ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ತನ್ನ ಖಾಸಗಿ ವಾರ್ಡ್ ಕೊಠಡಿಗಳ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದರಿಂದ ಶೇ.5 ರಷ್ಟು ಜಿಎಸ್‌ಟಿ ಹೆಚ್ಚಿಸಲಿದ್ದು ದಿನದ ಕೊಠಡಿ ಶುಲ್ಕ 5 ಸಾವಿರಕ್ಕೂ ಹೆಚ್ಚಾಗಿದೆ ಎಂದು ಹೇಳಿದೆ.
Advertisement
ಸರ್ಕಾರದ ಅಧಿಸೂಚನೆಯ ಪ್ರಕಾರ, 5 ಸಾವಿರಕ್ಕೂ ಅಧಿಕ ಶುಲ್ಕ ವಿಧಿಸುವ ಕೊಠಡಿಗಳ ಮೇಲೆ ಶೇ.5 ರಷ್ಟು ಜಿಎಸ್‌ಟಿ ಸುಂಕ ಬೀಳುತ್ತಿದೆ. ಹಾಗಾಗಿ ಆಸ್ಪತ್ರೆಯ ಎ-ಕ್ಲಾಸ್ ಕೊಠಡಿಗಳ (ಡೀಲಕ್ಸ್ ರೂಂ) ಶುಲ್ಕವನ್ನು ದಿನಕ್ಕೆ 6,200 ರೂ.ಗಳಿಗೆ ಹೆಚ್ಚಿಸಲಾಗಿದೆ. ಇಲ್ಲಿಗೆ ದಾಖಲಾಗುವ ರೋಗಿಗಳು 10 ದಿನಗಳ ಮುನ್ನವೇ 66 ಸಾವಿರ ರೂ.ಗಳ ಮುಂಗಡ ಹಣ ಪಾವತಿಸಬೇಕು. ಇದರಲ್ಲೇ ಶೇ.5 ರಷ್ಟು ಜಿಎಸ್‌ಟಿ ಹಾಗೂ ಆಹಾರ ಶುಲ್ಕಗಳೂ ಒಳಗೊಂಡಿರಲಿದೆ ಎಂದು ವೈದ್ಯಕೀಯ ಅಧೀಕ್ಷಕ ಹಾಗೂ ಆಸ್ಪತ್ರೆಯ ಆರ್ಥಿಕ ಸಲಹೆಗಾರ ನರೀಂದರ್ ಭಾಟಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಲಯಾಳಂ ಸ್ಟಾರ್ ನಟನ ಚಿತ್ರಕ್ಕೆ ಕನ್ನಡಿಗ ರವಿ ಬಸ್ರೂರು ಸಂಗೀತ
Advertisement
Advertisement
ಜಿಎಸ್‌ಟಿ ಕೌನ್ಸಿಲ್ ನಿರ್ಧಾರದಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿ ರೋಗಿಗಳಿಗೂ ಎ-ಕ್ಲಾಸ್ ಕೊಠಡಿಗೆ 6 ಸಾವಿರ ರೂ. ಮತ್ತು ಜಿಎಸ್‌ಟಿ ಶೇ.5 ಸೇರಿ 6,300 ರೂ. ಬಾಡಿಗೆ ವಿಧಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Bundelkhand Expressway; ಒಂದು ವಾರಕ್ಕೇ ಮಳೆಗೆ ಗುಂಡಿ ಬಿತ್ತು ಪ್ರಧಾನಿ ಮೋದಿ ಉದ್ಘಾಟಿಸಿದ್ದ ರಸ್ತೆ
Advertisement
ಜಿಎಸ್‌ಟಿ ಮಂಡಳಿಯು ಐಸಿಯು, ಹೃದಯ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಮಕ್ಕಳ ಐಸಿಯು ಘಟಕಗಳನ್ನು ಹೊರತುಪಡಿಸಿ ಉಳಿದೆಲ್ಲ ಕೊಠಡಿಗಳಿಗೆ ಹಾಗೂ ಕ್ಲಿನಿಕಲ್ ಸಂಸ್ಥೆಗಳು ಒದಗಿಸುವ ಸೇವೆಗಳಿಗೆ, ದಿನಕ್ಕೆ 5 ಸಾವಿರಕ್ಕಿಂತ ಹೆಚ್ಚು ಬಾಡಿಗೆ ವಿಧಿಸುವ ಕೊಠಡಿಗಳಿಗೆ ಜಿಎಸ್‌ಟಿ ವಿಧಿಸಲಾಗಿದೆ. ಇದರಿಂದ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗಿದೆ ಎಂದು ಭಾಟಿಯಾ ತಿಳಿಸಿದ್ದಾರೆ.