ಕೆಜಿಎಫ್ 2 ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರು ಅವರಿಗೆ ಸೌತ್ ಸಿನಿಮಾ ರಂಗದಲ್ಲಿ ಮತ್ತು ಬಾಲಿವುಡ್ ಸಿನಿಮಾ ರಂಗದಲ್ಲೂ ಬೇಡಿಕೆ ಹೆಚ್ಚಾಗಿದೆ. ಮೊನ್ನೆಯಷ್ಟೇ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಸುದ್ದಿ ಆಗಿತ್ತು. ಇದೀಗ ಮಲಯಾಳಂ ಸ್ಟಾರ್ ನಟನ ಚಿತ್ರಕ್ಕೂ ಇವರೇ ಸಂಗೀತ ಸಂಯೋಜನೆ ಮಾಡಲಿದ್ದಾರಂತೆ.
Advertisement
ಮಲಯಾಳಂ ಸಿನಿಮಾ ರಂಗಕ್ಕೆ ಇವರ ಮೊದಲ ಎಂಟ್ರಿ ಏನಲ್ಲವಾದರೂ, ಇದೇ ಮೊದಲ ಬಾರಿಗೆ ಸ್ಟಾರ್ ನಟನ ಚಿತ್ರಕ್ಕೆ ಸಂಗೀತ ಮಾಡುತ್ತಿರುವುದು ವಿಶೇಷ. ಈ ಹಿಂದೆ ಮಡ್ಡಿ ಎಂಬ ಮಲಯಾಳಂ ಸಿನಿಮಾಗೆ ರವಿ ಸಂಗೀತ ನೀಡಿದ್ದರು. ಇದೀಗ ಪೃಥ್ವಿ ಸುಕುಮಾರನ್ ನಟಿಸುತ್ತಿರುವ, ಪೌರಾಣಿಕ ಚಿತ್ರ ಕಾಲಿಯನ್ ಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇದೊಂದು ಹೊಸ ಬಗೆಯ ಸಿನಿಮಾವಾಗಿದ್ದರಿಂದ ಇವರನ್ನು ಅವಕಾಶ ಹುಡುಕಿಕೊಂಡು ಬಂದಿದೆಯಂತೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ
Advertisement
Advertisement
ಕೆಜಿಎಫ್ 2 ವಿಶ್ವ ಮಟ್ಟದಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಈ ಸಿನಿಮಾದ ಬಹುತೇಕ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಎಡಿಟರ್, ಸಿನಿಮಾಟೋಗ್ರಾಫರ್, ಕಲಾ ನಿರ್ದೇಶಕರು ಸೇರಿದಂತೆ ಅನೇಕರಿಗೆ ಭಾರೀ ಬಜೆಟ್ ಸಿನಿಮಾಗಳಿಂದ ಆಫರ್ ಬರುತ್ತಿವೆ. ಅದರಲ್ಲೂ ರವಿ ಬಸ್ರೂರು ಭಾರೀ ವೇಗದಲ್ಲಿ ಬೇಡಿಕೆಯನ್ನು ಗಳಿಸುತ್ತಿದ್ದಾರೆ. ಇದೀಗ ಮಲಯಾಳಂ ಸಿನಿಮಾ ರಂಗದಲ್ಲೂ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ.