೆ 18 ವಿಮಾನ ಬರಲಿದ್ದರೆ 4 ವರ್ಷದ ಒಳಗೆ 54 ವಿಮಾನ ಸಿಗಲಿದೆ.

ಈ ಹಿಂದೆ ಜೂನ್‌ನಲ್ಲಿಯೇ ಆಕಾಶ್‌ ಏರ್‌ ಕಾರ್ಯಾರಂಭ ಮಾಡುವುದಾಗಿ ಹೇಳಿತ್ತು. ಆದರೆ ತಾಂತ್ರಿಕ ಅಡಚಣೆಯಿಂದಾಗಿ ವಿಳಂಬವಾಗಿದ್ದು, ಎರಡು ತಿಂಗಳು ಮುಂದೂಡಲ್ಪಟ್ಟಿತ್ತು.

ಉದ್ಯಮಿ ರಾಕೇಶ್‌ ಜುಂಜುನ್‌ವಾಲ ಹಾಗೂ ವಿಮಾನಯಾನ ಉದ್ಯಮಿ ಆದಿತ್ಯ ಘೋಷ್‌ ಈ ಆಕಾಶ್‌ ಏರ್‌ ಕಂಪನಿಯಲ್ಲಿ ಹೂಡಿಕೆ ಮಾಡಿದ್ದು, 2021ರ ಆಗಸ್ಟ್‌ ತಿಂಗಳಲ್ಲಿ ವಿಮಾನ ಕಾರ್ಯಚರಣೆಗೆ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರ ದೊರಕಿತ್ತು. ಆದರೆ ಕೋವಿಡ್‌ನಿಂದಾಗಿ ಕಾರ್ಯಾಚರಣೆ ತಾತ್ಕಾಲಿವಾಗಿ ಮುಂದೂಡಲಾಗಿತ್ತು.

ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರ ದೊರೆತ ಬೆನ್ನಲ್ಲೇ, ಆಕಾಶ್‌ ಏರ್‌, ಏರ್‌ ಕ್ರಾಫ್ಟ್‌ ಖರೀದಿಗೆ ಬೋಯಿಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2021 ಮಾರ್ಚ್ 26 ರಂದು ಬೋಯಿಂಗ್‌ 737 ಮಾದರಿಯ 72 ವಿಮಾನಗಳ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

Live Tv

Leave a Reply

Your email address will not be published.

Back to top button