ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru Lakes) ಕೆರೆಗಳ ನಾಡು ಅಂತಾನೇ ಫೇಮಸ್. ಸುಮಾರು 400ಕ್ಕೂ ಹೆಚ್ಚು ಕೆರೆಗಳಿವೆ. ಬೆಂಗಳೂರಿನ ಕೆರೆಗಳನ್ನ ಒತ್ತುವರಿ ಮಾಡಿ ಕಟ್ಟಡಗಳನ್ನ ಕಟ್ಟಿ ಕಾಂಕ್ರಿಟ್ ನಾಡಾಗಿ ಮಾಡಿದ್ದಾರೆ. ಕಾರ್ಖಾನೆ ಮತ್ತು ಫ್ಯಾಕ್ಟೆರಿಗಳಿಂದ ಮಾಲಿನ್ಯ ಆಗ್ತಾ ಇದೆ. ಆದರೆ ಈಗ ಇದೆ ಫ್ಯಾಕ್ಟರಿಗಳಿಂದ ಮಾಲಿನ್ಯ ಆಗುತ್ತಿದೆ ಅಂತಾ ಮಾಲಿನ್ಯ ನಿಯಂತ್ರಣ ಮಂಡಳಿ ಸಂಶೋಧನೆ ಮಾಡಿದೆ.
Advertisement
ಹೌದು. ಸುಮಾರು 70ಕ್ಕೂ ಹೆಚ್ಚು ಕೆರೆಗಳು ಮಾಲಿನ್ಯ ಆಗಿರೋದು ಬಯಲಾಗಿದೆ. ಜನ ನೇರವಾಗಿ ಕುಡಿಯಲು ಮತ್ತು ಸ್ನಾನ ಮಾಡಲು ಸಾಧ್ಯವಿಲ್ಲ ಅಂತಾ ಹೇಳ್ತಾ ಇದ್ದಾರೆ. ಕಳೆದ ಡಿಸೆಂಬರ್ ನಿಂದ ಜನವರಿವರೆಗೂ ನಡೆಸಿದ ಸಂಶೋಧನೆಯಲ್ಲಿ ಕಲುಷಿತ ಆಗಿದೆ ಅಂತಾ ವರದಿಯಾಗಿದೆ.
Advertisement
Advertisement
ಬಿಬಿಎಂಪಿ (BBMP) ವ್ಯಾಪ್ತಿಯ 8 ವಲಯಗಳಲ್ಲೂ ಕೆರೆಗಳು ಕಲುಷಿತ ಆಗಿದೆ ಅಂದರೆ ಆತಂಕ ಪಡುವಂತಹ ವಿಚಾರವಾಗಿದೆ. ಡಿ ಗ್ರೇಡ್‍ನಲ್ಲಿ ಇದ್ದಂತಹ ಕೆರೆಗಳು ಈ ಗ್ರೇಡ್‍ಗೆ ಕುಸಿದಿವೆ ಪ್ರತಿ ವರ್ಷಕ್ಕೆ ಈ ರೀತಿ ಮಾಲಿನ್ಯ ಆಗ್ತಾ ಇವೆ. ಮಾಲಿನ್ಯತೆಗೆ ಕಾರಣ ಆಗಿರೋ ಫ್ಯಾಕ್ಟರಿಗಳ ವಿರುದ್ಧ ಕ್ರಮ ಜರುಗಿಸಿದ್ದೇವೆ ಅಂತಾ ಇದ್ದಾರೆ. ಇದನ್ನೂ ಓದಿ: ಕಾವೇರಿ, ಕಬಿನಿ, ಕಾಳಿ ಸೇರಿ ರಾಜ್ಯದ 17 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ- ವರದಿ ಸ್ಫೋಟ
Advertisement
84 ಕೆರೆಗಳ ಪೈಕಿ ಟಾಪ್ 15 ನಲ್ಲಿ ಕಲುಷಿತ ಆಗಿರೋ ಕೆರೆಗಳ ಪಟ್ಟಿ ಇಲ್ಲಿದೆ: ಬೆಳ್ಳಂದೂರು ಕೆರೆ, ಹುಳಿಮಾವು ಕೆರೆ, ಕೆಂಪಾಬುದಿ ಕೆರೆ, ಉತ್ತರಹಳ್ಳಿ ಕೆರೆ, ಹೊಸಕೆರೆ ಹಳ್ಳಿ ಕೆರೆ, ಪರಪ್ಪನ ಅಗ್ರಹಾರ ಕೆರೆ, ಕಸವನಹಳ್ಳಿ ಕೆರೆ, ವರ್ತೂರು ಕೆರೆ, ಕಾಳೇನ ಅಗ್ರಹಾರ ಕೆರೆ, ಸಾರಕ್ಕಿ ಕೆರೆ, ಹಲಸೂರು ಕೆರೆ, ಸ್ಯಾಂಕಿ ಕೆರೆ, ಪುಟ್ಟೇನಹಳ್ಳಿ ಕೆರೆ, ವೈಟ್ ಫೀಲ್ಡ್ ಕೆರೆ, ಲಾಲ್ ಬಾಗ್ ಟ್ಯಾಂಕ್.
ಒಟ್ಟಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಶೋಧನೆಯಲ್ಲಿ ಕೆರೆಗಳು ಕಲುಷಿತ ಆಗಿರೋದು ಆತಂಕ ಪಡುವ ವಿಚಾರ. ಕಲುಷಿತ ನೀರು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಮಾಲಿನ್ಯತೆ ತಡೆಗಟ್ಟಲು ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಯಾವ ರೀತಿ ಕ್ರಮ ಜರುಗಿಸುತ್ತೋ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k