ಕಾವೇರಿ, ಕಬಿನಿ, ಕಾಳಿ ಸೇರಿ ರಾಜ್ಯದ 17 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ- ವರದಿ ಸ್ಫೋಟ

– ನದಿ ಹರಿವಿನ ನೀರಿನ ಪರೀಕ್ಷೇಯಲ್ಲಿ ಕಲುಷಿತ
– ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಬಹಿರಂಗ
ಬೆಂಗಳೂರು: ಆಧುನಿಕತೆ ಬೆಳೆದಂತೆ ಪರಿಸರದಲ್ಲಿ ಮಾಲಿನ್ಯ (Pollution) ಪ್ರಮಾಣ ಕೂಡ ಹೆಚ್ಚಾಗ್ತಾ ಇದೆ. ಅದರಲ್ಲೂ ಕುಡಿಯುವ ನೀರು ಹಾಗೂ ಗಾಳಿಯಲ್ಲಿ ಕಲುಷಿತ ಪ್ರಮಾಣ ಹೆಚ್ಚುತ್ತಲೇ ಇದೆ. ಇದಕ್ಕೆ ನಿದರ್ಶನ ಎನ್ನುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ವರದಿಯೊಂದನ್ನ ಬಿಡುಗಡೆ ಮಾಡಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿಯಲ್ಲಿ ರಾಜ್ಯದ ಪ್ರಮುಖ 17 ನದಿಗಳು ಕಲುಷಿತ ಆಗಿರೋದು ಬಯಲಾಗಿದೆ. ಈ ವರ್ಷ ಮಾಲಿನ್ಯ ನಿಯಂತ್ರಣ ಮಂಡಳಿ ನದಿಗಳ (Rivers) ಹರಿವಿನಲ್ಲಿ ನೀರನ್ನ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 15 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ ಅಂತಾ ವರದಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಎಂಪಿ ಟಿಕೆಟ್ ಏಕೆ ನಿರೀಕ್ಷಿಸಬಾರದು- ಕಮಲ್ ಹಾಸನ್ ಪ್ರಶ್ನೆ
ಯಾವೆಲ್ಲಾ ನದಿ ನೀರು ಯೋಗ್ಯವಲ್ಲ?: ಅರ್ಕಾವತಿ ನದಿ, ಲಕ್ಷ್ಮಣ ತೀರ್ಥ ನದಿ, ಮಲಪ್ರಭಾ ನದಿ, ತುಂಗಭದ್ರಾ ನದಿ, ಭದ್ರಾ ನದಿ, ಕಾವೇರಿ ನದಿ (Cauvery), ಕಬಿನಿ ನದಿ (Kabini), ಕಗಿನಿ ನದಿ, ಕಾಳಿ ನದಿ, ಕೃಷ್ಣ ನದಿ, ಅಸಂಗಿ ಕೃಷ್ಣ ನದಿ, ಶಿಂಷಾ ನದಿ, ಭೀಮಾ ನದಿ, ನೇತಾವತಿ ನದಿ, ಕುಮಾರಧಾರ ನದಿ, ತುಂಗಾ ನದಿ, ಯಗಚಿ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಮಹಾನಗರಗಳು ಹಾಗೂ ನಗರಗಳಲ್ಲಿನ ಕಂಪನಿಗಳು, ಕಾರ್ಖಾನೆಗಳು (Chemical Factory) ಹೊರಸೂಸುವ ಕೆಮಿಕಲ್ ಹಾಗೂ ತ್ಯಾಜ್ಯದಿಂದಳೇ ನೀರು ಕಲುಷಿತ ಆಗ್ತಿದೆ ಎಂದು ಹೇಳಲಾಗ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಾಲಿನ್ಯ ಉಂಟಾಗುವ ಜಾಗದಲ್ಲಿ ಪ್ಲಾಂಟ್‌ಗಳನ್ನ ರಚನೆ ಮಾಡಿ ನಿಯಂತ್ರಣ ಮಾಡದೇ ಇರೋದು ಮಾಲಿನ್ಯಕ್ಕೆ ಕಾರಣವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತು ನಿಯಂತ್ರಣ ಮಾಡಬೇಕು. ಮಾನಿಟರ್‌ಗೆ ಹೆಚ್ಚು ಸಿಬ್ಬಂದಿ ನೇಮಕ ಮಾಡಿ ಮಾನಿಟರ್ ಮೂಲಕ ಮಾಲಿನ್ಯ ತಡೆಗಟ್ಟಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.
ಒಟ್ಟಾರೆ 17 ನದಿಗಳು ಕಲುಷಿತ ಆಗಿರೋದು ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆಯಲ್ಲಿ ಬಯಲಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಡಾರ್ಕ್‌ನೆಟ್ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k