ರಷ್ಯಾ-ಉಕ್ರೇನ್‌ ಬಿಕ್ಕಟ್ಟು: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೊರಟ ಏರ್‌ ಇಂಡಿಯಾ ವಿಮಾನ

Public TV
1 Min Read
air india

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾದ ಸಂಭವನೀಯ ಆಕ್ರಮಣದ ಭೀತಿ ಹೆಚ್ಚಿದೆ. ಹೀಗಾಗಿ ಆತಂಕವಿರುವ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ಟಾಟಾ ಒಡೆತನದ ಏರ್‌ ಇಂಡಿಯಾ ಇಂದು ರಾತ್ರಿ ಉಕ್ರೇನ್‌ ತಲುಪಲಿದೆ.

ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ಉಕ್ರೇನ್‌ನಲ್ಲಿ ನೆಲೆಸಿರುವ ಭಾರತೀಯರು ಸುರಕ್ಷಿತವಾಗಿ ಹಿಂದಿರುಗಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು: ಸದ್ಗುರು ಜಗ್ಗಿ ವಾಸುದೇವ್

russia ukraine

ಏರ್‌ ಇಂಡಿಯಾದ ಎಐ-1946 ಮೊದಲ ವಿಶೇಷ ವಿಮಾನದಲ್ಲಿ ಭಾರತೀಯ ಪ್ರಜೆಗಳು ಇಂದು ರಾತ್ರಿ ತವರು ದೇಶಕ್ಕೆ ಮರಳಲಿದ್ದಾರೆ ಎಂದು ಏರ್‌ಲೈನ್‌ ಮೂಲಗಳು ತಿಳಿಸಿವೆ. ಏರ್‌ ಇಂಡಿಯಾ ಫೆರ್ರಿ ವಿಮಾನವು ಸೋಮವಾರ ಉಕ್ರೇನ್‌ನಿಂದ ಭಾರತೀಯರನ್ನು ವಾಪಸ್‌ ಕರೆತಂದಿತ್ತು. ಏರ್‌ ಇಂಡಿಯಾದ ಮೂರು ವಿಮಾನಗಳು ಈ ಕಾರ್ಯಾಚರಣೆಯಲ್ಲಿವೆ.

ಏರ್‌ ಇಂಡಿಯಾದ ಮೂರು ವಿಮಾನಗಳು ಫೆ.22, 24 ಮತ್ತು 26ರಂದು ಭಾರತ ಮತ್ತು ಉಕ್ರೇನ್‌ ನಡುವೆ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಲಾಗಿದೆ. ಉಕ್ರೇನ್‌ಗೆ ವಿಶೇಷ ಕಾರ್ಯಾಚರಣೆಯ ಭಾಗವಾಗಿ ದೆಹಲಿಯಿಂದ ಬೋಯಿಂಗ್‌ ಡ್ರೀಮ್‌ಲೈನರ್‌ ಎಐ-1947 ವಿಮಾನವು ಟೇಕ್‌ ಆಫ್‌ ಆಗಿದೆ. ಇದು 200ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ

vladimir putin

ರಷ್ಯಾದೊಂದಿಗೆ ಉಕ್ರೇನ್ ಗಡಿಯಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಸಭೆಯಲ್ಲಿ ಪರಸ್ಪರ ಸೌಹಾರ್ದಯುತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕಡೆಯವರು ಅತ್ಯಂತ ಸಂಯಮ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *