ಮುಂಬೈ: ಟಾಟಾ ಸನ್ಸ್ (Tata Sons) ಒಡೆತನದ ಏರ್ ಇಂಡಿಯಾ 500 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದಾಗಿದೆ.
430 ಸಣ್ಣ ಮತ್ತು 30 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ (Air India) ಮುಂದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ವಿಮಾನಗಳು ಏರ್ ಇಂಡಿಯಾವನ್ನು ಸೇರಲಿದೆ.
Advertisement
ಈ ಹಿಂದೆ ಅಮೆರಿಕನ್ ಏರ್‌ಲೈನ್ಸ್ (American Airlines) 460 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ದಾಖಲೆ ಮಾಡಿತ್ತು. 2019 ರಲ್ಲಿ ಇಂಡಿಗೋ (Indigo) 300 ವಿಮಾನ ಖರೀದಿಗೆ ಆರ್ಡರ್ ಮಾಡಿತ್ತು.
Advertisement
Advertisement
ಯಾವ ವಿಮಾನಗಳು?
ಯುರೋಪ್ ಮೂಲದ ಏರ್‌ಬಸ್ (Airbus) ಕಂಪನಿ ಜೊತೆ A320 ನಿಯೋ 240 ವಿಮಾನಗಳು ಮತ್ತು A350 40 ವಿಮಾನ ಖರೀದಿಗೆ ಆರ್ಡರ್ ನೀಡಿದೆ. ಅಮೆರಿಕದ ಬೋಯಿಂಗ್ (Boeing) ಬಳಿ 737 ಮ್ಯಾಕ್ಸ್ 190 ವಿಮಾನಗಳು, 787 ಡ್ರೀಮ್‌ಲೈನರ್ 20 ಮತ್ತು 777x 10 ವಿಮಾನಗಳನ್ನು ಖರೀದಿ ಮಾಡಲಿದೆ. ಇದನ್ನೂ ಓದಿ: ಏರ್‌ಬಸ್ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ
Advertisement
ಮುಂದಿನ ವಾರ ಅಧಿಕೃತ ಪ್ರಕಟಣೆ ಘೋಷಣೆಯಾಗುವ ಸಾಧ್ಯತೆ ಇದೆ. 150 ಶತಕೋಟಿ ಡಾಲರ್ ಮೌಲ್ಯದ ಖರೀದಿ ಒಪ್ಪಂದ ನಡೆದಿದ್ದರೂ ಏರ್ ಇಂಡಿಯಾ ಹಲವು ರಿಯಾಯಿತಿಗಳನ್ನು ಪಡೆಯಲಿದೆ ಎಂದು ವರದಿಯಾಗಿದೆ.
ಇಂದು ಏರ್‌ಬಸ್ ಮತ್ತು ಏರ್ ಇಂಡಿಯಾ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಮತ್ತು ಏರ್‌ಬಸ್ ಮುಖ್ಯ ವಾಣಿಜ್ಯ ಅಧಿಕಾರಿ ಕ್ರಿಶ್ಚಿಯನ್ ಸ್ಕೆರೆರ್ ಭಾಗಿಯಾಗಿ ಆರ್ಡರ್ ಅಂತಿಮಗೊಳಿಸಿದ್ದಾರೆ. ಜನವರಿ 29 ರಂದು ಟಾಟಾ ಸನ್ಸ್‌ನ ಪ್ರಧಾನ ಕಛೇರಿಯಾದ ಬಾಂಬೆ ಹೌಸ್‌ನಲ್ಲಿ ಬೋಯಿಂಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಕೋವಿಡ್ ಬಳಿಕ ವಿಮಾನಯಾನ ಕ್ಷೇತ್ರ ನಿರೀಕ್ಷೆಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಏರ್ ಇಂಡಿಯಾ ಮೊದಲೇ ಆರ್ಡರ್ ಬುಕ್ಕಿಂಗ್ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು 30% ಗೆ ಹೆಚ್ಚಿಸುವ ಗುರಿಯನ್ನು ಏರ್ ಇಂಡಿಯಾ ಹಾಕಿಕೊಂಡಿದೆ. 2024ರ ಅಂತ್ಯದ ವೇಳೆಗೆ ಏರ್ ಇಂಡಿಯಾಗೆ 50 ಹೊಸ ವಿಮಾನಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.
ಇಂಡಿಗೋಗೆ ಸ್ಪರ್ಧೆ ನೀಡಲು 5-6 ಗಂಟೆಯ ಒಳಗಡೆ ದೇಶದ ವಿವಿಧ ಸ್ಥಳಗಳನ್ನು ತಲುಪಲು ಸಣ್ಣ ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಮುಂದಾಗಿದೆ. ಅಮೆರಿಕ, ಯುರೋಪ್ ದೇಶಗಳಿಗೆ ಸೇವೆ ನೀಡಲು ದೊಡ್ಡ ಗಾತ್ರ ವಿಮಾನಗಳನ್ನು ಖರೀದಿಸುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k